ಶಿಶಿಲ ಗ್ರಾಮದ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಶಿಶಿಲ ಆರೋಗ್ಯ ಉಪ ಕೇಂದ್ರದಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಸಾರ್ವಜನಿಕರು ಹಾಗೂ ಆರೋಗ್ಯ ಸಿಬ್ಬಂದಿಗೆ ತೊಂದರೆಯಾಗುತ್ತಿದೆ ಎಂದು ಶಿಶಿಲ ಅಡ್ಡಹಳ್ಳ ಫ್ರೆಂಡ್ಸ್ ನಿಂದ ಶಿಶಿಲ ಗ್ರಾ.ಪಂ. ಆಡಳಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಆರೋಗ್ಯ ಉಪ ಕೇಂದ್ರದ ಸೀಲಿಂಗ್ ಹಾಳಾಗಿ ಕುಸಿಯುವ ಸ್ಥಿತಿಯಲ್ಲಿದ್ದು, ತುರ್ತು ದುರಸ್ಥಿ ಅಗತ್ಯವಿದೆ. ಅಲ್ಲದೆ, ಫ್ಯಾನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆರೋಗ್ಯ ಕೇಂದ್ರದಲ್ಲಿರುವ ಶೌಚಾಲಯದ ವ್ಯವಸ್ಥೆಯೂ ಸಮರ್ಪಕವಾಗಿಲ್ಲದೆ, ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ.
ಆದ್ದರಿಂದ ಗ್ರಾಮ ಪಂಚಾಯತ್ ವತಿಯಿಂದ ಸ್ಥಳ ಪರಿಶೀಲನೆ ನಡೆಸಿ, ಆರೋಗ್ಯ ಉಪ ಕೇಂದ್ರದ ಸೀಲಿಂಗ್ ದುರಸ್ತಿ, ಫ್ಯಾನ್ ಸರಿಪಡಿಸುವುದು ಹಾಗೂ ಶೌಚಾಲಯವನ್ನು ಸ್ವಚ್ಛಗೊಳಿಸಿ ಅಗತ್ಯ ದುರಸ್ತಿ ಮಾಡಿ ಬಳಕೆಗೆ ಯೋಗ್ಯವಾಗುವಂತೆ ಮಾಡಿಕೊಡಲು ತುರ್ತು ಕ್ರಮ ಕೈಗೊಳ್ಳಬೇಕಾಗಿ ಶಿಶಿಲ ಗ್ರಾ.ಪಂ. ಆಡಳಿತ ಅಧಿಕಾರಿಗಳಿಗೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕಾಗಿ ಶಿಶಿಲ ಅಡ್ಡಹಳ್ಳ ಫ್ರೆಂಡ್ಸ್ ನಿಂದ ಆಗ್ರಹಿಸಿದ್ದಾರೆ.











