ಬಂದಾರು : ಬಂದಾರು ಗ್ರಾಮ ಕುರಾಯ ನಿವಾಸಿ ದಿ. ಶಿವಪ್ಪ ಗೌಡರ ಪತ್ನಿ ಬಾಬಿ (91.ಪ್ರಾ ) ಅಲ್ಪಕಾಲದ ಅನಾರೋಗ್ಯದಿಂದ ಸೆ 20 ರಂದು ಸ್ವಗೃಹದಲ್ಲಿ ವಯೋಸಹಜ ಮರಣ ಹೊಂದಿದರು. ಮೃತರು ಮೂವರು ಗಂಡು ಮಕ್ಕಳಾದ ರುಕ್ಮಯ್ಯ ಗೌಡ, ಶಾಂತಪ್ಪ ಗೌಡ, ರಾಘವ ಗೌಡ,ಇಬ್ಬರು ಹೆಣ್ಣು ಮಕ್ಕಳಾದ ಲೀಲಾವತಿ,ಸುಶೀಲಾ , ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಅಪಾರ ಬಂಧು ಬಳಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.








