32 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

‘ಶ್ವೇತ ಸಮೂಹ ‘ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ  ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಕಣಿಯೂರು: ಶ್ವೇತ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ  ಸಹಕಾರಿ ಸಂಘದ 2025- 26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷೆ ಚೈತ್ರಾ ಯಂ. ಜಿ.ಅವರ ಅಧ್ಯಕ್ಷತೆಯಲ್ಲಿ   ಸೆ. 18 ರಂದು ಪಿಲಿಗೂಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷೆ ಚೈತ್ರಾ ಯಂ. ಜಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದಲ್ಲಿ 2700 ಲೀಟರ್ ಹಾಲು ಸಂಗ್ರಹಣೆ ಆಗುತ್ತಿದ್ದು, ಲೆಕ್ಕ ಪರಿಶೋಧನೆಯಲ್ಲಿ ಎ ಗ್ರೇಡ್ ಪಡೆದಿದ್ದು, ವರದಿ ಸಾಲಿನಲ್ಲಿ 7.69 ಲಕ್ಷ ಲೀಟರ್ ಹಾಲು ಸಂಗ್ರಹಣೆಗೊಂಡು   ರೂ.  1418892.60 ಲಕ್ಷ ನಿವ್ವಳ ಲಾಭ ಗಳಿಸಿ, ಸದಸ್ಯರಿಗೆ ಲೀಟರ್ ಗೆ 0.88  ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು.

ವಿಸ್ತರಣಾಧಿಕಾರಿ ರಾಜೇಶ್ ಪಿ. ಕಾಮತ್ ಮಾರ್ಗದರ್ಶನ ನೀಡಿ ತಾಲೂಕಿನ ಎರಡನೇ ಅತಿ ದೊಡ್ಡ ಮಾಹಿಳಾ ಸಂಘದಲ್ಲಿ 2.5 ಸಾವಿರ ಲೀಟರ್ ಹಾಲು ಸಂಗ್ರಹಣೆ ಆಗುತ್ತಿರುವುದು ಗಮನಹ ಇಲ್ಲಿನ ಸಂಘದ ಸದಸ್ಯೆ ಜಮೀಲಾ ಅವರು ರಾಜ್ಯಮಟ್ಟದಲ್ಲಿ ಗುರುತಿಸಿರುವುದು ಸಂಘವು ಜನಜ್ಜನಿತವಾಗಿದೆ. ಸಂಘದ ಪ್ರಗತಿ ಪಥದಲ್ಲಿ ಸಾಗುತ್ತಿದ್ದು ಎಂದು ಹೇಳಿದ ಅವರು ಸಂಘದ ಕಾರ್ಯ ವೈಖರಿಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಸ್ಥಾಪಕಾಧ್ಯಕ್ಷೆ ರಾಜಶ್ರೀ ಹೆಗ್ಡೆ, ಉಪಾಧ್ಯಕ್ಷೆ ಪ್ರೇಮಾ ಸಿ, ನಿರ್ದೇಶಕರಾದ ಗಿರಿಜಾ, ರಾಜೀವಿ, ಪ್ರೇಮಾ, ಮಮತಾ, ಕುಸುಮವಾತಿ, ಹೇಮಲತಾ, ಇಂದಿರಾ, ನಳಿನಾಕ್ಷಿ, ಅಪ್ಪಿ ಹಾಗೂ ಸುನಂದಾ, ಮಾಜಿ ಅಧ್ಯಕ್ಷರಾದ ಭವಾನಿ ಮತ್ತು ಕುಸುಮಾವತಿ ಉಪಸ್ಥಿತರಿದ್ದರು.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಅಧಿಕ ಹಾಲು ಉತ್ಪಾಧಿಸಿ ಡಿಪ್ಪೋಗೆ ಹಾಕಿದ ಜಮೀಲಾ ಪ್ರಥಮ , ಸುಮಾ ಬಿ. ಎಸ್ ದ್ವಿತೀಯ , ವಿಮಲ ತೃತೀಯ ಸ್ಥಾನ ಪಡೆದ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹ ನೀಡಲಾಯಿತು. ಪೂರ್ಣಿಮಾ, ಲಕ್ಷ್ಮೀ, ವಿಶಾಲಾಕ್ಷಿ ಹಾಗೂ ಸೀತಮ್ಮ ಅವರನ್ನು ಗೌರವಿಸಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಕೆ. ಸ್ವಾಗತಿಸಿ ವರದಿ ವಾಚಿಸಿದರು.  ನಿರ್ದೇಶಕಿ ವೈಶಾಲಿ  ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ದೇವಕಿ, ಆನಂದ ಹಾಗೂ ಹರ್ಷಿತ ಎಲ್. ಆರ್. ಸಹಕರಿಸಿದರು.

Related posts

ಸುಲ್ಕೇರಿ ಗ್ರಾಮ ಸಭೆಗೆ ಒಂದು ಗಂಟೆ ಲೇಟಾಗಿ ಬಂದ ನೋಡೇಲ್ ಅಧಿಕಾರಿ, ಕಾದು ಕಾದು ಸುಸ್ತಾದ ಗ್ರಾಮಸ್ಥರು, ಅಧಿಕಾರಿ ವಿರುದ್ದ ಅಸಮಾಧಾನ, ನಿಗದಿತ ಸಮಯದಲ್ಲಿ ಸಭೆ ಪ್ರಾರಂಭವಾಗದೆ ವಿಳಂಬ

Suddi Udaya

ಬೆಳ್ತಂಗಡಿ: ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಸೋಮನಾಥ ಭಟ್ ಪಟವರ್ಧನ್ ನಿಧನ

Suddi Udaya

ಪುದುವೆಟ್ಟು: ನಡ್ಯೇಲು ಕಾಡಾನೆ ದಾಳಿ : ಅಪಾರ ಕೃಷಿ ಹಾನಿ

Suddi Udaya

ಉಜಿರೆ: ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Suddi Udaya

ಜಾನುವಾರು ಸಾಗಾಟ ನಿಷೇಧದ ಆದೇಶ ವಾಪಸ್

Suddi Udaya

ಬಜಿರೆ ಪಿಎಂಶ್ರೀ ಸ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!