30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೆ.21: 150 ಕೃಷಿಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಕಾರ್ಯಕ್ರಮ

ಬೆಳ್ತಂಗಡಿ: ಕರ್ನಾಟಕ ಸಾವಯವ ಕೃಷಿ ಯೋಜನೆ ವತಿಯಿಂದ 2026 ನೇ ಸಾಲಿನ ದ.ಕ., ಉಡುಪಿ, ಕಾಸರಗೋಡು ಒಳಗೊಂಡು ಮಂಗಳೂರು ವಿಭಾಗದ 150 ಕೃಷಿಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಕಾರ್ಯಕ್ರಮ ಸೆ.21ರಂದು ಬಿ.ಸಿ. ರೋಡು ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ದುರ್ಗಾಂಬಾ ಕ್ಷೇತ್ರ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಸ್ವಾಮೀಜಿಯವರು ನೆರವೇರಿಸಲಿದ್ದಾರೆ. ದ.ಕ. ಆರೋಗ್ಯ ಕುಟುಂಬ ಕಲ್ಯಾಣ ಸಚಿವರು ಹಾಗೂ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಪ್ರಥಮ ಕರಷಿ ಪ್ರಶಸ್ತಿ ಸನ್ಮಾನಕ್ಕೆ ಚಾಲನೆ ನೀಡಲಿದ್ದಾರೆ.

ಅಧ್ಯಕ್ಷತೆಯನ್ನು ಕರ್ನಾಟಕ ಸಾವಯವ ಕೃಷಿ ಯೋಜನೆ ಆಡಳಿತ ನಿರ್ದೇಶಕ ಮೋಹನ್ ಗೌಡ ವಹಿಸಲಿದ್ದಾರೆ.
ಮುಖ್ಯ ಅತಿಥಿಗಾಳಗಿ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಉಳಿಪಾಡಿಗುತ್ತು, ವಿಧನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಇಂಚಾಡಿ, ಕಸ್ತೂರಿ ರಂಗನ್ ಹೋರಾಟ ಸಮಿತಿ ಸಂಚಾಲಕ ಕಿಶೋರ್ ಗೌಡ ಶಿರಾಡಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ೨೦೨೫ನೇ ಕೃಷಿ ಪ್ರಶಸ್ತಿ ಸನ್ಮಾನಿತರಾದ ನಿವೃತ್ತ ಸೈನಿಕ ಅಮ್ಮಣ್ಣ ರೈ ಪುತ್ತೂರು, ಪೊಸಂದೊಡಿ ದುಗ್ಗಪ್ಪ ಗೌಡ, 2025ನೇ ಕೃಷಿ ಪ್ರಶಸ್ತಿ ವಿಜೇತರಾದ ಮಾಳ ವಿನೀತ್ ಹೆಗ್ಡೆ, ರಾಮ ಮೂರ್ತಿ ಕಲ್ಕೂರ್ ಹೆಬ್ರಿ, ಲ್ಯಾನ್ಸಿ ಪಿರೇರಾ ಬಂಟ್ವಾಳ, ಆನಂದ ಸಿ.ಹೆಚ್. ಕಾರಡ್ಕ, ಮನ್ಮಥ ನಾಯಕ್ ಹೆಬ್ರಿ, ಸತೀಶ್ ಹೆಗ್ಡೆ ಕುಂದಾಪುರ, ಕೃಷ್ಣ ಭಟ್ ಎಡನೀರು, ದ.ಕ. ಹಿರಿಯ ಮುಖ್ಯಾಧಿಕಾರಿ ಭಾರತಿ ರೈ ಪುತ್ತೂರು, ಉಡುಪಿ ಹಿರಿಯ ಮುಖ್ಯಾಧಿಕಾರಿ ಶಾರದಾ ಶೆಟ್ಟಿ ಕಾರ್ಕಳ, ಕಸರಗೋಡು ಜಿಲ್ಲಾ ಹಿರಿಯ ಅಧಿಕಾರಿ ಪೂರ್ಣಿಮಾ ಅಡೂರ್, ಕರ್ನಾಟಕ ಸಾವಯವ ಕೃಷಿ ಯೋಜನೆ ಸಹ ಆಡಳಿತ ನಿರ್ದೇಶಕಿ ಅಶ್ವಿನಿ ಮೋಹನ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಸಾವಯವ ಕೃಷಿ ಯೋಜನೆ ಆಡಳಿತ ನಿರ್ದೇಶಕ ಮೋಹನ್ ಗೌಡ ತಿಳಿಸಿದ್ದಾರೆ.

Related posts

ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಭಜನಾ ಕಾರ್ಯಕ್ರಮ

Suddi Udaya

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಬೆಳ್ತಂಗಡಿ ಕೇಂದ್ರಕ್ಕೆ “ಎಕ್ಸಲೆನ್ಸ್ ಇಂಪ್ಯಾಕ್ಟ್ ಅವಾರ್ಡ್ 2026” ಗೌರವ

Suddi Udaya

ತೋಟತ್ತಾಡಿ: ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಎಸ್.ಡಿ.ಎಂ ಸ್ವಾಯತ್ತ ಕಾಲೇಜು : ಬಿವೋಕ್ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಭೇಟಿ

Suddi Udaya

ಉಜಿರೆ ಎಸ್‌.ಡಿ.ಎಂ ಸ್ವಾಯತ್ತ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕಾ ಸಂಘಗಳ ಉದ್ಘಾಟನೆ

Suddi Udaya

ಮಡಂತ್ಯಾರು: ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!