November 5, 2026
ಪ್ರಮುಖ ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಬಿಷಪ್ ಜೇಮ್ಸ್ ಪಟ್ಟೇರಿಲ್‌ರ ಧರ್ಮಾಧ್ಯಕ್ಷ ದೀಕ್ಷೆಯ ಪ್ರಥಮ ವಾರ್ಷಿಕೋತ್ಸವ-ಮೌಲ್ಯಾಧಾರಿತ ಕುಟುಂಬಗಳ ಮತ್ತು ಬಡವರ ಸೇವೆಗೆ ಆದ್ಯತೆ: ಜೇಮ್ಸ್ ಪಟ್ಟೇರಿಲ್

ಬೆಳ್ತಂಗಡಿ: ಧರ್ಮಪ್ರಾಂತ್ಯದ ಬಿಷಪ್ ಮಾರ್ ಜೇಮ್ಸ್ ಪಟ್ಟೇರಿಲ್ ಅವರು ತಮ್ಮ ಮೊದಲ ವರ್ಷದ ಸೇವೆಯ ವಾರ್ಷಿಕೋತ್ಸವವನ್ನು ಸೈನ್ಟ್ ಲಾರೆನ್ಸ್ ಕಥೀಡ್ರಲ್ ಚರ್ಚ್ ನಲ್ಲಿ ಧರ್ಮಗುರುಗಳ, ಧರ್ಮಭಗಿನಿಯರ ಮತ್ತು ಕ್ರೈಸ್ತ ಬಾಂದವರೊಂದಿಗೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಅವರು ನೀಡಿದ ಸಂದೇಶದಲ್ಲಿ ಕುಟುಂಬಗಳ ಬಲವರ್ಧನೆ, ದೇವರ ಸೇವೆ ಮತ್ತು ಬಡವರಿಗೆ ಮನೆ ನಿರ್ಮಿಸಿಕೊಡುವ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಧರ್ಮಪ್ರಾಂತ್ಯದ ಭವಿಷ್ಯದ ಬೆಳವಣಿಗೆಗಾಗಿ ಮುಂದಿನ ಐದು ವರ್ಷಗಳ ಅಭಿವೃದ್ಧಿ ಯೋಜನೆಯನ್ನೂ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಧರ್ಮಪ್ರಾಂತ್ಯದ ವಿವಿಧ ಇಗರ್ಜಿಗಳಿಗೆ ಭೇಟಿ ನೀಡಿ ಗುರುಗಳು, ಧಾರ್ಮಿಕ ಜೀವನಕ್ಕೆ ಸಮರ್ಪಿಸಿಕೊಂಡವರು, ಕುಟುಂಬಗಳು ಮತ್ತು ವಿಶ್ವಾಸಿಗಳೊಂದಿಗೆ ಸಂವಾದ ನಡೆಸಿದ ಅನುಭವಗಳನ್ನು ಬಿಷಪ್ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಾರ್ಥನೆ, ಸಹಕಾರ ಮತ್ತು ಪ್ರೀತಿಯಿಂದ ಬೆಂಬಲಿಸಿದ ಧರ್ಮಪ್ರಾಂತ್ಯದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಧರ್ಮಪ್ರಾಂತ್ಯವನ್ನು ಆರಂಭದಿಂದ ಕಟ್ಟಿಬೆಳೆಸಿದ ಮೊದಲ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ಅವರನ್ನು ಗೌರವದಿಂದ ಸ್ಮರಿಸಿರುವ ಅವರು, ಇತ್ತೀಚೆಗೆ ನಿಧನರಾದ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆವ. ಡಾ. ಮಾಣಿ ವೆಳುತ್ತೇತ್ತುಪರಂಬಿಲ್ ಅವರ ಸೇವೆಯನ್ನು ನೆನಪಿಸಿಕೊಂಡು ಅವರ ಆತ್ಮಶಾಂತಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.

ಮೌಲ್ಯಾಧಾರಿತ ಕುಟುಂಬಗಳ ಬಲವರ್ಧನೆಗೆ ಒತ್ತು: ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಷಪ್, ಮಕ್ಕಳು ದೇವರ ಕೊಡುಗೆ ಎಂಬ ಮನೋಭಾವದೊಂದಿಗೆ ಕುಟುಂಬಗಳನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ಧರ್ಮಪ್ರಾಂತ್ಯದಲ್ಲಿ ನಾಲ್ಕನೇ ಮಗುವಿಗೆ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುವ ಯೋಜನೆ ಜಾರಿಯಲ್ಲಿದೆ. ಅಲ್ಲದೆ, ನಾಲ್ಕನೇ ಮಗುವಿನ ದೀಕ್ಷಾಸ್ನಾನದ ಸಂದರ್ಭದಲ್ಲಿ ತಾವೇ ಧರ್ಮಪಿತೃಯಾಗಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಮಕ್ಕಳನ್ನು ಬೆಳೆಸುವಲ್ಲಿ ಕುಟುಂಬಗಳಿಗೆ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವ ಸಮುದಾಯವನ್ನು ನಿರ್ಮಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಬಡ ಕುಟುಂಬಗಳಿಗೆ ಮನೆ ನಿರ್ಮಾಣ: ಸ್ವಂತ ಮನೆಯಿಲ್ಲದೆ ಬದುಕುತ್ತಿರುವ ಕುಟುಂಬಗಳ ಪರಿಸ್ಥಿತಿ ತಮ್ಮನ್ನು ಆಳವಾಗಿ ಕಾಡಿದೆ ಎಂದು ಬಿಷಪ್ ತಿಳಿಸಿದ್ದಾರೆ. ಜುಬಿಲಿ ವರ್ಷದ ಸಂದರ್ಭದಲ್ಲಿ ಧರ್ಮಪ್ರಾಂತ್ಯದ ವತಿಯಿಂದ ಹಲವು ಮನೆಗಳನ್ನು ನಿರ್ಮಿಸಿ ಅರ್ಹ ಕುಟುಂಬಗಳಿಗೆ ಹಸ್ತಾಂತರಿಸಿರುವುದು ದೇವರ ಅನುಗ್ರಹ ಎಂದು ಅವರು ಹೇಳಿದ್ದಾರೆ.
ಈ ಸೇವಾಕಾರ್ಯವನ್ನು ಮುಂದುವರಿಸಲು ಗುರುಗಳ ನೇತೃತ್ವದಲ್ಲಿ ವಿಶ್ವಾಸಿಗಳ ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದ್ದಾರೆ.

ಸಮೃದ್ಧ ಜೀವನದ ಧ್ಯೇಯ: ‘ಅವರಿಗೆ ಜೀವವುಂಟಾಗಲು, ಅದು ಸಮೃದ್ಧವಾಗಿ ಉಂಟಾಗಲು ನಾನು ಬಂದಿದ್ದೇನೆ’ ಎಂಬ ಯೇಸು ಕ್ರಿಸ್ತನ ವಾಕ್ಯವನ್ನು ತಮ್ಮ ಧ್ಯೇಯವಾಕ್ಯವನ್ನಾಗಿ ಸ್ವೀಕರಿಸಿರುವ ಬಿಷಪ್, ಕುಟುಂಬಗಳು, ಗುರುಗಳು, ಧಾರ್ಮಿಕ ಜೀವನಕ್ಕೆ ಸಮರ್ಪಿಸಿಕೊಂಡವರು ಹಾಗೂ ವಿಶ್ವಾಸಿಗಳ ಆಧ್ಯಾತ್ಮಿಕ ಬೆಳವಣಿಗೆಗೆ ಆದ್ಯತೆ ನೀಡಿದ್ದಾರೆ. ಧರ್ಮಪ್ರಾಂತ್ಯದ ಬಹುಪಾಲು ಜನರು ಕೃಷಿಕರಾಗಿರುವ ಹಿನ್ನೆಲೆಯಲ್ಲಿ ಅವರ ಸಮಸ್ಯೆ ಮತ್ತು ಸಂಕಷ್ಟಗಳಿಗೆ ಸ್ಪಂದಿಸುವ ಅಗತ್ಯವನ್ನೂ ಅವರು ಸ್ಮರಿಸಿದ್ದಾರೆ. ಹಿಂದಿನ ತಲೆಮಾರುಗಳು ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ನೈತಿಕತೆ ಹಾಗೂ ವಿಶ್ವಾಸವನ್ನು ಉಳಿಸಿಕೊಂಡ ಮಾದರಿಯನ್ನು ಇಂದಿನವರು ಅನುಸರಿಸಬೇಕು ಎಂದು ಕರೆ ನೀಡಿದ್ದಾರೆ.

ತಮ್ಮ ಮೊದಲ ವರ್ಷದ ಸೇವೆಯ ವಾರ್ಷಿಕೋತ್ಸವದ ಅಂಗವಾಗಿ ನ.5ರಂದು ಧರ್ಮಪ್ರಾಂತ್ಯದ ಎಲ್ಲಾ ದೇವಾಲಯಗಳು, ಸನ್ಯಾಸ ಭವನಗಳು ಮತ್ತು ಸಂಸ್ಥೆಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಒಟ್ಟಾಗಿ ಪ್ರಾರ್ಥಿಸಿ, ಒಟ್ಟಾಗಿ ಕೆಲಸ ಮಾಡಿ, ವಿಶ್ವಾಸದಲ್ಲಿ ಬೆಳೆಯುವ ಮೂಲಕ ಧರ್ಮಪ್ರಾಂತ್ಯವನ್ನು ಪ್ರೀತಿ ಮತ್ತು ಸೇವೆಯ ಸಮುದಾಯವನ್ನಾಗಿ ರೂಪಿಸೋಣ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

Related posts

ತೆಕ್ಕಾರು: ಬಾಜಾರು ಓಂ ರಾಮ್ ಫ್ರೆಂಡ್ಸ್ ಆಶ್ರಯದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

Suddi Udaya

ಉಜಿರೆ ಟಿಬಿ. ಕ್ರಾಸ್ ಬಳಿ ಕಾರು ಪಲ್ಟಿ: ಚಾಲಕ ಪ್ರಾಣಪಾಯದಿಂದ ಪಾರು

Suddi Udaya

ಉಜಿರೆ: ಗ್ರಾ.ಪಂ ಮಾಜಿ ಸದಸ್ಯ ಮುಹಮ್ಮದ್‌ ಕುಂಞಿ ನಿಧನ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿರುವ ದೂರು ನೀಡಿದ್ದ ಪ್ರಕರಣ ಸಾಕ್ಷಿ ದೂರುದಾರರ ಗುರುತನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ಹಿನ್ನೆಲೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಿಂದ ಇನ್ನೊಂದು ವಿಚಾರಣೆ ಪ್ರಾರಂಭ

Suddi Udaya

ಹೊಕ್ಕಾಡಿಗೋಳಿ ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಇದರ ಆಶ್ರಯದಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

Suddi Udaya

ಹಲವಾರು ಮೃತದೇಹ ಹೂತು ಹಾಕಿದ ದೂರು ಪ್ರಕರಣ ಧರ್ಮಸ್ಥಳ ಶೌಚಾಲಯದ ಸುತ್ತಮುತ್ತ ಸ್ಥಳ ಮಹಜರು

Suddi Udaya
error: Content is protected !!