ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಅಡಚಣೆಯಾಗುವ ಮರಗಳ ತೆರವು ಕಾರ್ಯವನ್ನು ಹಾಗೂ ಬೆಳ್ತಂಗಡಿ 33ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಲಾಯಿಲ ಫೀಡರಿನಲ್ಲಿ ಹಾಗೂ ಬೆಳ್ತಂಗಡಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುತ್ತಿರುವ ಬಂಗಾಡಿ, ಕೊಲ್ಲಿ,
ಕೊಯ್ಯೂರು, ಉಜಿರೆ, ಬೆಳಾಲು ಫೀಡರುಗಳಲ್ಲಿ ಹಾಗೂ ಧರ್ಮಸ್ಥಳ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುತ್ತಿರುವ ಧರ್ಮಸ್ಥಳ ಟೆಂಪಲ್, ಕನ್ಯಾಡಿ, ನಿಡ್ಲೆ, ಪುದುವೆಟ್ಟು, ಪಟ್ರಮೆ, ಅರಸಿನಮಕ್ಕಿ ಫೀಡರುಗಳಲ್ಲಿ ಸೆ.17 ರಂದು ಬೆಳಿಗ್ಗೆ ಗಂಟೆ:10:00ರಿಂದ ಸಂಜೆ ಗಂಟೆ:5:30ರ ತನಕ ವಿದ್ಯುತ್ ನಿಲುಗಡೆ ಆಗಲಿದೆ.











