ಮಡಂತ್ಯಾರು: ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿ ವತಿಯಿಂದ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಭಾಭವನ ಶಾಖೆ ,ಮಡಂತ್ಯಾರು, ಬೆಳ್ತಂಗಡಿ ಇಲ್ಲಿ ಕಳೆದ 56 ದಿನಗಳಿಂದ ನಡೆಯುತ್ತಿರುವ ಯೋಗ ತರಗತಿಯಲ್ಲಿ ಸೆ.20ರಂದು ಮಾತೃ ವಂದನಾ, ಮಾತೃಭೋಜನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀಮತಿ ಸ್ಮಿತಾ ,ಮುಖ್ಯ ಅತಿಥಿಗಳಾಗಿ ಧನಲಕ್ಷ್ಮಿ ಭಾಗವಹಿಸಿದರು. ಮುಖ್ಯ ಮಾತುಗಾರರಾದ ಅಶೋಕ್ ರವರು ನಮ್ಮ ಜೀವನದಲ್ಲಿ ಅಮ್ಮನ ಪಾತ್ರದ ಬಗ್ಗೆ ನೆನಪಿಸಿ, ಹೆತ್ತವರನ್ನು ಹಿರಿಯರನ್ನು ನಾವು ಯಾವಾಗಲೂ ಗೌರವದಿಂದ ನಡೆಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರು, ಯೋಗ ತರಬೇತಿ ಪಡೆದವರು ಸಾರ್ವಜನಿಕರ ಸಮೇತ 130 ಮಂದಿ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಯೋಗಪಟುಗಳೆ ತಯಾರಿಸಿ ತಂದಿರುವ ಆಹಾರವನ್ನು ಕೈ ತುತ್ತಿನ ಮೂಲಕ ವಿತರಿಸುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.
ತುಳಸಿ ನಿರೂಪಣೆ ಮಾಡಿದರು.ಅನುಪಮ ಸ್ವಾಗತಿಸಿ, ಪ್ರವಿತ ವರದಿ ವಾಚನ ಮಾಡಿದರು. ಆಶಾ ವಂದಿಸಿದರು.











