ಉಜಿರೆ: ಬೆಳ್ತಂಗಡಿಯಲ್ಲಿ ವಕೀಲ ವೃತ್ತಿಯಲ್ಲಿದ್ದ ಉಜಿರೆ ಗ್ರಾಮದ ನಿವಾಸಿ ಸರಸ್ವತಿ ಜೈನ್ (೬೯ವ) ಅಲ್ಪಕಾಲದ ಅನಾರೋಗ್ಯದಿಂದ ಸೆ.19ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಇವರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಅರೆಕಾಲಿಕ ಕಾನೂನು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಧರ್ಮಾನುರಾಗಿಯಾಗಿದ್ದ ಅವರು ೪೨ ಬಾರಿ ಶಿಖರ್ಜಿ ಯಾತ್ರೆ ಮತ್ತು 14 ವರ್ಷಗಳ ಅನಂತ ನೋಂಪಿ ಆಚರಿಸಿ, ಉದ್ಯಾಪನೆ (ಸಮಾರೋಪ) ಮಾಡಿದ್ದರು.
ಮೃತರು ಪುತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.











