September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ಜೇಸಿಐ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ರವರಿಗೆ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ

ಕೊಕ್ಕಡ: ಜೋಡು ಮಾರ್ಗ ನೇತ್ರಾವತಿ ಜೇಸಿಯ ಆತಿಥ್ಯದಲ್ಲಿ ಬೆಂಜನಪದವುನಲ್ಲಿ ಜೂ 11 ರಂದು ನಡೆದ ಜೇಸಿ ಮಧ್ಯಂತರ ಸಮಾವೇಶದಲ್ಲಿ ಕೊಕ್ಕಡ ಜೇಸಿಐ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ರವರಿಗೆ ಸಿ. ಪ್ರಾಂತ್ಯದ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಘಟಕದಲ್ಲಿ ಐವತ್ತು ಸದಸ್ಯರ ಸೇರ್ಪಡೆ, ವಲಯಾಡಳಿತ ಮಂಡಳಿ ಸಭೆಯ ಆಯೋಜನೆ, ಹಲವಾರು ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ತರಬೇತಿ, ಸಾಧಕರಿಗೆ ಸನ್ಮಾನ, ಬಡ ಮಕ್ಕಳಿಗೆ ಆರ್ಥಿಕ ನೆರವು, ಜೇಸಿ ಫೌಂಡೇಶನಿಗೆ ಹೆಚ್. ಜಿ. ಎಫ್, ಜೆ. ಎಫ್. ಎಂ. ಕೊಡುಗೆ, ನಿರಂತರ ಘಟಕಾಧ್ಯಕ್ಷರ ವಾರ್ತಾ ಪತ್ರ ಪ್ರಕಟಣೆ, ವಲಯದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಿತು.

2023 ನೇ ಸಾಲಿನಲ್ಲಿ ನಡೆಸಿದ ಉತ್ತಮ ಕಾರ್ಯಕ್ರಮಗಳು ಗುರುತಿಸಿ ಸಿ. ಪ್ರಾಂತ್ಯದ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ವಿನ್ನರ್, ಡೈಮಂಡ್ ಲೋಮ್, ವಿದ್ಯಾನಿಧಿ ಪುರಸ್ಕಾರ, ಟಾಪ್ 20 ಇನ್ ಟ್ರೈನಿಂಗ್ ಏರಿಯಾ, ಪ್ರೋಗ್ರಾಮ್ ಏರಿಯಾ ಎವಾರ್ಡುಗಳನ್ನು ವಲಯಾಡಳಿತ ಸಮಿತಿ ಸಮಕ್ಷಮದಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ವಿತರಿಸಿದರು.

Related posts

ಉರುವಾಲು ನಿವಾಸಿ ನವವಿವಾಹಿತೆ ಪುತ್ತೂರಿನ ಪತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಮೇದೋಜಿರಕ ಗ್ರಂಥಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಉಪನ್ಯಾಸಕ ನಂದಕುಮಾರ್ ಚಿಕಿತ್ಸೆಗೆ ಸ್ಪಂದಿಸದೆ ನಿಧನ

Suddi Udaya

ಇಂದಬೆಟ್ಟು : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೊಲೆರೋ

Suddi Udaya

ಎಕ್ಸೆಲ್ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಮಹತ್ವದ ಸಾಧನೆ

Suddi Udaya

ಜಿಲ್ಲಾಮಟ್ಟದ ಐಟಿ ಕ್ವಿಜ್‌ ಸ್ಪರ್ಧೆ: ಉಜಿರೆಯ ಎಸ್‌.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಬೊಳಿಯಾರು ಆಟೋ ರಿಕ್ಷಾದ ಮೇಲೆ ಕಾಡಾನೆ ದಾಳಿ: ಆಟೋ ಚಾಲಕ ದಿನೇಶ್‌ರವರನ್ನು ಭೇಟಿಯಾದ ರಕ್ಷಿತ್ ಶಿವರಾಂ

Suddi Udaya
error: Content is protected !!