ಬೆಳ್ತಂಗಡಿ : ಕಥೊಲಿಕ್ ಮಹಿಳೆಯರ ಮಂಡಳಿ, ಬೆಳ್ತಂಗಡಿ ವಲಯ ಮಟ್ಟದ ಕನ್ಯಾ ಮರಿಯಮ್ಮ ರವರ ಹುಟ್ಟು ಹಬ್ಬ ಹಾಗೂ ತೆನೆ ಹಬ್ಬದ ಕೂಟವನ್ನು ಬೆಳ್ತಂಗಡಿ ಚರ್ಚ್ ನ ಹೋಲಿ ರೆಡೀಮರ್ ಸಭಾಂಗಣದಲ್ಲಿ ಸೆ.20 ರಂದು ಹಮ್ಮಿಕೊಳ್ಳಲಾಯಿತು.
ವೇದಿಕೆಯಲ್ಲಿ ಬೆಳ್ತಂಗಡಿ ಹೋಲಿ ರೆಡಿಮೆರ್ ವಲಯ ಮಟ್ಟದ ಧರ್ಮಗುರುಗಳಾದ ವಂ.ಫಾ.ವಾಲ್ಟರ್ ಡಿಮೆಲ್ಲೊ, ಬೆಳ್ತಂಗಡಿ ವಲಯದ ನಿರ್ದೇಶಕರಾದ ವಂ.ಫಾ.ಆಬೆಲ್ ಲೋಬೊ,ವಲಯ ಅಧ್ಯಕ್ಷೆ ಗ್ರೇಸಿ ಲೋಬೊ, ವಲಯ ಕಾರ್ಯದರ್ಶಿ ಲೀನಾ ಕ್ರಾಸ್ತ , ಬೆಳ್ತಂಗಡಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಸಂಯೋಜಕ ತೋಮಸ್ ಪಿಂಟೊ, ಬೆಳ್ತಂಗಡಿ ಕನ್ಯಾ ಮಠದ ಧರ್ಮ ಭಗಿನಿಯರಾದ ಸಿ.ಜೆಸಿಂತಾ ಬಾರೆಟ್ಟೊ ಉಪಸ್ಥಿತರಿದ್ದರು.

ಹಾಗೆಯೇ 12 ಚರ್ಚ್ ಘಟಕದ 350 ಮಹಿಳೆಯರು ಭಾಗವಹಿಸಿದ್ದರು. ಹೂಗುಚ್ಚ ತಯಾರಿಕೆ ಸ್ಪರ್ಧೆ, ಜಪಸರ ಸ್ಪರ್ಧೆ ಹಾಗೂ ವೆಲಂಕಣಿ ಮಾತೆಯ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಸಾಂಸ್ಕ್ರತಿಕ ಕಾರ್ಯಕ್ರಮವನ್ನು 12 ಚರ್ಚ್ ಘಟಕದವರು ನಡೆಸಿಕೊಟ್ಟರು.
ಬೆಳ್ತಂಗಡಿ ವಲಯದ ಚರ್ಚ್ ಘಟಕದ ವಿಶೇಷ ಸಾಧನೆ ಗೈದ ಒಬ್ಬೊಬ್ಬ ಸದಸ್ಯೆಯರನ್ನು ಸನ್ಮಾನಿಸಲಾಯಿತು. ವಲಯ ಅಧ್ಯಕ್ಷೆ ಗ್ರೇಸಿ ಲೋಬೊ ಬೆಳ್ತಂಗಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನತಾಲಿಯ ವೇಗಸ್ ಮತ್ತು ಶ್ರೀಮತಿ ಜ್ಯೋತಿ ಪ್ರಿಯಾ ಡಿಕುನ್ಹಾ ವೇಣೂರು ಕಾರ್ಯಕ್ರಮ ನಿರೂಪಿಸಿದರು. ವಲಯ ಕಾರ್ಯದರ್ಶಿ ಲೀನಾ ಕ್ರಾಸ್ತಾ ಅಳದಂಗಡಿ ವಂದಿಸಿದರು.











