30.5 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೆ. 22 (ನಾಳೆ) : ಉಜಿರೆ ಓಷಿಯನ್ ಪರ್ಲ್ ನಲ್ಲಿ ಇಂಜಿನಿಯರ್ಸ್ ಡೇ ಆಚರಣೆ; ಬೆಳ್ತಂಗಡಿ-ಉಜಿರೆ ವಾಹನ ಜಾಥಾ: ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಬೆಳ್ತಂಗಡಿ : ಸರ್ ಎಂ. ವಿಶ್ವೇಶ್ವರಯ್ಯನವರ 165ನೇ ಜನ್ಮದಿನಾಚರಣೆ ಅಂಗವಾಗಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್ ಬೆಳ್ತಂಗಡಿ ಘಟಕದ ವತಿಯಿಂದ ಸೆ. 22 ರಂದು ಸಂಜೆ ಉಜಿರೆ ಓಷನ್ ಪರ್ಲ್ ನಲ್ಲಿ ಇಂಜಿನಿಯರ್ಸ್ ದಿನಾಚರಣೆ ನಡೆಯಲಿದ್ದು, ಇದರ ಅಂಗವಾಗಿ ಬೆಳ್ತಂಗಡಿಯಿಂದ ಉಜಿರೆ ತನಕ ಬೆಳಿಗ್ಗೆ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಬಂಗೇರ ಎಂ. ಡಿ. ಹೇಳಿದರು.

ಅವರು ಸೆ. 21 ರಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿ, ಬೆಳಿಗ್ಗೆ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್‌ಗಳ ವಿವಿಧ ಬೇಡಿಕೆಗಳ ಮನವಿಯನ್ನು ಸರಕಾರಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಸಲ್ಲಿಸಿ, ಬಳಿಕ ವಾಹನ ರ‍್ಯಾಲಿ ನಡೆಯಲಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ಇಂಜಿನಿಯರ್ ಮಹಾವೀರ ಆರಿಗಾ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಉಜಿರೆಯ ಎಸ್‌ಡಿಎಂಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಹಾಗೂ ಪಾಲಿಟೇಕ್ನಿಕ್ ವಿದ್ಯಾರ್ಥಿಗಳಿಗೆ ಇಂಜಿನಿಯರ್‌ಗಳ ವೃತ್ತಿಪರ ಜವಾಬ್ದಾರಿ, ತಾಂತ್ರಿಕ ಜ್ಞಾನ ಮತ್ತು ಸಾಮಾಜಿಕ ಬದ್ಧತೆಯನ್ನು ತಿಳಿಸುವ ಉದ್ದೇಶದಿಂದ ಮಾಹಿತಿ ಕಾರ್ಯಾಗಾರ ನಡೆಯಲಿದೆ.

ಸಂಜೆ ಓಷನ್ ಪರ್ಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲಬಾವಿ, ಉಡುಪಿಯ ಅಧ್ಯಕ್ಷರು ಹಾಗೂ ರಾಷ್ಟ್ರೀಯ ನಿರ್ದೇಶಕ ಭಗವಾನ್‌ದಾಸ್ ಕೆ. ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಹಾಗೂ ಮಂಗಳೂರು-ಮೈಸೂರು ವಿಭಾಗದ ಕೆಸಿಪಿಸಿಇ ಸ್ಥಾಪಕ ಸದಸ್ಯ ಜಗದೀಶ್ ಪ್ರಸಾದ್ ಕೆಪಿಸಿಇಎ ಕಾಯ್ದೆಯ ಬಗ್ಗೆ ಮಾತನಾಡಿ, ಸಿವಿಲ್ ಇಂಜಿನಿಯರ‍್ಸ್‌ಗಳ ಕಾರ್ಯಕ್ಷಮತೆ, ಜವಾಬ್ದಾರಿ, ಕಟ್ಟಡ ಸುರಕ್ಷತೆ ಬಗ್ಗೆ ಸಿವಿಲ್ ಇಂಜಿನಿಯರ‍್ಸ್ ಕೌನ್ಸಿಲ್ ರಚನೆ ಆಗಿದೆ. ಸಿವಿಲ್ ಇಂಜನಿಯರ್ ಕೆಲಸ ಮಾಡುವವರಿಗೆ ಜಬಾಬ್ದಾರಿಯಿದೆ. ನಿರ್ಮಾಣದಲ್ಲಿ ವ್ಯತ್ಯಾಸವಾದಲ್ಲಿ, ಕಳಪೆ ಕಾಮಗಾರಿ, ಕಟ್ಟಡ ಕುಸಿತ ಮೊದಲಾದ ಘಟನೆಗಳು ನಡೆದಲ್ಲಿ ಅದಕ್ಕೆ ಇಂಜಿನಿಯರ್ ಜವಾಬ್ದಾರಿಯಾಗುತ್ತಾನೆ. ಯಾವುದೇ ವಿದ್ಯಾರ್ಹತೆ ಇಲ್ಲದವರು ಈಗ ಕೆಲಸ ಮಾಡಿಸುತ್ತಿದ್ದಾರೆ. ಈ ಕಾಯ್ದೆ ಜಾರಿಗೆ ಬಂದಾಗ ಸಿವಿಲ್ ಇಂಜಿನಿಯರ್ ಸೂಪರ್‌ವೈಸಿಂಗ್ ಇಲ್ಲದೆ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಸಾರ್ವಜನಿಕ ಹಿತದೃಷ್ಟಿ ಮತ್ತು ಸುರಕ್ಷತೆಯ ಹಿನ್ನಲೆಯಲ್ಲಿ ಕೆಪಿಸಿಇಎ ಕಾಯ್ದೆಯನ್ನು ಶೀಘ್ರವಾಗಿ ಪರಿಣಾಮಕಾರಿಯಾಗಿಉ ಅನುಷ್ಠಾನಗೊಳಿಸಬೇಕು ಎಂಬುದು ಸರಕಾರಕ್ಕೆ ನಮ್ಮ ಪ್ರಮುಖ ಬೇಡಿಕೆಯಾಗಿದೆ.

ಕೌನ್ಸಿಲ್ ರಚನೆ ಆಗಿ ಎರಡು ವರ್ಷ ಆದರೂ ಸರಕಾರ ಇದರ ಕಾನೂನು ನಿಯಮಗಳನ್ನು ಜಾರಿ ಮಾಡಿಲ್ಲ, ಸರಕಾರ ಶೀಘ್ರ ಜಾರಿ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು ಹೇಳಿದರು. ಮರಳು ಮತ್ತು ಕಲ್ಲಿನ ಸಮಸ್ಯೆಗೆ ಇಲಾಖೆಗಳ ನಡುವಿನ ಸಮನ್ವಯತೆ ಇಲ್ಲದಿರುವುದು ಕಾರಣವಾಗಿದೆ. ಇದರ ಬಗ್ಗೆ ಅಸೋಸಿಯೇಷನ್‌ನಿಂದ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಶಿಜೋ ಜೋಸೆಫ್, ಕೋಶಾಧಿಕಾರಿ ನಾಗೇಶ್ ಎಂ. ಉಪಸ್ಥಿತರಿದ್ದರು.

Related posts

ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಗಳೂರು ರಾಜೀವ ಗಾಂಧಿ ವಿಶ್ವವಿದ್ಯಾಲಯ ಕುಲಪತಿ ಡಾ. ಭಗವಾನ್ ಬಿ.ಸಿ ಭೇಟಿ

Suddi Udaya

ಪಟ್ರಮೆ: ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಅಪಘಾತ

Suddi Udaya

ಮದ್ದಡ್ಕ : ಬೈಕ್ ಮತ್ತು ಕಾರು ಭೀಕರ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ

Suddi Udaya

ಡಿ.28-ಜ.2: ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ , ತಾಲೂಕು ಸಮಿತಿಯ ಆಶ್ರಯದಲ್ಲಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ‘ವಾಲ್ಮೀಕಿ ಜೀವನಾದರ್ಶ’ ಉಪನ್ಯಾಸ ಕಾರ್ಯಕ್ರಮ

Suddi Udaya

ಪುಂಜಾಲಕಟ್ಟೆ : ಭರತನಾಟ್ಯ ತರಗತಿ ಉದ್ಘಾಟನೆ

Suddi Udaya
error: Content is protected !!