28.6 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದು ಸುವರ್ಣಾಕ್ಷರಗಳಲ್ಲಿ ಬರೆಯುವ ವಿಚಾರ: ಅಲ್ಫೋನ್ಸ್ ಫ್ರಾಂಕೋ

ಬೆಳ್ತಂಗಡಿ: ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆತಿರುವುದು ತುಳುನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ಮಹತ್ವದ ವಿಚಾರವಾಗಿದೆ ಎಂದು ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಾಲಕ ಅಲ್ಫೋನ್ಸ್ ಫ್ರಾಂಕೋ ಸಂತಸ ವ್ಯಕ್ತಪಡಿಸಿದರು.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಬುದ್ಧಿವಂತರು, ವಿದ್ಯಾವಂತರ ನಾಡಾಗಿದ್ದು, ಇಲ್ಲಿ ತುಳು ಭಾಷೆಗೆ ಜಾತಿ, ಮತ, ಧರ್ಮದ ಯಾವುದೇ ಅಡ್ಡಿ-ಆತಂಕಗಳು ಎದುರಾಗಿಲ್ಲ. ತುಳುನಾಡಿನ ಜನರು ತಮ್ಮ ದೈನಂದಿನ ಬದುಕಿನ ವ್ಯವಹಾರಗಳಲ್ಲಿ ತುಳು ಭಾಷೆಯನ್ನು ಬಳಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಇಲ್ಲಿ ವಿವಿಧ ಸಮುದಾಯಗಳ ಜನರು ತುಳುನಾಡಿನ ಮಣ್ಣಿನ ಮಕ್ಕಳಾಗಿ ತುಳು ಭಾಷೆಯೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದಾರೆ. ಹಲವು ವರ್ಷಗಳ ಆಶಯಕ್ಕೆ ಅಧಿಕೃತ ಮಾನ್ಯತೆ ದೊರೆತಿರುವುದು ತುಳು ಭಾಷೆಗೆ ಮತ್ತಷ್ಟು ಜೀವ ತುಂಬಿದಂತಾಗಿದೆ. ಇದು ತುಳುವರ ಬಹುದಿನಗಳ ನಿರೀಕ್ಷೆಗೆ ನ್ಯಾಯ ದೊರೆತ ಸಂತಸದ ಕ್ಷಣವಾಗಿದೆ ಎಂದರು.

ತುಳುನಾಡು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿ, ತುಳು ಭಾಷೆ ಹಾಗೂ ಸಂಸ್ಕೃತಿಯ ದೀಪ ಮತ್ತಷ್ಟು ಪ್ರಕಾಶಿಸಲಿ. ನಾವೆಲ್ಲರೂ ತುಳುವನ್ನು ಮಾತನಾಡುವ ಮೂಲಕ, ತುಳು ಭಾಷೆಯನ್ನು ಬೆಳೆಸುವ ಮೂಲಕ ಸಮೃದ್ಧ ಹಾಗೂ ಸುಂದರ ತುಳುನಾಡು ಕಟ್ಟುವ ಸಂಕಲ್ಪ ಮಾಡೋಣ ಎಂದು ಅಲ್ಫೋನ್ಸ್ ಫ್ರಾಂಕೋ ಹೇಳಿದರು.

Related posts

ಚಾರ್ಮಾಡಿ: ಆಡಿಮಾರು ಇಂದಿರಾ ಮೋಹನ್ ಮನೆಗೆ ಬಿದ್ದ ಬೃಹತ್ ಮರ:ಶೌರ್ಯ ಘಟಕದ ಸ್ವಯಂ ಸೇವಕರಿಂದ ತೆರವುಗೊಳಿಸುವ ಕಾರ್ಯ

Suddi Udaya

ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಅಳದಂಗಡಿ: ಭಜನಾ ಸತ್ಸಂಗ ಕುಣಿತ ಭಜನೆ ಪೂರ್ವಭಾವಿ ಸಭೆ

Suddi Udaya

ಪುಂಜಾಲಕಟ್ಟೆ ಕೆ.ಪಿ.ಎಸ್ ಸರಕಾರಿ ಪ.ಪೂ. ಕಾಲೇಜು ವಾರ್ಷಿಕೋತ್ಸವ

Suddi Udaya

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 13504 ಅಂತರದಿಂದ ಮುನ್ನಡೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕಾರ್ಯಾಲಯ ಹಾಗೂ ಭಜನೋತ್ಸವ ಸಮಿತಿಯ ಸಮಾಲೋಚನಾ ಸಭೆ

Suddi Udaya
error: Content is protected !!