
ಮುಂಡೂರು: ಮುಂಡೂರು ಗ್ರಾಮದ ದುರ್ಗಾನಗರ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಯಾದವ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಸೆ.12 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರುಗಿತು.
ಕಾರ್ಯದರ್ಶಿ ಕು.ಚೈತನ್ಯ 2025-26ನೇ ವರದಿ ವಾಚಿಸಿದರು. ಸಂಘಕ್ಕೆ 2025-26 ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕುತ್ತಿರುವ (ಪ್ರ) ರಾಜೀವ ಸುವರ್ಣ, (ದ್ವಿ) ರೋಶನ್ ಡಿ ಸೋಜ ಹಾಗೂ ಅತೀ ಹೆಚ್ಚು ಪಶುಆಹಾರ ಬಳಸಿದ ಶ್ರೀಮತಿ ಪದ್ಮಾವತಿ, ಹಿರಿಯ ನಾಗರಿಕರಾದ ಜಿನ್ನಪ್ಪ ಬಂಗೇರ ಇವರಿಗೆ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಅವರು ಮಾತನಾಡಿ, ಸಂಘದಲ್ಲಿ ಪ್ರಸ್ತುತ 600 ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು.

ವಿಸ್ತರಣಾಧಿಕಾರಿ ರಾಜೇಶ್ ಪಿ.ಕೆ ಅವರು ಒಕ್ಕೂಟದಿಂದ ಸಿಗುವ ವಿವಿಧ ಯೋಜನೆಗಳ ಬಗ್ಗೆ ಹಾಗೂ ಈರೋಡ್‌ನಿಂದ ದನ ಖರೀದಿಯ ಕುರಿತು ಮಾಹಿತಿ ನೀಡಿ, ವರದಿ ಸಾಲಿನಲ್ಲಿ ಸಂಘ ಅತೀ ಹೆಚ್ಚು ಲಾಭ ಗಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಯಾದವ ಕುಲಾಲ್ ಅವರು ಮಾತನಾಡಿ, ಸಂಘವು ಪ್ರಸಕ್ತ ವರ್ಷ ರೂ.2,03,128.94 ಲಾಭದಲ್ಲಿ ಮುನ್ನಡೆಯುತ್ತಿದೆ. ಸಂಘದಲ್ಲಿ ಹಾಲು ಸಂಗ್ರಹವನ್ನು ಹೆಚ್ಚಿಸಲು ಹೈನುಗಾರರು ಸಹಕರಿಸಬೇಕು, ನಂದಿನಿ ಪಶು ಆಹಾರವನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಜಗನ್ನಾಥ್ ಆಚಾರ್ಯ, ಜಿನ್ನಪ್ಪ ಬಂಗೇರ, ಅಲೆಕ್ಸ್ ವೇಗಸ್, ದೇಜಪ್ಪ ಪರನೀರು, ಯುಮುನಾ ನಾಯ್ಕ, ಆನಂದ ಆಚಾರ್ಯ, ವಿಶ್ವನಾಥ ಶೆಟ್ಟಿ, ಚಾಮರಾಜ ಸೇಮಿತಾ, ನೀತಾ, ರೇವತಿ, ಹರಿಶ್ಚಂದ್ರ ಹೆಗ್ಡೆ ಉಪಸ್ಥಿತರಿದ್ದರು. ಶ್ರೀಮತಿ ರೇವತಿ ಮತ್ತು ಚೈತನ್ಯ ಇವರ ಪ್ರಾರ್ಥನೆ ಬಳಿಕ ಉಪಾಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿ, ನಿದೇರ್ಶಕ ಚಾಮರಾಜ ಸೇಮಿತ ಧನ್ಯವಾದವಿತ್ತರು. ಹಾಲು ಪರೀಕ್ಷಕಿ ಶ್ರೀಮತಿ ರೇವತಿ ಸಹಕರಿಸಿದರು.











