September 19, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ತುಳು ಭಾಷೆಗೆ ಐತಿಹಾಸಿಕ ಗೌರವ: ರಾಜ್ಯ ಸರ್ಕಾರದ ಸರ್ವ ಶ್ರೇಷ್ಠ ಸಾಧನೆ-ಸಂತೋಷ್ ಕುಮಾರ್

ಬೆಳ್ತಂಗಡಿ: ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆದಿದ್ರಾವಿಡ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮುಖ್ಯಮಂತ್ರಿ ‌ಡಿ. ಕೆ. ಘೋಷಿಸಿರುವುದು ಈ ಸರಕಾರದ ಸರ್ವ ಶ್ರೇಷ್ಠ ‌ಸಾಧನೆ ಹಾಗೂ ಐತಿಹಾಸಿಕ ನಿರ್ಧಾರ,ತುಳುನಾಡಿನ ಭವ್ಯ ಪರಂಪರೆಯನ್ನು ರಾಜ್ಯ ಸರಕಾರ ಎತ್ತಿ ಹಿಡಿದಿದೆ. ಈ ಮೂಲಕ ಕರಾವಳಿಯ ಕಲೆ, ಜಾನಪದ, ಸಂಸ್ಕೃತಿ ಹಾಗೂ ಇಲ್ಲಿನ ಭಾಷೆಗೆ ಅಧಿಕೃತ ಮನ್ನಣೆ ದೊರೆತಿರುವುದು ಸಂತೋಷದ ವಿಚಾರ. ಈ ಮಹತ್ತರ ಕಾರ್ಯವನ್ನು ‌ಮಾಡಿದ ಮುಖ್ಯಮಂತ್ರಿಗಳಿಗೆ‌ ಅಭಿನಂದನೆಗಳು. ಅದೇ ರೀತಿ‌ ಪುತ್ತೂರು, ಕನ್ಯಾಡಿ ಸೇರಿದಂತೆ ಕರಾವಳಿಯ ಧಾರ್ಮಿಕ ‌ಕ್ಷೇತ್ರಗಳ ಅಭಿವೃದ್ಧಿಗೂ‌ ಕೋಟಿ ವೆಚ್ಚದ ಅನುದಾನಗಳನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಸರಕಾರ ಬದ್ಧತೆ‌ ಪ್ರದರ್ಶಿಸಿದೆ. ವಿಶೇಷ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ತುಳುನಾಡಿನ ಜನರ ಭಾವನೆಗಳಿಗೆ ಸಕಾಲದಲ್ಲಿ ಸ್ಪಂದಿಸಿದೆ. ಈ ಮೂಲಕ ಜಗತ್ತಿನ ಮೂಲೆ‌ ಮೂಲೆಯಲ್ಲಿರುವ ತುಳುವರು, ತುಳು ಭಾಷೆಯನ್ನು ಮಾತನಾಡುವವರು, ಸಾಹಿತಿಗಳು, ಸಂಘ ಸಂಸ್ಥೆಗಳ ಸದಸ್ಯರು, ಕರಾವಳಿ ಪ್ರಾಂತ್ಯದ ಜನತೆ ಸಂತಸ ಪಡುವಂತಾಗಿದೆ. ಸೌಹಾರ್ದತೆಯ ಸ್ಥಾನ, ದೇವಾಲಯಗಳ ಬೀಡಾದ ಕರಾವಳಿಯ ಸರ್ವರೂ ಮುಖ್ಯಮಂತ್ರಿಗಳ‌ ಈ ಕಾರ್ಯವನ್ನು ಶ್ಲಾಘಿಸಬೇಕಿದೆ ಎಂದು ದ.ಕ. ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ಸಂತೋಷ್ ಕುಮಾರ್ ಲಾಯಿಲಾ ಹೇಳಿಕೆ ನೀಡಿದ್ದಾರೆ.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ ರವರಿಂದ ಕೃತಕ ಕಾಲಿನ ವ್ಯವಸ್ಥೆಗೆ ಸಹಾಯಹಸ್ತ

Suddi Udaya

ಬೆಳ್ತಂಗಡಿ ವಿವಿಧ ಮಹಿಳಾ ಮಂಡಲಗಳ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ವಾಹನ ಜಾಥಾ ಕಾರ್ಯಕ್ರಮ

Suddi Udaya

ಬಿ ಆರ್ಕ್ ಫಲಿತಾಂಶ: ಎಕ್ಸೆಲ್ ಗುರುವಾಯನಕೆರೆ ಅದ್ಭುತ ಸಾಧನೆ

Suddi Udaya

ತಾಲೂಕು ಮಟ್ಟದ ಭಕ್ತಿಗೀತೆ ಸ್ಪರ್ಧೆ : ಅನುಗ್ರಹ ಆಂ.ಮಾ. ಶಾಲೆಯ ವಿದ್ಯಾರ್ಥಿ ಆದ್ವಿ ದ್ವಿತೀಯ ಸ್ಥಾನ

Suddi Udaya

ಕರ್ನಾಟಕ ರಾಜ್ಯ ಓಪನ್ ರೀಲೆ ಸ್ಪರ್ಧೆಯಲ್ಲಿ ಸರ್ವಜಿತ್ ಪೂಜಾರಿ ಮರೋಡಿಯವರಿಗೆ ಚಿನ್ನದ ಪದಕ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಇಲOತಿಲ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸಭೆ

Suddi Udaya
error: Content is protected !!