32 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿ

ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಸರ್ಕಲ್ ವತಿಯಿಂದ ‘ಭಾರತದ ಬಹುತ್ವ – ಬಂಧುತ್ವ’ ವಿಚಾರ ಗೋಷ್ಠಿ

​ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಸರ್ಕಲ್ ಸಮಿತಿಯ ವತಿಯಿಂದ ಇಲ್ಲಿನ‌ ಮದರಸ ಸಭಾಂಗಣದಲ್ಲಿ 80ನೇ ಸ್ವಾತಂತ್ರ್ಯದ ನೆನಪಿಗಾಗಿ 2026ರ ಸೆ. 19 ರಂದು ‘ಭಾರತದ ಬಹುತ್ವ – ಬಂಧುತ್ವ’ ವಿಚಾರ ಗೋಷ್ಠಿ ಅರ್ಥಪೂರ್ಣವಾಗಿ ನೆರವೇರಿತು.

​ಕಾರ್ಯಕ್ರಮಕ್ಕೂ ಮುನ್ನ ಎಂ.ಜೆ.ಎಂ. ಮಸೀದಿಯಲ್ಲಿ ಮೌಲೀದ್ ಪಾರಾಯಣ ನಡೆಸಲಾಯಿತು. ಬಳಿಕ ನಡೆದ ​ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಸರ್ಕಲ್ ಅಧ್ಯಕ್ಷ ಹಾಜಿ ಹೈದರ್ ಮದನಿ ವಹಿಸಿದ್ದರು. ಉಜಿರೆಯ ಎಂ.ಜೆ.ಎಂ. ಮಸೀದಿಯ ಖತೀಬ್ ಮುೌಲಾನಾ ಸಫ್ವಾನ್ ಜೌಹರಿ ಉದ್ಘಾಟಿಸಿ ಶುಭ ಹಾರೈಸಿದರು.

​ಗಣ್ಯರ ಉಪಸ್ಥಿತಿ ಹಾಗೂ ಸೌಹಾರ್ದ ಸಂದೇಶ:
ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಿ ಸೌಹಾರ್ದತೆಯ ಸಂದೇಶ ಸಾರಿದರು. ಎಂ.ಜೆ.ಎಂ. ಮಸೀದಿ ಉಜಿರೆಯ ಅಧ್ಯಕ್ಷ ಅಬೂಬಕರ್, ಮುಂಡಾಜೆ ಪರಶುರಾಮ ದೇವಸ್ಥಾನದ ಟ್ರಸ್ಟಿ ಅರೆಕಲ್ ರಾಮಚಂದ್ರ ಭಟ್, ಉಜಿರೆ ಸಂತ ಅಂತೋನಿ ಚರ್ಚ್‌ನ ಪಾಲನಾ ಮಂಡಳಿಯ ಮಾಜಿ ಉಪಾಧ್ಯಕ್ಷ ವೇಲೇರಿಯನ್ ರೋಡ್ರಿಗಸ್, ಕಾಶಿಬೆಟ್ಟು ಶನೀಶ್ವರ ದೇವಸ್ಥಾನದ ಧರ್ಮದರ್ಶಿ ಜನಾರ್ದನ ಆಚಾರ್ಯ ಹಾಗೂ ಬೆಳ್ತಂಗಡಿ ಝೋನ್ ಕೆ.ಎಂ.ಜೆ. ಅಧ್ಯಕ್ಷ ಎಸ್.ಎಂ. ಕೋಯ ತಂಙಳ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಹುಸೇನ್ ಕೋಯ ತಂಙಳ್ ಕುಂಟಿನಿ, ಕೆ.ಎಂ.ಜೆ. ಉಜಿರೆ ಸರ್ಕಲ್ ಕೋಶಾಧಿಕಾರಿ ಜನಾಬ್ ಹಂಝ ಮಾಚಾರ್, ಉಪಾಧ್ಯಕ್ಷ ಮಯ್ಯದ್ದಿ ಉಪಸ್ಥಿತರಿದ್ದರು. ಎಲ್ಲಾ ಮುಖ್ಯ ಅತಿಥಿಗಳನ್ನು ಶಾಲು ಹೊದೆಸಿ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.
ಸರ್ಕಲ್ ವ್ಯಾಪ್ತಿಗೊಳಪಟ್ಟ ಉಜಿರೆ, ಅತ್ತಾಜೆ, ಕಕ್ಕೆನಾ, ಗಾಂಧಿನಗರ, ನಿಡಿಗಲ್, ಕನ್ಯಾಡಿ, ಮಾಚಾರ್ ಮತ್ತು ಬೆಳಾಲ್ ಯೂನಿಟ್ಟುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಕೆ.ಎಂ.ಜೆ. ಉಜಿರೆ ಸರ್ಕಲ್ ಉಪಾಧ್ಯಕ್ಷ ಹಾಜಿ ಉಮರ್‌ಕುಂಞಿ ನಾಡ್ಜೆ ಸ್ವಾಗತಿಸಿದರು. ಕೊನೆಯಲ್ಲಿ ಕೆ.ಎಂ.ಜೆ. ಉಜಿರೆ ಸರ್ಕಲ್ ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್ ವಂದನಾರ್ಪಣೆಗೈದರು.

Related posts

ನಾರಾವಿ ಗ್ರಾಮ ಪಂಚಾಯತಿಗೆ ವಿ.ಪ. ಶಾಸಕ ಕಿಶೋರ್ ಕುಮಾರ್ ಪುತ್ತೂರು ಭೇಟಿ

Suddi Udaya

ಆಪರೇಷನ್ ಸಿಂದೂರ: ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಬಿಜೆಪಿ ಪಟ್ರಮೆ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಮನೋಜ್ ಪಟ್ರಮೆ ಆಯ್ಕೆ

Suddi Udaya

ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಮುಳಿಯ ಜುವೆಲ್ಲರ್ಸ್ ವತಿಯಿಂದ ವನಮಹೋತ್ಸವ

Suddi Udaya

ಕೊಕ್ಕಡ: 9/11 ಆದೇಶ ವಿರೋಧಿಸಿ ಪಂಚಾಯತ್ ಮಟ್ಟದಲ್ಲಿ ಅಥವಾ ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ಅನುಮೋದನೆ ನೀಡುವಂತೆ ನಿರ್ಣಯ

Suddi Udaya

ಮಾಲಾಡಿ ಗ್ರಾಮ ಸಭೆ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಗ್ರಾಮಸ್ಥರ ಒತ್ತಾಯ

Suddi Udaya
error: Content is protected !!