30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಚಿವ ಸಂಪುಟ ಸಭೆಗೆ ಸಜ್ಜಾದ ಮಂಗಳೂರು ಜಿಲ್ಲಾ ಕಚೇರಿ ಪ್ರಜಾ ಸೌಧ

ಮಂಗಳೂರು: ಮಂಗಳೂರಿನಲ್ಲಿ ಮೊದಲ ಬಾರಿ ಇಂದು ಸೆ.18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಗೆ ದ.ಕ. ಜಿಲ್ಲಾ ಕಚೇರಿ‘ಪ್ರಜಾ ಸೌಧ’ದಲ್ಲಿ ಅಂತಿಮ ಸಿದ್ದಗೊಂಡಿದೆ.

ಸಚಿವ ಸಂಪುಟ ಸಭೆ ನಡೆಯುವ ಸಭಾಂಗಣವನ್ನು ಸುಂದರವಾಗಿ ಹೂವುಗಳಿಂದ ಅಲಂಕರಿಸಲಾಗಿದೆ. ಪ್ರಜಾ ಸೌಧದ ಎರಡನೇ ಮಹಡಿಯಲ್ಲಿರುವ ಈ ಸಭಾಂಗಣದ ಗೋಡೆಗಳಲ್ಲಿ ಕರಾವಳಿಯ ಪರಿಸರ, ಸಂಸ್ಕೃತಿಯನ್ನು ಬಿಂಬಿಸುವ ಸುಂದರ ಫೋಟೊಗಳು ರಾರಾಜಿಸುತ್ತಿದೆ.ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಚಿವ ಸಂಪುಟದ ಹಲವು ಮಂದಿ ಸಚಿವರು , ಉನ್ನತ ಅಧಿಕಾರಿಗಳು ನಗರಕ್ಕೆ ಆಗಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ . 33 ಸಚಿವರು, ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು, ಸಚಿವರ ಆಪ್ತ ಕಾರ್ಯದರ್ಶಿಗಳು ಗನ್‌ಮ್ಯಾನ್‌ಗಳು, ವಾಹನ ಚಾಲಕರು ಸೇರಿದಂತೆ ಸುಮಾರು 180 ಮಂದಿ ಆಗಮಿಸುವ ನಿರೀಕ್ಷೆ ಇದೆ. ಅಪರಾಹ್ನ 2:30ರ ತನಕ ಸಚಿವ ಸಂಪುಟದ ಸಭೆ ಇರುತ್ತದೆ.

Related posts

ಮರೋಡಿ: ಏ.22ರಂದು ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ

Suddi Udaya

ಅಂಡಿಂಜೆಯಲ್ಲಿ ಭಟ್ಸ್ ಮೆಡಿಕಲ್ ಶುಭಾರಂಭ

Suddi Udaya

ಪುಂಜಾಲಕಟ್ಟೆ: ಬೇರ್ಕಳ ಪೆರುವಾರು ಮನೆಯ ಬಾಬು ಶೆಟ್ಟಿ ನಿಧನ

Suddi Udaya

ಗೇರುಕಟ್ಚೆ: ಸಾವಿರ ಕದಳಿ ಬಾಳೆ ಗೊನೆ ಚಮತ್ಕಾರ

Suddi Udaya

ನೆರಿಯ ಗ್ರಾಮ ಪಂಚಾಯತ್‌ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya

ಎಸ್.ಡಿ.ಎಂ ಕಾಲೇಜು: ಟಾಟಾ ಬಿಗ್ ಬಾಸ್ಕೆಟ್ ನಿಂದ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆ

Suddi Udaya
error: Content is protected !!