September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

(ಸೆ.17) ನಾಳೆಯಿಂದ ಗಡಾಯಿಕಲ್ಲು ಚಾರಣಕ್ಕೆ ಅವಕಾಶ

ಬೆಳ್ತಂಗಡಿ: ತಾಲೂಕಿನ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲು ಚಾರಣಕ್ಕೆ ಪ್ರವಾಸಿಗರಿಗೆ ಸೆ.17 ರಿಂದ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಮಳೆಗಾಲದಲ್ಲಿ ಕಲ್ಲುಗಳು ಜಾರುವ ಕಾರಣ ಪ್ರವೇಶ ನಿಷೇಧ ಹೇರಲಾಗಿತ್ತು ಬೇಸಿಗೆ ಕಾಲದಲ್ಲಿ ಬೆಂಕಿ ಪ್ರಕರಣ, ಕಾಡ್ಗಿಚ್ಚು ಇತ್ಯಾದಿ ಅನಾಹುತಗಳು ನಡೆಯದಂತೆ ಹಾಗೂ ಹುಲಿಗಣತಿ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಜೂ.೧ ರಿಂದ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಂಡು ಮೊದಲ ವಾರಾಂತ್ಯದ ರವಿವಾರ ಜೂ.7ರಂದು1000ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ವೀಕ್ಷಿಸಿ ಇತಿಹಾಸ ನಿರ್ಮಾಣವಾಗಿತ್ತು. ಜೂ. 1ರಿಂದ ಪ್ರವಾಸಿಗರ ವಿಕ್ಷಣೇಗೆ ಮುಕ್ತಗೊಂಡಿದ್ದ ಗಡಾಯಿಕಲ್ಲಿನಲ್ಲಿ ಜೂ.14ಕ್ಕೆ ಮತ್ತೊಮ್ಮೆ ಪ್ರವಾಸಿಗರ ವಿಕ್ಷಣಗೆ ನಿಷೇಧ ಹೇರಲಾಗಿತ್ತು ಇದಾದ ಬಳಿಕ ನಿರಂತರ ಜೋರು ಮಳೆ ಸುರಿದ ಕಾರಣ ಜು.8 ರಿಂದ ಮತ್ತೆ ಪ್ರವೇಶಕ್ಕೆ ನಿಷೇಧ ಹೇರಿ ಮುಂದುವರಿದಿದ್ದು ನಾಳೆಯಿಂದ ವೀಕ್ಷಣೆಗೆ ತೆರೆದುಕೊಂಡಿದೆ. ಒಂದು ದಿನದಲ್ಲಿ 500 ಮಂದಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪೂರ್ವ ನೋಂದವಣಿ ಕಡ್ಡಾಯವಾಗಿದೆ.

Related posts

ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಿಂದ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಚೆಕ್ ವಿತರಣೆ

Suddi Udaya

ನೆರಿಯ: ಪುಟ್ಟ ಮಗುವಿನ ಚಿಕಿತ್ಸೆಗೆ ನೆರವಾಗಿ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶ್ರೀ ರಾಘವೇಂದ್ರ ಮಠದ ಪರಿಸರ ಸ್ವಚ್ಛತಾ ಕಾರ್ಯ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ- 2 ರ ಫಲಿತಾಂಶ : ವಾಣಿ ಪ.ಪೂ. ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ವಿಭಾ ಕೆ.ಆರ್ ರಾಜ್ಯಕ್ಕೆ 6ನೇ ಸ್ಥಾನ

Suddi Udaya

ಕುಕ್ಕೇಡಿ: ಫಂಡಿಜೆ ಸ.ಹಿ. ಪ್ರಾಥಮಿಕ ಶಾಲೆಯಲ್ಲಿ ಅಜ್ಜ-ಅಜ್ಜಿಯಂದಿರ ದಿನ ಆಚರಣೆ

Suddi Udaya
error: Content is protected !!