September 23, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಶಿರ್ಲಾಲು: ಕಸ್ತೂರಿ ರಂಗನ್ ವರದಿಯ ವಿಶೇಷ ಗ್ರಾಮಸಭೆ

ಬೆಳ್ತಂಗಡಿ: ಇತ್ತೀಚೆಗೆ ಕಸ್ತೂರಿ ರಂಗನ್ ವರದಿಯ ವಿಶೇಷ ಗ್ರಾಮಸಭೆ ರದ್ದುಗೊಂಡು ಸಂತ್ರಸ್ತರ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದ ಶಿರ್ಲಾಲು ಗ್ರಾಮಸಭೆ ಇಂದು (ಸೆ.23)ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಮಂಜುನಾಥ್ ವಹಿಸಿದ್ದರು.

ಪ್ರಭಾರ ಪಿಡಿಒ ಗೌರಿಶಂಕರ್ ಸಣಕಲ್, ವೇಣೂರು ವಲಯ ಸಹಾಯಕ ಅರಣ್ಯಾಧಿಕಾರಿ ಹರಿಪ್ರಸಾದ್, ಗ್ರಾಮಾಡಳಿತಾಧಿಕಾರಿ ವಿಜೇತ್ ಅಮಿನ್, ಗ್ರಾಮ ಪೋಲಿಸ್ ಅಧಿಕಾರಿ ಬೀರಪ್ಪ ಉಪಸ್ಥಿತರಿದ್ದರು.

ಗ್ರಾಮಸಭೆಯಲ್ಲಿ ಮಾತನಾಡಿದ ಗ್ರಾಮಸ್ಥ ಹಾಗೂ ತಾಲೂಕು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ಎಂ.ಕೆ ಪ್ರಸಾದ್ ಮಾತನಾಡಿ ಗ್ರಾಮದ ಭೌಗೋಳಿಕ ಮತ್ತು ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸದೆ ಗ್ರಾಮದ ಯಾವುದೇ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸಬಾರದು ಎಂದು ಒತ್ತಾಯಿಸಿದ ಅವರು ಕೃಷಿ ಚಟುವಟಿಕೆ, ಮನೆ ನಿರ್ಮಾಣ, ರಸ್ತೆ, ಸೇತುವೆ, ವಿದ್ಯುತ್, ಶಾಲೆ, ಆಸ್ಪತ್ರೆ ಸೇರಿದಂತೆ ಗ್ರಾಮದ ಯಾವುದೇ ರೀತಿಯ ಅಭಿವೃದ್ಧಿಗೆ ಅಡ್ಡಿ ಪಡಿಸಿದರೆ ನಾವೆಲ್ಲರೂ ಸಂಘಟಿತ ಹೋರಾಟ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಮ್ಮನಾಳುವ ಸರ್ಕಾರಗಳು ಜನರ ಮನವಿಯನ್ನು ಆಲಿಸಿ, ಸ್ಪಂದಿಸದಿದ್ದರೆ ಮಾಡು ಇಲ್ಲವೆ ಮಡಿ ಎಂಬಂತಹ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಎಚ್ಚರಿಕೆ ನೀಡಿದರು.

ವಿಶ್ವನಾಥ ಬಂಗೇರ ಮಾತನಾಡುತ್ತಾ ಶಿರ್ಲಾಲು ಗ್ರಾಮದ ಒಂದೇ ಒಂದು ಮನೆಗೂ ಸಮಸ್ಯೆಯಾದರೂ ಜೀವದ ಹಂಗು ತೊರೆದು ಪ್ರತಿಭಟಿಸುತ್ತೇವೆ ಎಂದು ಸಭೆಯಲ್ಲಿ ಸರ್ಕಾರಗಳನ್ನು ಎಚ್ಚರಿಸಿದರು. ಮಾಧವ ಶಿರ್ಲಾಲು ಮಾತನಾಡಿ ಜನವಿರೋಧಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ಒತ್ತಾಯಿಸಿದರು. ಚಿದಾನಂದ ಎಲ್ದಕ್ಕ ಮಾತನಾಡಿ ಕಸ್ತೂರಿ ರಂಗನ್ ವರದಿಯ ಬಗ್ಗೆ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡದೆ ಜನರನ್ನು ಗೊಂದಲಕ್ಕೀಡು ಮಾಡಬಾರದು ಎಂದರು. ಹರ್ಷ ಆರ್ ಜೈನ್ ಮಾತನಾಡುತ್ತಾ ಅರಣ್ಯ ಪ್ರದೇಶದಲ್ಲಿ ಶತಮಾನಗಳಿಂದ ಬದುಕುತ್ತಿರುವ ಜನರ ಹಿತಾಸಕ್ತಿ ಕಾಪಾಡುವ ಅಗತ್ಯವಿದೆ ಎಂದ ಅವರು ಜನರನ್ನು ಬೀದಿಪಾಲು ಮಾಡಿ ಅರಣ್ಯ ಸಂರಕ್ಷಣೆ ಸರಿಯಲ್ಲ. ನಾವೆಲ್ಲರೂ ನಿಜವಾದ ಪರಿಸರ ಪ್ರೇಮಿಗಳು ಎಂದರು.

ರಮಾನಂದ ಗುಡ್ಡಾಜೆ ಅರಣ್ಯ ಪರಂಬೋಕು ಪ್ರದೇಶದಲ್ಲಿ ಜೀವನ ಕಟ್ಟಿಕೊಂಡ ಜನರ ಹಿತಾಸಕ್ತಿ ಕಾಪಾಡುವುದು ಜನಪ್ರತಿನಿಧಿಗಳ ಕರ್ತವ್ಯ ಎಂದರು.ಸಭೆಯಲ್ಲಿ ಜಗನ್ನಾಥ ಅಂತ್ರಾಂಗೆ , ರಮೇಶ್ ಮಜಲಪಲ್ಕೆ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವೇಣೂರು ವಲಯ ಸಹಾಯಕ ಅರಣ್ಯಾಧಿಕಾರಿ ಹರಿಪ್ರಸಾದ್ ಕಸ್ತೂರಿ ರಂಗನ್ ವರದಿಯ ಬಗ್ಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆಗಳನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಗ್ರಾಮಸ್ಥರ ಅಹವಾಲು , ಆಕ್ಷೇಪಣೆಗಳನ್ನು ಸ್ವೀಕರಿಸಲಾಯಿತು.ಮೊದಲಿಗೆ ಶಿರ್ಲಾಲು ಪಂಚಾಯತ್ ಕಾರ್ಯದರ್ಶಿ ಮೋನಮ್ಮ ಸ್ವಾಗತಿಸಿ , ಸಿಬ್ಬಂದಿ ಪವಿತಾ ಧನ್ಯವಾದವಿತ್ತರು‌.

Related posts

ಪಡಂಗಡಿ: 6ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ವಿ.ಹಿ.ಪ ಬಜರಂಗದಳ ಚಾರ್ಮಾಡಿ ಘಟಕದ ವತಿಯಿಂದ ದತ್ತಮಾಲಧಾರಣೆಗೆ ಚಾಲನೆ

Suddi Udaya

ಅಪಾಯದಂಚಿನಲ್ಲಿರುವ ಗುರಿಪಳ್ಳ ತಾರಗಂಡಿ ಸೇತುವೆ: ಸ್ಥಳಕ್ಕೆ ಬೇಟಿ ನೀಡಿದ ರಕ್ಷಿತ್ ಶಿವರಾಂ ಅತೀ ಶೀಘ್ರದಲ್ಲೇ ಹೊಸ ಸೇತುವೆ ನಿರ್ಮಾಣದ ಭರವಸೆ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮತ್ತು ಮಹಿಳಾ ವೇದಿಕೆಯ ಸದಸ್ಯರಿಂದ ವಿವಿಧ ಕ್ಷೇತ್ರಕ್ಕೆ ಭೇಟಿ

Suddi Udaya

ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು

Suddi Udaya

ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಖರೀದಿಯ ಮೇಲೆ ಶೇ.20 ಸ್ಪೆಷಲ್ ಡಿಸ್ಕೌಂಟ್ ಆಫರ್

Suddi Udaya
error: Content is protected !!