29.4 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಾತೃ ವಂದನೆ ಹಾಗೂ ಮಾತೃಭೋಜನದ ಮೂಲಕ ಮಾತೃಶಕ್ತಿಗೆ ಗೌರವ

ಮಡಂತ್ಯಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕದ ಶ್ರೀ ಅನಂತೇಶ್ವರ ಸ್ವಾಮಿ ಸಮುದಾಯ ಭವನ, ಮಚ್ಚಿನ ಶಾಖೆಯ ವತಿಯಿಂದ ಕಳೆದ 56 ದಿನಗಳಿಂದ ನಡೆಯುತ್ತಿರುವ ಯೋಗ ತರಗತಿಯ ಅಂಗವಾಗಿ ಸೆ. 20ರಂದು ಮಾತೃ ವಂದನಾ ಹಾಗೂ ಮಾತೃಭೋಜನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮಿತಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ SDS ಇವೆಂಟ್ ಮ್ಯಾನೇಜ್‌ಮೆಂಟ್‌ನ ಮಾಲಕ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕದ ಜಿಲ್ಲಾ ಪ್ರಾಂತ ಸಂಚಾಲಕ ಹರೀಶ್ ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿ ನೀಡುವ ಪ್ರೀತಿ, ತ್ಯಾಗ, ಸಂಸ್ಕಾರ ಹಾಗೂ ಮಮತೆಯನ್ನು ಜೀವನದುದ್ದಕ್ಕೂ ಸ್ಮರಿಸಬೇಕು. ಹೆತ್ತವರನ್ನು ಹಾಗೂ ಹಿರಿಯರನ್ನು ಸದಾ ಗೌರವದಿಂದ ಕಾಣುವುದು ನಮ್ಮ ಕರ್ತವ್ಯವಾಗಿದ್ದು, ಮಾತೃ–ಪಿತೃ ಭಕ್ತಿಯೊಂದಿಗೆ ಉತ್ತಮ ಸಂಸ್ಕಾರಯುತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರು, ಯೋಗ ತರಬೇತಿ ಪಡೆಯುತ್ತಿರುವ ಯೋಗಪಟುಗಳು ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು 202 ಮಂದಿ ಭಾಗವಹಿಸಿದ್ದರು. ವಿಶೇಷವಾಗಿ ಯೋಗಪಟುಗಳೇ ತಮ್ಮ ಮನೆಗಳಿಂದ ವಿವಿಧ ರೀತಿಯ ಸಾತ್ವಿಕ ಆಹಾರವನ್ನು ಸಿದ್ಧಪಡಿಸಿ ತಂದು, ಪರಸ್ಪರ ಪ್ರೀತಿಯಿಂದ ಹಂಚಿಕೊಂಡು ಮಾತೃಭೋಜನವನ್ನು ವಿಶಿಷ್ಟವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಕೈತುತ್ತಿನ ಮೂಲಕ ಆಹಾರವನ್ನು ಪರಸ್ಪರ ವಿತರಿಸುವ ಮೂಲಕ ಮಾತೃಭೋಜನ ಕಾರ್ಯಕ್ರಮವು ಆತ್ಮೀಯವಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ಲೋಲಾಕ್ಷಿ ನಿರೂಪಿಸಿದರು. ನಿಶಾಲತಾ ಸ್ವಾಗತಿಸಿದರು. ವಿನೋದ ಕಾರ್ಯಕ್ರಮದ ವರದಿ ವಾಚನ ಮಾಡಿದರು. ಪ್ರಮೀಳಾ ವಂದಿಸಿದರು.

Related posts

ಪೆರ್ಲ ಬೈಪಾಡಿ ಹಿ.ಪ್ರಾ. ಶಾಲೆಯ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ

Suddi Udaya

ಸುಲ್ಕೇರಿಮೊಗ್ರು : ಸಾನ್ವಿಯ 10ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ; ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

ಉಜಿರೆ “ಕನಸಿನ ಮನೆ” ಕೆ. ಮೋಹನ್ ಕುಮಾರ್‌ರ ವಿಭಿನ್ನ ಕಲ್ಪನೆಯಲ್ಲಿ ತಲೆಎತ್ತಿ ನಿಂತಿದೆ-ಬ್ರಹ್ಮಕಲಶೋತ್ಸವದಲ್ಲಿ ಮನಸೆಳೆಯುತ್ತಿರುವ “ಸುಪ್ರಸಾದ” ಭೋಜನಾಲಯ

Suddi Udaya

ಬೆಳ್ತಂಗಡಿ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಎಸ್.ಡಿ.ಎಂ ಪ.ಪೂರ್ವ ಕಾಲೇಜಿನಲ್ಲಿ ‘ಆರೋಹಣಂ – 2025’ ವಾರ್ಷಿಕೋತ್ಸವ ಸಮಾರಂಭ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಸತೀಶ್ ಹೊಳ್ಳರವರಿಗೆ ಸೇವಾ ನಿವೃತ್ತಿ

Suddi Udaya
error: Content is protected !!