September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬ್ಯಾಂಕ್ ಆಫ್ ಬರೋಡಾದ ಜನರಲ್ ಮೆನೇಜರ್ ರಾಜೇಶ್ ಖನ್ನಾ ಭೇಟಿ

ಉಜಿರೆ: ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಿಭಾಗದ ಜನರಲ್ ಮೆನೇಜರ್ ರಾಜೇಶ್ ಖನ್ನಾ ಭೇಟಿ ನೀಡಿದರು.

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಇತ್ತೀಚೆಗೆ ಅಳವಡಿಸಲಾದ ಅತ್ಯಾಧುನಿಕ ಎಂ.ಆರ್.ಐ ಸ್ಕಾನಿಂಗ್ ಮತ್ತು ಅತ್ಯಾಧುನಿಕ ಎಕ್ಷ್-ರೇ ಉಪಕರಣಗಳನ್ನು ವೀಕ್ಷಿಸಿದ ಅವರು, ಸಿಟಿ ಸ್ಕಾö್ಯನ್ ಸೌಲಭ್ಯ, ಅಮ್ಮ ಬರ್ತ್ ಸೆಂಟರ್, ಉಚಿತ ಡಯಾಲಿಸಿಸ್ ಸೇವೆ ಮತ್ತು ಇಲ್ಲಿನ ಅತ್ಯಾಧುನಿಕ ವೈದ್ಯಕೀಯ ಸೇವೆಗೆ ಮೆಚ್ಚುಗೆ ಸೂಚಿಸಿದರು.

ಬಳಿಕ ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಲ್ಲಾ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಗಳು ಸೇವೆಗೆ ಹೆಸರುವಾಸಿಯಾಗಿದೆ. ಸೇವೆಗೆ ಮೊದಲ ಆಧ್ಯತೆ ನೀಡುವ ಈ ಸಂಸ್ಥೆಗಳಲ್ಲಿ ಉಳಿತಾಯದ ಲೆಕ್ಕಾಚಾರವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಪೂಜ್ಯರು ಪ್ರಾರಂಭಿಸಿದ ಈ ಆಸ್ಪತ್ರೆಯಲ್ಲಿ, ಪೂಜ್ಯರ ಮಾರ್ಗದರ್ಶನ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಅವರ ನೇತೃತ್ವದಲ್ಲಿ ನೀಡಲಾಗುತ್ತಿರುವ ವೈದ್ಯಕೀಯ ಸೇವೆ ಅನನ್ಯವಾದುದು. ಗ್ರಾಮೀಣ ಪ್ರದೇಶದಲ್ಲಿ ಮಿತದರದಲ್ಲಿ ಇಂತಹ ಹೈಟೆಕ್ ಸೇವೆಗಳನ್ನು ನೀಡಲು ಪೂಜ್ಯರಿಂದ ಮಾತ್ರ ಸಾಧ್ಯ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರಂಭದಿಂದಲೇ ಅಂದಿನ ವಿಜಯ ಬ್ಯಾಂಕ್ ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ನಿಕಟ ಸಂಬಂಧ ಹೊಂದಿತ್ತು ಎಂದರು.


ಬ್ಯಾಂಕ್ ಆಫ್ ಬರೋಡಾ ಇದರ ಪುತ್ತೂರು ವಿಭಾಗದ ಡೆಪ್ಯೂಟಿ ಜನರಲ್ ಮೇನೇಜರ್ ಸಾಯಿ ಗಣೇಶ್, ಪುತ್ತೂರು ವಿಭಾಗದ ಪ್ರಾದೇಶಿಕ ವ್ಯವಹಾರ ಅಭಿವೃದ್ಧಿ ಮೆನೇಜರ್ ಭರತ್ ಮತ್ತು ಬ್ಯಾಂಕ್ ಆಫ್ ಬರೋಡಾ ಉಜಿರೆ ಶಾಖೆಯ ಮೇನೇಜರ್ ಶಿವರಾಮ ಜೊತೆಗಿದ್ದರು.

ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ಆಸ್ಪತ್ರೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

Related posts

ಪ್ರಥಮ ತಾಲೂಕು ಅಧಿವೇಶನಕ್ಕೆ ಸಜ್ಜಾಗುತಿದೆ ಬೆಳ್ತಂಗಡಿ ಅಭಾಸಾಪ: ಡಿ.22 ರಂದು ಬಲಿಪ ರೆಸಾರ್ಟಿನಲ್ಲಿ ಅಧಿವೇಶನ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ‘ಒಡ್ಡೋಲಗ ಪಂಚಕ ‘ ಯಕ್ಷಗಾನ

Suddi Udaya

ಬೆಳ್ತಂಗಡಿ ಪ್ರಥಮ‌‌ ದರ್ಜೆ ಕಾಲೇಜಿನಲ್ಲಿ “ವಿಶ್ವ ತಂಬಾಕು ವಿರೋಧಿ ದಿನಾಚರಣೆ”- “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ

Suddi Udaya

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ತೇಜಲ್ ಕೆ.ಆರ್ ಮುಂಡಾಜೆ ರವರಿಗೆ ಬೆಳ್ಳಿಯ ಪದಕ

Suddi Udaya

ಸುಲ್ಕೇರಿ: ಪಿ‌ಎಂ ಜನ್ ಮನ್ ಯೋಜನೆಯಡಿ ರೂ. 6.8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಟ್ರಿಂಜೆ- ಸುಲ್ಕೇರಿ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ದ.ಕ ಜಿಲ್ಲಾ ಸಂಸದ ಕ್ಯಾ‌.ಬ್ರಿಜೇಶ್ ಚೌಟರವರಿಂದ ಶಿಲಾನ್ಯಾಸ

Suddi Udaya
error: Content is protected !!