September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಜನಪದ ಗೀತಾಗಾಯನ ಸ್ಪರ್ಧೆ: ವಾಣಿ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್‌ಗೆ ದ್ವಿಪ್ರಥಮ

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ಜನಪದ ಗೀತಾಗಾಯನ ಸ್ಪರ್ಧೆಯಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ತಂಡಗಳು ದ್ವಿಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿವೆ.

ಬೆಳ್ತಂಗಡಿ ಸ್ಥಳೀಯ ಸಂಸ್ಥೆಯನ್ನು ಪ್ರತಿನಿಧಿಸಿದ ವಾಣಿ ಪಿಯು ಕಾಲೇಜಿನ ರೇಂಜರ್ಸ್ ವಿಭಾಗ ಪ್ರಥಮ ಸ್ಥಾನ ಹಾಗೂ ರೋವರ್ಸ್ ವಿಭಾಗವೂ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ಎರಡೂ ತಂಡಗಳು ಸತತ ನಾಲ್ಕನೇ ಬಾರಿಗೆ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿವೆ.

ತಂಡಗಳಿಗೆ ರೋವರ್ ಲೀಡರ್ (RL) ಬೆಳಿಯಪ್ಪ ಹಾಗೂ ರೇಂಜರ್ ಲೀಡರ್ (RSL) ರಕ್ಷಾ ತರಬೇತಿ ನೀಡಿ ಸಜ್ಜುಗೊಳಿಸಿದ್ದರು.

Related posts

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮಕಲಶೋತ್ಸವಗಣಪತಿ ಹೋಮ, ಮಕರ ಲಗ್ನದಲ್ಲಿ ಶ್ರೀ ಉಳ್ಳಾಲ್ತಿ ದೇವಿಯ ಪ್ರತಿಷ್ಠೆ ಜಿವ ಕಲಶಾಭಿಷೇಕ,ಗ್ರಾಮ ಸುಭೀಕ್ಷೇಗಾಗಿ ಶ್ರೀಚಕ್ರ ಪೂಜೆ

Suddi Udaya

ಪತಿಯೊಂದಿಗೆ ಕೋಪಗೊಂಡು ಆತ್ಮಹತ್ಯೆಗೆ ಯತ್ನ: ನದಿ ಹಾರಲು ಯತ್ನಿಸಿದ ಮಹಿಳೆಯ ಜೀವ ಕಾಪಾಡಿದ ಸಾಕು ನಾಯಿ

Suddi Udaya

ನಿಡ್ಲೆ: ಹೇಮಲತಾ ಕೆ. ಎಸ್. ಸನಿಲ ನಿಧನ

Suddi Udaya

ಮಡಂತ್ಯಾರು: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮ

Suddi Udaya

ಕರಾಯ: ಭಗವಾನ್ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರದಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಮುಂಡಾಜೆ: ಕವಿ ವಿಶ್ರಾಂತ ಶಿಕ್ಷಕ ಶಂಕರ್ ಎನ್.ತಾಮನ್ಕರ್ ರವರ ಸೀತಾ ರಾಮಾಯಣ ಮತ್ತು ಮಕರಂದ ಕವನ ಸಂಕಲನಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ

Suddi Udaya
error: Content is protected !!