ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಉಜಿರೆ (ರಾಜ್ಯ ಪಠ್ಯಕ್ರಮ) ಇಲ್ಲಿ
ಹಿಂದಿ ದಿವಸ್ ಕಾರ್ಯಕ್ರಮ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಿದ್ದವನ ಗುರುಕುಲ ಉಜಿರೆ ಇದರ ಪ್ರಬಂಧಕರಾದ ಡಾ. ಶಾಂತಿ ಸಾಗರ ಶಿರಹಟ್ಟಿ ಆಗಮಿಸಿದ್ದರು.
ವಿದ್ಯಾರ್ಥಿಗಳಿಂದ ಹಿಂದಿ ಭಾಷೆಯ ಮಹತ್ವ ,ನಾಲಗೆ ಸುರುಳಿ, ಸುವಿಚಾರ, ಸಮೂಹ ಗಾಯನ, ದೇಶಭಕ್ತಿ ಗೀತೆ, ರಸಪ್ರಶ್ನೆ ,ಅಭಿನಯ ಗೀತೆ ಮುಂತಾದ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು. ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು. ಮುಖ್ಯ ಅತಿಥಿ ಭಾಷಣದಲ್ಲಿ ಹಿಂದಿ ದಿವಸದ ಮಹತ್ವ ಹಾಗೂ ಹಿಂದಿ ಭಾಷೆ ಬೆಳೆದು ಬಂದ ಬಗ್ಗೆ , ಹಿಂದಿ ,ಪ್ರಾಕೃತ ಮತ್ತು ಸಂಸ್ಕೃತ ಭಾಷೆಗೆ ಇರುವ ಸಂಬಂಧ. ಸಿಂಧು ..ಹಿಂದೂ… ಹಿಂದಿ . ಹೀಗೆ ಭಾಷೆಯ ಪದ ಬಳಕೆ ಆಯಿತು ಎಂದು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಹಿಂದಿ ಭಾಷೆಯನ್ನು ಉಳಿಸಿ ಬೆಳೆಸಲು ಮಕ್ಕಳಿಗೆ ಕಿವಿ ಮಾತು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಭಾಷಾ ಶಿಕ್ಷಕರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಹಿಂದಿ ಸಂಘದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
10ನೇ ತರಗತಿಯ ಸನ್ನಿಧಿ ನಿರೂಪಿಸಿ, ಅಕ್ಷರ್ ಹಳೆಮನೆ ಸ್ವಾಗತಿಸಿ, 9ನೇ ತರಗತಿಯ ಪದ್ಮಜಾ ಧನ್ಯವಾದವಿತ್ತರು.











