September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಅಭಿಯಂತರರ ದಿನಾಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆ, ಉಜಿರೆಯಲ್ಲಿ ಸೆಪ್ಟೆಂಬರ್ 17ರಂದು ಅಭಿಯಂತರರ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿ ತೃಪ್ತಿ ಶೆಟ್ಟಿ ಬಿ.ಎಂ. ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್‌ನ ವಿವಿಧ ವಿಭಾಗಗಳು, ಡಿಪ್ಲೊಮಾ ಇಂಜಿನಿಯರಿಂಗ್‌ನ ಉಪಯೋಗಗಳು ಹಾಗೂ ಕೌಶಲ್ಯಾಭಿವೃದ್ಧಿಯ ಮಹತ್ವದ ಕುರಿತು ಮಾಹಿತಿ ನೀಡಿದರು. ಸಮಾಜದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಮತ್ತು ಕಾರ್ಯಕ್ಷಮತೆಯ ಬಗ್ಗೆಯೂ ವಿವರಿಸಿದರು.

ಗಣಿತ ಅಧ್ಯಾಪಕ ರವೀಶ್ ಕುಮಾರ್ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ, ಶಿಸ್ತು, ಕಾರ್ಯದಕ್ಷತೆ, ಪ್ರಾಮಾಣಿಕತೆ, ಸಮಯಪ್ರಜ್ಞೆ ಹಾಗೂ ದೇಶಪ್ರೇಮದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಮಾಜಕ್ಕೆ ವಿಶ್ವೇಶ್ವರಯ್ಯ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾ ಟಿ. ವಹಿಸಿದ್ದರು. ವಿದ್ಯಾರ್ಥಿ ಮೌನೇಶ್ ಅಭಿಯಂತರರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ವರ್ಷಿಣಿ ಸ್ವಾಗತಿಸಿದರು. ಫಾತಿಮಾತ್ ಅಫ್ರಾ ವಂದಿಸಿದರು. ಫಾತಿಮಾ ಸೈಫಾ ಕಾರ್ಯಕ್ರಮ ನಿರೂಪಿಸಿದರು.

Related posts

ಕೊರಿಂಜ: ಯೋಗ ತರಬೇತಿ ಶಿಬಿರದ ಪೂರ್ವಭಾವಿ ಸಭೆ

Suddi Udaya

ನಿಡ್ಲೆ ಸರಕಾರಿ ಪ್ರೌಢಶಾಲೆಗೆ 1990ರ ಎಸ್ ಎಸ್ ಎಲ್ ಸಿ ಬ್ಯಾಚಿನ ಹಳೆ ವಿದ್ಯಾರ್ಥಿಗಳಿಂದ ದೇಣಿಗೆ ಹಸ್ತಾಂತರ

Suddi Udaya

ಮನಕಲಕುವ ಹೃದಯ ವಿದ್ರಾವಕ ಘಟನೆ: ನಲ್ಲೂರು ಬಳಿ ಬೈಕ್- ಮಿನಿ ಲಾರಿ ನಡುವೆ ಅಪಘಾತ: ಬೈಕ್ ನಲ್ಲಿದ್ದ ಪುಟ್ಟ ಮಕ್ಕಳು ಸೇರಿ ನಾಲ್ವರು ದುರ್ಮರಣ

Suddi Udaya

ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಿವೃತ್ತ ಕೆ. ಜಯಕೀರ್ತಿ ಜೈನ್ ರವರಿಗೆ ಬೆಳ್ತಂಗಡಿ ಸರಕಾರಿ ನೌಕರರ ಸಂಘದಿಂದ ಸನ್ಮಾನ

Suddi Udaya

ಉಜಿರೆ ಹಳೆಪೇಟೆ ಮುಹಿದ್ದೀನ್ ಜುಮಾ ಮಸ್ಟಿದ್ ನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Suddi Udaya

ಶ್ರೀ ಕ್ಷೇ.ಧ. ಗ್ರಾ.ಯೋ ಕೊಕ್ಕಡ ವಲಯದ ಉಪ್ಪಾರಪಳಿಕೆ ಕಾರ್ಯಕ್ಷೇತ್ರದಲ್ಲಿ ವಿಶ್ವಜ್ಯೋತಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

Suddi Udaya
error: Content is protected !!