September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ ಕರಿಯ ಮೊಗೇರ ಕುಟುಂಬಕ್ಕೆ ಜಯಪ್ರಕಾಶ ಕನ್ಯಾಡಿಯವರಿಂದ ಮಾಸಿಕ ಅಕ್ಕಿ ವಾಗ್ದಾನ; ಆರಂಭಿಕ 50 ಕೆ.ಜಿ ಅಕ್ಕಿ ಹಸ್ತಾಂತರ

ಬೆಳ್ತಂಗಡಿ; ಲಾಯಿಲ ಗ್ರಾಮದ ಪ್ರಗತಿನಗರ ನಿವಾಸಿ ಕರಿಯ ಮೊಗೇರ ಕುಟುಂಬದ ಸಂಕಷ್ಟ ಮನಗಂಡು
ದ.ಕ ಜಿಲ್ಲಾ ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿಯವರು ಅವರಿಗೆ ಮಾಸಿಕ ಅಕ್ಕಿ ನೀಡಲು ನಿರ್ಧರಿಸಿದ್ದು, ಆರಂಭಿಕ ಮಾಸದ 50 ಕೆ.ಜಿ ಅಕ್ಕಿಯನ್ನು ಸೆ.15 ರಂದು ಕುಟುಂಬಕ್ಕೆ ಹಸ್ತಾಂತರಿಸಿದರು.

ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ ಅವರ ಮನವಿಗೆ ಸ್ಪಂದಿಸಿದ ಜಯಪ್ರಕಾಶ್ ಅವರು ಈ ಕೊಡುಗೆ ನೀಡಿದರು.

ಜಯಪ್ರಕಾಶ್ ಕನ್ಯಾಡಿಯವರು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದು, ಈಗಾಗಲೇ
ವಿವಿಧ ಸಂಘಟನೆಗಳ ಮೂಲಕ ಅನಾರೋಗ್ಯ ಪೀಡಿತರಿಗೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಹಾಗೂ ಅಶಕ್ತರಿಗೆ ಆಶ್ರಯ ಕಲ್ಪಿಸುವಲ್ಲಿ ಮಾದರಿಯಾಗಿ ಶ್ರಮಿಸುತ್ತಿದ್ದಾರೆ‌. ತನ್ನ ಪುತ್ರ ಮಧ್ವೀರ್ ಅವರ ಹೆಸರಿನಲ್ಲಿ ಈ ಸೇವೆ ಮಾಡುತ್ತಿದ್ದಾರೆ‌. ಇದಕ್ಕೆ ಅವರ ಪತ್ನಿ ಕವಿತಾ ಜೈನ್‌ಪೇಟೆ ಬೆಂಬಲವಾಗಿದ್ದಾರೆ.

Related posts

ವಲಯಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ಹಲವಾರು ಪ್ರಶಸ್ತಿ

Suddi Udaya

ಜಿತೇಶ್‌ನ ಮನೆಗೆ ಭೇಟಿ ನೀಡಿದ ಕಿರಣ್‌ಚಂದ್ರ ಪುಷ್ಪಗಿರಿ

Suddi Udaya

ಎಸ್.ಡಿ.ಎಂ. ಡಿ.ಎಡ್. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ವಿಷಯವಾರು ಸಂಘಗಳು ಮತ್ತು ಸ್ವಾಗತ ಕಾರ್ಯಕ್ರಮಗಳ ಉದ್ಘಾಟನೆ

Suddi Udaya

ನಾಳೆ(ಅ.31) ಬೆಳ್ತಂಗಡಿಯಲ್ಲಿ ಬಿಜೆಪಿ ಯುವಮೋರ್ಚಾದಿಂದ ದೀಪಾವಳಿ ದೋಸೆ ಹಬ್ಬ: ಗೋರಕ್ಷಕ ಪುನೀತ್ ಕೆರೆಹಳ್ಳಿ ಭಾಗಿ

Suddi Udaya

ಪುದುವೆಟ್ಟು ಬಾಯಿತ್ಯಾರು ವೀರಪ್ಪ ಗೌಡರಿಗೆ ಧರ್ಮಸ್ಥಳದಿಂದ ಮಾಶಾಸನ ಮಂಜೂರಾತಿ ಪತ್ರ ವಿತರಣೆ

Suddi Udaya

ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಮಂಗಳೂರು ವಿಭಾಗದ ವತಿಯಿಂದ ಪರಿಸರ ಪ್ರೇಮಿ ಸಚಿನ್ ಭಿಡೆ ಮುಂಡಾಜೆ ರವರಿಗೆ ಸನ್ಮಾನ

Suddi Udaya
error: Content is protected !!