ಬೆಳ್ತಂಗಡಿ: ಪಿಲಿಗೂಡು ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಹಂತದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ ಹಾಗೂ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಗೆಲುವಿನಿಂದ ಶಾಲೆಗೆ ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ ದೊರಕಿರುತ್ತದೆ.
ಪ್ರಾಥಮಿಕ ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳು: ದೀಮಹಿ – ಧಾರ್ಮಿಕ ಪಠಣ (ಸಂಸ್ಕೃತ ) ಪ್ರಥಮ, ಸಾನಿಧ್ಯ – ಭಕ್ತಿಗೀತೆ ಪ್ರಥಮ, ಆಯುಷ್ – ಕನ್ನಡ ಕಂಠಪಾಠ ತೃತೀಯ
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳು: ಸಮನ್ವಿತ – ಧಾರ್ಮಿಕ ಪಠಣ (ಸಂಸ್ಕೃತ ) ಪ್ರಥಮ, ಸಾನಿಧ್ಯ – ಭಕ್ತಿಗೀತೆ ಪ್ರಥಮ, ಸಾನಿಧ್ಯ – ಅಭಿನಯ ಗೀತೆ ಪ್ರಥಮ, ದ್ವಿತಿ – ಕಥೆ ಹೇಳುವುದು ಪ್ರಥಮ, ಸಹಲಾ ಬಾನು – ಧಾರ್ಮಿಕ ಪಠಣ(ಅರೇಬಿಕ್) ಪ್ರಥಮ, ಆಯುಷ್ – ಇಂಗ್ಲಿಷ್ ಕಂಠಪಾಠ ದ್ವಿತೀಯ, ಹಿತ- ಚಿತ್ರಕಲೆ ತೃತೀಯ
ನಿಹಾನ್ – ಹಿಂದಿ ಕಂಠಪಾಠ ತೃತೀಯ ಸ್ಥಾನ ಪಡೆದಿದ್ದಾರೆ.














