28.3 C
ಪುತ್ತೂರು, ಬೆಳ್ತಂಗಡಿ
September 21, 2026
ಅಪರಾಧ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕೋಳಿ ಅಂಕದ ಮೇಲೆ ಪೊಲೀಸರ ದಾಳಿ: 17 ವಾಹನಗಳು ವಶಕ್ಕೆ ; 27 ಮಂದಿಯ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿ, ನಾಲ್ಕು ಹುಂಜ ಕೋಳಿಗಳು ಹಾಗೂ 17 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಡಕೋಡಿ ಗ್ರಾಮದ ಕಿರಿಂಬಿ ಎಂಬಲ್ಲಿ ನಡೆದಿದೆ.

ವೇಣೂರು ಠಾಣೆ ಪಿಎಸ್‌ಐ ಅಕ್ಷಯ್ ಡವಗಿ ಅವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಕರಿಮಣೇಲು, ಹೊಸಂಗಡಿ, ಬಡಕೋಡಿ ಭಾಗದಲ್ಲಿ ಸೆ.20 ರಂದು ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಬೀಟ್ ಸಿಬ್ಬಂದಿ ಪುಂಡಲಿಕಪ್ಪ ಅವರಿಗೆ ಬಡಕೋಡಿ ಗ್ರಾಮದ ಕಿರಿಂಬಿ ಬಳಿ ಅಕ್ರಮ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.ಮಾಹಿತಿಯಂತೆ ಸಂಜೆ ಸುಮಾರು 4.30ಕ್ಕೆ ಕಿರಿಂಬಿ ಸರ್ಕಾರಿ ಕೆರೆಯ ಬಳಿ ಪೊಲೀಸರು ತಲುಪಿದಾಗ, ಸುಮಾರು 25 ರಿಂದ 30 ಮಂದಿ ಗುಂಪಾಗಿ ಸೇರಿಕೊಂಡಿರುವುದು ಕಂಡುಬಂದಿದೆ. ಕೆಲವರ ಕೈಯಲ್ಲಿ ಹುಂಜ ಕೋಳಿಗಳಿದ್ದು, ಎರಡು ಕೋಳಿಗಳ ಕಾಲಿಗೆ ಹರಿತವಾದ ಬಾಲು ಕತ್ತಿ ಕಟ್ಟಿ ಪರಸ್ಪರ ಕಾದಾಡಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆರೋಪಿತರು ಕೋಳಿಗಳನ್ನು ಹಿಡಿದುಕೊಂಡು ವಿವಿಧ ದಿಕ್ಕುಗಳಲ್ಲಿ ಓಡಿ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಬಡಕೋಡಿ ಗ್ರಾಮದ ಕಿರಿಂಬೆ ನಿವಾಸಿ ಕೃಷ್ಣಪ್ಪ ಮಗ ಸುನೀಲ್ (34) ಹಾಗೂ ಹೊಸಂಗಡಿ ಗ್ರಾಮದ ಪೃಥ್ವಿ ನಿವಾಸದ ವಾಸು ಮೂಲ್ಯ ಮಗ ವಿಶ್ವನಾಥ (36) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಗಿಡಗಂಟಿಗಳಿಗೆ ಕಟ್ಟಿ ಹಾಕಲಾಗಿದ್ದ 4 ಹುಂಜ ಕೋಳಿಗಳು ಪತ್ತೆಯಾಗಿದ್ದು, ಅವುಗಳ ಪೈಕಿ ಒಂದು ಕೋಳಿಯ ಕಾಲಿಗೆ ಹರಿತವಾದ ಬಾಲು ಕತ್ತಿ ಕಟ್ಟಿರುವುದು ಕಂಡುಬಂದಿದೆ. ಅಲ್ಲದೆ ಸ್ಥಳದಲ್ಲಿ ರಕ್ತದ ಕಲೆಗಳು ಹಾಗೂ ಕೋಳಿಗಳ ರೆಕ್ಕೆ-ಪುಕ್ಕಗಳು ಬಿದ್ದಿದ್ದು, ಕೋಳಿ ಅಂಕ ನಡೆದಿರುವ ಕುರುಹುಗಳು ಪತ್ತೆಯಾಗಿವೆ. ಸ್ಥಳದಿಂದ ಸುಮಾರು 50 ಮೀಟರ್ ದೂರದಲ್ಲಿ ನಿಲ್ಲಿಸಲಾಗಿದ್ದ 17 ದ್ವಿಚಕ್ರ ವಾಹನಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವು ಪರಾರಿಯಾದ ಆರೋಪಿತರಿಗೆ ಸೇರಿದ ವಾಹನಗಳೆಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಸಂಪತ್ ವೇಣೂರು, ಸುಶಾನ್ ಕುರ್ಲೊಟ್ಟು, ಪ್ರಶಾಂತ್ ಕುರ್ಲೊಟ್ಟು, ಭರತ್ ಹೊಸಂಗಡಿ, ಹರೀಶ್ ಹೊಸಂಗಡಿ, ಸುರೇಂದ್ರ ಪೆರಿಂಜೆ, ಇಬ್ರಾಹಿಂ ವೇಣೂರು, ಶಾಹಿದ್ ವೇಣೂರು, ನಾಗೇಶ್ ವೇಣೂರು, ಸತೀಶ್ ಕುರ್ಲೊಟ್ಟು, ಶಿವಾನಂದ ಕಿರಿಂಬೆ, ಪ್ರದೀಪ್ ಪೆರಿಂಜೆ, ಕಿರಣ್ ಪೆರಿಂಜೆ, ದೀಕ್ಷಿತ್ ನೀರೋಲ್ಬೆ, ಸತೀಶ್ ನೀರೋಲ್ಬೆ, ಲೋಕೇಶ್ ನೀರೋಲ್ಬೆ, ಗಣೇಶ್ ಮಡಿವಾಳ ಪೆರಿಂಜೆ, ಹರೀಣ್ ಸುವರ್ಣ ಮುದ್ದಾಡಿ, ಸುನೀಲ್ ಮೂಡುಕೋಡಿ, ನಿತ್ಯಾನಂದ ಕರೀಮಣೇಲು, ಶಿವಪ್ರಸಾದ್ ಕಲ್ಕಡ್ತಿಮಾರ್, ಮಹೇಶ್ ಪಿಲಕೊಡಂಗೆ, ಪ್ರವೀಣ್ ಕುಮಾರ್ ಕುಕ್ಕಿಪಾಡಿ, ಸುದೀಕ್ಷ್ ಸಾವ್ಯ ಸೇರಿದಂತೆ ಒಟ್ಟು 27 ಮಂದಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿತರು ಹಣವನ್ನು ಪಣವಾಗಿಟ್ಟು ಅಕ್ರಮ ಕೋಳಿ ಅಂಕ ಆಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87, 93, ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಕಲಂ 3, 11(1)(m)(ii), 11(1)(n) ಹಾಗೂ ಬಿಎನ್‌ಎಸ್ 2023ರ ಕಲಂ 112ರ ಅಡಿಯಲ್ಲಿ ಪ್ರಕರಣ ದಾಖಲಾಯಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related posts

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಮಾ.13: ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ, ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಹಾಗೂ ಸಾಧನ ಸಲಕರಣೆ, ಕೃಷಿ ಸಾಧನಾ ಸಲಕರಣೆ ವಿತರಣೆ

Suddi Udaya

ಮಡಂತ್ಯಾರು : ಕುಕ್ಕಳದಲ್ಲಿ ಅಪಾಯದಂಚಿನಲ್ಲಿರುವ ವಿದ್ಯುತ್ ಕಂಬ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಿಂದ ಮಾಜಿ ಶಾಸಕ ದಿ| ವಸಂತ ಬಂಗೇರರಿಗೆ ನುಡಿನಮನ

Suddi Udaya

ಬಂದಾರು ಗ್ರಾಮ ಓಟೆಚ್ಚಾರಿನಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಮತ್ತು ಸೊತ್ತುಗಳಿಗೆ ಹಾನಿ

Suddi Udaya

ಉಜಿರೆ ಎಸ್ ಡಿ ಎಮ್ ಪ. ಪೂ. ಕಾಲೇಜು : ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಜಲ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ

Suddi Udaya
error: Content is protected !!