26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಡಿ.14: ನಾವೂರು ದುರ್ಗಾ ಮೆಲೋಡೀಸ್ ಫೇಸ್ಬುಕ್, ಲೈವ್ ಪೇಜ್ ನೂರರ ಸಂಭ್ರಮ

ನಾವೂರು: ದುರ್ಗಾ ಮೆಲೋಡೀಸ್ ನಾವೂರು ಇದರ ಫೇಸ್ಬುಕ್, ಲೈವ್ ಪೇಜ್ ಇದರ 100 ಸಂಭ್ರಮವು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಡಿ. 14 ರಂದು ನಡೆಯಲಿದೆ.

ಕಾರ್ಯಕ್ರಮವನ್ನು ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ಉದ್ಘಾಟಿಸಲಿದ್ದು, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಷಾ ಕಾರಂತ್ ಅಧ್ಯಕ್ಷತೆ ವಹಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಉದ್ಯಮಿಗಳು ಹಾಗೂ ಧಾರ್ಮಿಕ ಮುಖಂಡರಾದ ಡಿ. ಕಿರಣ್‌ಚಂದ್ರ ಪುಷ್ಪಗಿರಿ, ನಾವೂರು ಆರೋಗ್ಯ ಕ್ಲಿನಿಕ್‌ನ ಡಾ. ಪ್ರದೀಪ್ ಎ., ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷರು ಹಾಗೂ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷರಾದ ಹರೀಶ್ ಸಾಲ್ಯಾನ್ ಮೋರ್ತಜೆ, ಅರವಿಂದ ಕಾರಂತ್ ಉಜಿರೆ, ದಿನೇಶ್ ಪೂಜಾರಿ ಉಜಿರೆ, ರಮೇಶ್ ಪೂಜಾರಿ ಧರ್ಮಸ್ಥಳ, ಉಜಿರೆ ಮಂಜುನಾಥ ಶಾಮಿಯಾನದ ಶ್ರೀಮತಿ ಶೀಲಾ ಮಹಾಬಲ ಗೌಡ ಉಜಿರೆ ಸಾಯಿ ಕೃಪಾ ಇಂಡಸ್ಟಿçÃಸ್‌ನ ದೇವಪ್ಪ ಗೌಡ, ಮಿತ್ತಬಾಗಿಲು ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಇದರ ಅಧ್ಯಕ್ಷ ಹರೀಶ್ ಕಾರಿಂಜ, ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಸಂಪಾದಕ ಬಿ.ಎಸ್. ಕುಲಾಲ್, ಮಂಗಳೂರು ಮೇಘಾಲಯ ಮೆಲೋಡೀಸ್‌ನ ಲತೇಶ್ ಪುತ್ರನ್, ನಾವೂರು ನನಸು ಬಿ. ರತ್ನಾಕರ ಬೆಳ್ತಂಗಡಿ ಕನಕರಾಜ್ ಬೆಳ್ತಂಗಡಿ ಆಗಮಿಸಲಿದ್ದಾರೆ.

ವಿಶೇಷ ಅಹ್ವಾನಿತರಾಗಿ ಚೇತನ್ ಜೈನ್ ಮೂಡಬಿದ್ರೆ, ಪ್ರವೀಣ್ ಜೈನ್ ಮೂಡಬಿದ್ರೆ ಚಲನಚಿತ್ರ ನಟರು ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಉಜಿರೆ ಹೊಳ್ಳ ಆರ್ಟ್ಸ್ನ ಗಿರೀಶ್ ಹೊಳ್ಳ, ಅತ್ತಾಜೆ ಮಧುಸೂದನ ಆಚಾರ್ಯ, ಬೆಳಾಲು ಬಾಬು ಆಚಾರ್ಯರನ್ನು ಸನ್ಮಾನಿಸಲಾಗುವುದು. ಅಲ್ಲದೆ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ತಂಡದ ವತಿಯಿಂದ ಧನಸಹಾಯ ನೀಡಲಾಗುವುದು ಎಂದು ತಂಡದ ನಿರ್ವಾಹಕರಾದ ಅಶೋಕ ಆಚಾರ್ಯ ಅತ್ತಾಜೆ ಹಾಗೂ ತಂಡಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವ ಸಂತೋಷ ಆಚಾರ್ಯ ತಿಳಿಸಿದ್ದಾರೆ.

Related posts

ಕಾರು – ಬೈಕ್ ಅಪಘಾತ: ಬೈಕ್ ಸವಾರ ನಾವೂರಿನ ಚಂದ್ರಹಾಸ ಮೃತ್ಯು

Suddi Udaya

ತಾ.ಪಂ.  ಸಹಾಯಕ ಲೆಕ್ಕಾಧಿಕಾರಿ ಗಣೇಶ್ ಪೂಜಾರಿ ಸೇವಾ ನಿವೃತ್ತಿ – ಬೀಳ್ಕೊಡುಗೆ ಸಮಾರಂಭ

Suddi Udaya

ಕೆಲ್ಲಗುತ್ತು ಶ್ರೀ ಸತ್ಯಸಾರಮುಪ್ಪಣ್ಯ ಮತ್ತು ಸ್ವಾಮಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಮೇ 4: ವಿದ್ಯುತ್ ನಿಲುಗಡೆ

Suddi Udaya

ಪಡುಮಲೆ ಪರವನ್ ಕುಟುಂಬಸ್ಥರ ವಾರ್ಷಿಕ ತಂಬಿಲ ಹಾಗೂ ಸನ್ಮಾನ

Suddi Udaya
error: Content is protected !!