30.5 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಡಿಸಿ ಮನ್ನಾ ಜಮೀನು ಹಂಚಿಕೆ ರಾಜ್ಯ ಸರ್ಕಾರ ನಿರ್ಲಕ್ಷ್ಯ, ಬೆಳ್ತಂಗಡಿ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ತುರ್ತು ಸಭೆ

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷರು ಮೀಸಲಿಟ್ಟ ಡಿಸಿ ಮನ್ನಾ ಜಮೀನು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ಕುಕ್ಕೇಡಿ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ತಾಲೂಕು ವತಿಯಿಂದ ತುರ್ತು ಸಮಿತಿ ಸಭೆಯು ಸಮಿತಿಯ ಉಪಾಧ್ಯಕ್ಷ ವಿಜಯ ಕುಮಾರ್ ಬಜಿರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಡಿಸಿ ಮನ್ನಾ ಜಮೀನಿನ ಹಂಚಿಕೆ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಲಾಯಿತು. ತಕ್ಷಣ ರಾಜ್ಯ ಸರ್ಕಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷರು ಮೀಸಲಿಟ್ಟ ಡಿಸಿ ಮನ್ನಾ ಜಮೀನಿನ ಹಂಚಿಕೆಗಾಗಿ 3 ದಶಕಗಳಿಂದ ಪ್ರತಿಭಟನೆಗಳನ್ನು ನಡೆಸಲಾಗಿದೆ. ಅದರ ಭಾಗವಾಗಿ ಕಳೆದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಡಿಸಿ ಮನ್ನಾ ಜಮೀನಿನ ಹಂಚಿಕೆ ಬಗ್ಗೆ ವಾಗ್ದಾನ ನೀಡಲಾಗಿದೆ. ಆದರೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಗ್ಗೆ ಮೌನ ವಹಿಸಿ, ಪ್ರಣಾಳಿಕೆಯಲ್ಲಿಲ್ಲದ ವಿಚಾರಗಳನ್ನು ಜಾರಿಗೆ ತರಲು ಉತ್ಸುಕತೆ ತೋರಿಸುತ್ತಿರುವ ಸರ್ಕಾರದ ನಡೆ ಅತ್ಯಂತ ಖಂಡನೀಯ ಎಂದು ಸಭೆ ಅಭಿಪ್ರಾಯ ಪಟ್ಟಿತು.

ಡಿಸಿ ಮನ್ನಾ ಜಮೀನು ಹಂಚಿಕೆಗಾಗಿ ಹಂತಹಂತವಾಗಿ ತೀವ್ರ ಸ್ವರೂಪದ ಹೋರಾಟಗಳನ್ನು ಸಂಘಟಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡಿತು. ಡಿಸಿ ಮನ್ನಾ ಜಮೀನು ಹಂಚಿಕೆ ಸೇರಿದಂತೆ ದಲಿತ, ಆದಿವಾಸಿ ಸಮುದಾಯದ ಬಗ್ಗೆ ರಾಜ್ಯ ಸರ್ಕಾರದ ತೀರ್ಮಾನವನ್ನು ಖಂಡಿಸಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖ‌ರ್ ಕುಕ್ಕೇಡಿಯವರ ತೀರ್ಮಾನವನ್ನು ಸಭೆ ಬೆಂಬಲಿಸುತ್ತದೆ. ದಲಿತ ಸಮುದಾಯದ ಬಗ್ಗೆ ಸರ್ಕಾರ ತನ್ನ ತೀರ್ಮಾನವನ್ನು ಬದಲಾಯಿಸದಿದ್ದರೆ ಮುಂದಿನ ದಿನಗಳಲ್ಲಿ ಚಳುವಳಿ ಹೋರಾಟದ ಮೂಲಕ ತಕ್ಕ ಉತ್ತರ ನೀಡಲಿದ್ದೇವೆ ಎಂದು ಸಂಘಟನೆಯು ತಿರ್ಮಾನಿಸಿತು.

ಸಭೆಯಲ್ಲಿ ಮುಖಂಡರಾದ ಓಬಯ್ಯ ಆರಂಬೋಡಿ, ಶ್ರೀಧ‌ರ್ ಕಳೆಂಜ, ನಾರಾಯಣ ಪುದುವೆಟ್ಟು, ಶೇಖರ್ ಕಣಿಯೂರು, ಶಂಕರ್ ಮಾಲಾಡಿ, ಸುಕೇಶ್ ಮಾಲಾಡಿ, ಬಾಬಿ ಮಾಲಾಡಿ, ರವಿ ಶಿರ್ಲಾಲು, ರಘು ಶಿರ್ಲಾಲು, ಸತೀಶ್ ಸುಲ್ಕೇರಿಮೊಗ್ರು, ಕೂಸ ಅಳದಂಗಡಿ, ಪರಮೇಶ್ವರ ಅಂಡಿಂಜೆ, ಚರಣ್ ರಾಜ್ ಕುಕ್ಕೇಡಿ, ವಿಠಲ್ ಮಾಲಾಡಿ, ಶಿವಾನಂದ ಪಡಂಗಡಿ, ಸಂತೋಷ್ ಕುಕ್ಕೇಡಿ, ಯತೀಶ್ ಧರ್ಮಸ್ಥಳ, ಸದಾನಂದ ನಾಲ್ಕೂರು ಉಪಸ್ಥಿತರಿದ್ದರು.

Related posts

ಚಿಬಿದ್ರೆ – ಧರ್ಮಸ್ಥಳ ರಸ್ತೆಯಲ್ಲಿ ಬಿದ್ದ ಮರ : ಶೌರ್ಯ ವಿಪತ್ತು ಘಟಕದಿಂದ ತೆರವು

Suddi Udaya

ಬಂದಾರು: ಆದಿಪೂಜಿತ ಸಿದ್ದಿವಿನಾಯಕ ಕನ್ನಡ ಭಕ್ತಿಗೀತೆ ಆಡಿಯೋ ಬಿಡುಗಡೆ

Suddi Udaya

ಬಿಜೆಪಿ ಓಡಿಲ್ನಾಳ ಶಕ್ತಿ ಕೇಂದ್ರ ಅಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ ಆಯ್ಕೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯಲ್ಲಿ ವರ್ಷ ಕಾಮತ್ ರಿಂದ ಟೆಮ್ ದಿ ಟೈಮ್ ತರಬೇತಿ ಕಾರ್ಯಾಗಾರ

Suddi Udaya

ತೋಟತ್ತಾಡಿ: ಮರದಿಂದ ಬಿದ್ದು ವ್ಯಕ್ತಿ ಸಾವು

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಲೆನ್ಸಿ ಪಿಂಟೊ, ಉಪಾಧ್ಯಕ್ಷರಾಗಿ ಫ್ರಾನ್ಸಿಸ್ ವಿ.ವಿ ಅವಿರೋಧ ಆಯ್ಕೆ

Suddi Udaya
error: Content is protected !!