November 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಬೆಳ್ತಂಗಡಿ ಬಸ್‌ನಿಲ್ದಾಣದಲ್ಲಿ 7ನೇ ವರ್ಷದ ದೋಸೆ ಹಬ್ಬಕ್ಕೆ ಅದ್ದೂರಿಯ ಚಾಲನೆ

ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬೆಳ್ತಂಗಡಿ ಬಸ್‌ನಿಲ್ದಾಣದಲ್ಲಿ ಹಮ್ಮಿಕೊಂಡ 7ನೇ ವರ್ಷದ ದೀಪಾವಳಿ ದೋಸೆ ಹಬ್ಬ-2026ಕ್ಕೆ ನ.8ರಂದು ದ.ಕ ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸತೀಶ್ ಕುಂಪಲ ಅವರು ದೀಪ ಬೆಳಗಿಸಿ, ದೋಸೆ ಹೊಯ್ದು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳು ಮಾದರಿಯಾಗಿದ್ದು, ತುಳುನಾಡಿನ ಸಂಸ್ಕೃತಿಯಾದ ದೀಪಾವಳಿಯ ಸಂದರ್ಭದಲ್ಲಿ ದೋಸೆ ಹಬ್ಬ ಮಾಡುವ ಮೂಲಕ ಹಿಂದುತ್ವಕ್ಕೆ ದೊಡ್ಡ ಶಕ್ತಿ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಹರೀಶ್ ಪೂಂಜ ಅವರು ಪ್ರಸ್ತಾವಿಕವಾಗಿ ಮಾತನಾಡಿ ಕಳೆದ ೭ ವರ್ಷಗಳಿಂದ ಬೆಳ್ತಂಗಡಿ ಬಸ್‌ನಿಲ್ದಾಣದಲ್ಲಿ ದೋಸೆ ಹಬ್ಬ ಆಚರಿಸುತ್ತಿರುವ ಯುವ ಮೋರ್ಚಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಅತುಲ್‌ಕುಮಾರ್, ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್, ಚಲನಚಿತ್ರ ನಟಿ ಕಾರುಣ್ಯ ರಾಮ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ನಂದನ್‌ಕುಮಾರ್ ಮಲ್ಯ, ಜಿಲ್ಲಾ ಪ್ರಮುಖ ಯತೀಶ್ ಆಳ್ವಾ, ಉಪವಿಭಾಗದ ಪ್ರಭಾರಿ ಜಯಂತ್ ಕೋಟ್ಯಾನ್, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ರಶ್ಮಿ ಸಾವಂತ್, ಹಿರಿಯ ವೈದ್ಯ ಡಾ. ಎಂ.ಎನ್ ತುಳಪುಳೆ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ಮನ್‌ಕೀ ಬಾತ್ ಸಂಯೋಜಕ ಸೀತಾರಾಮ ಬೆಳಾಲು, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಲಾಲ್, ಯುವಮೋರ್ಚಾ ತಾಲೂಕು ಕಾರ್ಯದರ್ಶಿ ಜಯಪ್ರಕಾಶ್ ಕಡಮಾಜೆ ಉಪಸ್ಥಿತರಿದ್ದರು.

ಯುವಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿ, ವಿನೀತ್ ಧನ್ಯವಾದವಿತ್ತರು.

ಬೆಳಗ್ಗೆ 8ರಿಂದ ಪ್ರಜಾಪ್ರಭುತ್ವ ಉಳಿಸಿ ಆರಾಜಕತೆ ಅಳಿಸಿ ಮ್ಯಾರಥಾನ್ ಯಶಸ್ವಿಯಾಗಿ ನಡೆಯಿತು. ಜಿಲ್ಲಾ ಮಟ್ಟದ ಸಾಂಸ್ಕೃತಿಕ ತುಡರ್ ನೃತ್ಯ ಸ್ಪರ್ಧೆ, ಬೆಳ್ತಂಗಡಿ ತಾಲೂಕಿನ 3-7ವರ್ಷದೊಳಗಿನ ಮಕ್ಕಳಿಗೆ ಬಾಲೆ ಪಿಲಿ ಸ್ಪರ್ಧೆ, ಬೆಳ್ತಂಗಡಿ ತಾಲೂಕಿನವರಿಗಾಗಿ ರೀಲ್ಸ್ ಸ್ಪರ್ಧೆ, ಸಂಜೆ 9.15ಕ್ಕೆ ಸುಡು ಮದ್ದು ಪ್ರದರ್ಶನ, ಗೋ ಪೂಜಾ ಉತ್ಸವ ಬಳಿಕ ಯಾನ್ ಒರಿ ಬರೊಲಿಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

Related posts

ತಾಲೂಕಿನಲ್ಲಿ ಶೇ.25 ರಷ್ಟು ಮತದಾನ

Suddi Udaya

ಇಳಂತಿಲ: ಶ್ರೀ ಮಹಾಭಾರತ ಸರಣಿಯ 75ನೇ ತಾಳಮದ್ದಳೆ ಮತ್ತು ಸನ್ಮಾನ

Suddi Udaya

ಭಾರೀ ಗಾಳಿ ಮಳೆ: ಬಾಜಾರು, ಪಿಲಿಗೂಡು, ಸರಳಿಕಟ್ಟೆಯಲ್ಲಿ ರಸ್ತೆಗಳಿಗೆ ಮರ ಬಿದ್ದು ವಿದ್ಯುತ್ ಕಂಬಗಳು ಧರಾಶಾಹಿ

Suddi Udaya

ಹೆದ್ದಾರಿ ಬದಿ ಬೆಂಕಿ

Suddi Udaya

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಗರ್ಡಾಡಿ ನಂದಿಬೆಟ್ಟ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಧರ್ಮಸ್ಥಳ ಮತ್ತು ಉಜಿರೆ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ: ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭಾಗಿ

Suddi Udaya
error: Content is protected !!