September 22, 2026
Uncategorized

ಮುಂಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ : ಸಂಘ ರೂ.2.03 ಲಕ್ಷ ಲಾಭದಲ್ಲಿ ಮುನ್ನಡೆಯುತ್ತಿದೆ: ಯಾದವ ಕುಲಾಲ್

ಮುಂಡೂರು: ಮುಂಡೂರು ಗ್ರಾಮದ ದುರ್ಗಾನಗರ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಯಾದವ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಸೆ.12 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರುಗಿತು.
ಕಾರ್ಯದರ್ಶಿ ಕು.ಚೈತನ್ಯ 2025-26ನೇ ವರದಿ ವಾಚಿಸಿದರು. ಸಂಘಕ್ಕೆ 2025-26 ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕುತ್ತಿರುವ (ಪ್ರ) ರಾಜೀವ ಸುವರ್ಣ, (ದ್ವಿ) ರೋಶನ್ ಡಿ ಸೋಜ ಹಾಗೂ ಅತೀ ಹೆಚ್ಚು ಪಶುಆಹಾರ ಬಳಸಿದ ಶ್ರೀಮತಿ ಪದ್ಮಾವತಿ, ಹಿರಿಯ ನಾಗರಿಕರಾದ ಜಿನ್ನಪ್ಪ ಬಂಗೇರ ಇವರಿಗೆ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಅವರು ಮಾತನಾಡಿ, ಸಂಘದಲ್ಲಿ ಪ್ರಸ್ತುತ 600 ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು.

ವಿಸ್ತರಣಾಧಿಕಾರಿ ರಾಜೇಶ್ ಪಿ.ಕೆ ಅವರು ಒಕ್ಕೂಟದಿಂದ ಸಿಗುವ ವಿವಿಧ ಯೋಜನೆಗಳ ಬಗ್ಗೆ ಹಾಗೂ ಈರೋಡ್‌ನಿಂದ ದನ ಖರೀದಿಯ ಕುರಿತು ಮಾಹಿತಿ ನೀಡಿ, ವರದಿ ಸಾಲಿನಲ್ಲಿ ಸಂಘ ಅತೀ ಹೆಚ್ಚು ಲಾಭ ಗಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಯಾದವ ಕುಲಾಲ್ ಅವರು ಮಾತನಾಡಿ, ಸಂಘವು ಪ್ರಸಕ್ತ ವರ್ಷ ರೂ.2,03,128.94 ಲಾಭದಲ್ಲಿ ಮುನ್ನಡೆಯುತ್ತಿದೆ. ಸಂಘದಲ್ಲಿ ಹಾಲು ಸಂಗ್ರಹವನ್ನು ಹೆಚ್ಚಿಸಲು ಹೈನುಗಾರರು ಸಹಕರಿಸಬೇಕು, ನಂದಿನಿ ಪಶು ಆಹಾರವನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಜಗನ್ನಾಥ್ ಆಚಾರ್ಯ, ಜಿನ್ನಪ್ಪ ಬಂಗೇರ, ಅಲೆಕ್ಸ್ ವೇಗಸ್, ದೇಜಪ್ಪ ಪರನೀರು, ಯುಮುನಾ ನಾಯ್ಕ, ಆನಂದ ಆಚಾರ್ಯ, ವಿಶ್ವನಾಥ ಶೆಟ್ಟಿ, ಚಾಮರಾಜ ಸೇಮಿತಾ, ನೀತಾ, ರೇವತಿ, ಹರಿಶ್ಚಂದ್ರ ಹೆಗ್ಡೆ ಉಪಸ್ಥಿತರಿದ್ದರು. ಶ್ರೀಮತಿ ರೇವತಿ ಮತ್ತು ಚೈತನ್ಯ ಇವರ ಪ್ರಾರ್ಥನೆ ಬಳಿಕ ಉಪಾಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿ, ನಿದೇರ್ಶಕ ಚಾಮರಾಜ ಸೇಮಿತ ಧನ್ಯವಾದವಿತ್ತರು. ಹಾಲು ಪರೀಕ್ಷಕಿ ಶ್ರೀಮತಿ ರೇವತಿ ಸಹಕರಿಸಿದರು.

Related posts

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮತ್ತಷ್ಟು ವಿಘ್ನ : ಚುನಾವಣೆಯಲ್ಲಿ ನಿಯಮಗಳ ಉಲ್ಲಂಘನೆ ಮೂರು ಮಂದಿ ನಿರ್ದೇಶಕರಿಂದ ಚುನಾವಣಾಧಿಕಾರಿಗಳಿಗೆ ಮನವಿ

Suddi Udaya

ಕೊಯ್ಯೂರು ಮಾಧವ ಶೆಟ್ಟಿಗಾರ್ಮನೆ ಬಳಿ ಗುಡ್ಡ ಕುಸಿತಸ್ಥಳಕ್ಕೆ ಗ್ರಾ.ಪಂ ಕಾಯ೯ದಶಿ೯ ಪರಮೇಶ್ವರ್ ಭೇಟಿ – ಪರಿಶೀಲನೆ

Suddi Udaya

ಬರೆಂಗಾಯ ದ.ಕ.ಜಿ.ಪ.ಸ.ಉ.ಹಿ.ಪ್ರಾ ಶಾಲಾ ಅಮೃತ ಮಹೋತ್ಸವ : ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಗೌರವಾರ್ಪಣೆ

Suddi Udaya

ಚಿನ್ನಾಭರಣ ಪರೀಕ್ಷಕರನ್ನು ವಜಾ ಮಾಡಿರುವ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಬೇಕೆಂದು ಅಗ್ರಹಿಸಿ ಕೊಕ್ಕಡ ಕೆನರಾ ಬ್ಯಾಂಕ್ ಮ್ಯಾನೇಜರ್ ಮೂಲಕ ಕೇಂದ್ರ ಕಚೇರಿಗೆ ಮನವಿ

Suddi Udaya

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಿಶೋರ್ ಕುಮಾರ್ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು

Suddi Udaya
error: Content is protected !!