September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಉಜಿರೆ : ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ. 23 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿಸಂಘದ ಅಧ್ಯಕ್ಷ ಸುರೇಶ್ ಗೌಡ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಅವರು ಮಾತನಾಡಿ ಸಂಘದ ಸದಸ್ಯರ ಸಹಕಾರದಿಂದ ಸಂಘ ಆರ್ಥಿಕ ವರ್ಷದಲ್ಲಿ ನಿವ್ವಳ ರೂ. 16,66,429 ಲಾಭ ಗಳಿಸಿದೆ. ಸದಸ್ಯರು ಉತ್ತಮ ಡಿಗ್ರಿಯ ಹಾಲನ್ನು ಪೂರೈಸಿ ಸಹಕರಿಸಬೇಕು. ಎಲ್ಲರೂ ಹೈನುಗಾರಿಕೆಯ ಮಾಹಿತಿಯನ್ನು ತಿಳಿದು ಉತ್ತಮ ಹಾಲು ಒದಗಿಸಿ ಸಹಕರಿಸಬೇಕು ಎಂದರು. ದ. ಕ. ಜಿಲ್ಲಾ ಹಾಲು ಒಕ್ಕೂದ ಬೆಳ್ತಂಗಡಿ ವಿಸ್ತರಣಾಧಿಕಾರಿ ರಾಜೇಶ್ ಪಿ. ಕೆ. ಹೈನುಗಾರಿಕೆ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.

ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೌಮ್ಯಲತಾ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ವಿಜಯ ಪೂಜಾರಿ, ನಿರ್ದೇಶಕರುಗಳಾದ ಸತೀಶ್ ಕೆ., ಪುರುಷೋತ್ತಮ ಬಿ. ಎಸ್. ಕೇಶವ, ಕೇಶವ ಗೌಡ, ಅನಿಲ್ ಡಿಸೋಜ, ಸಂತೋಷ್ ಎಂ., ಜಯಶ್ರೀ ಪ್ರಕಾಶ್, ನಾಗವೇಣಿ, ಶಶಿಕಲಾ, ಬೇಬಿ, ಕಿಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸುತ್ತಿರುವ ವಲೇರಿಯನ್ ಡಿ ಸೋಜಾ, ಬಿ. ಕಿಟ್ಟ, ಎಂ. ಚಂದ್ರಾಧರ ಇವರನ್ನು ಗೌರವಿಸಲಾಯಿತು.

ಎಸ್. ಎಸ್. ಎಲ್. ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಪ್ರಾರ್ಥನಾ, ಬಿ. ತಸ್ಮಯಿ, ಸಾನ್ನಿ ಕೆ. ಪೂಜಾರಿ, ತೇಜಸ್, ಬಿ. ಎಸ್. ಸಾತ್ವಿಕ್ ಗೌಡ, ಅನುಷಾ ಡಿಸೋಜ, ಶೇಯಾ ಆರ್. ಎಸ್., ಸಮರ್ಥ್, ಅನ್ವಿತಾ, ಶ್ರದ್ಧಾ, ಸಹನಾ, ಶ್ರೀಷಾ, ಹರ್ಷಿತಾ ರಕ್ಷಿತ್ ಗೌಡ, ತನುಷ್ ಇವರನ್ನು ಗೌರವಿಸಲಾಯಿತು.


ಸಂಘದ ನಿರ್ದೇಶಕ ಪುರುಷೋತ್ತಮ ಬಿ. ಎಸ್. ಸ್ವಾಗತಿಸಿ, ನಿರ್ದೇಶಕಿ ಶಶಿಕಲಾ ವಂದಿಸಿದರು. ಪ್ರಕಾಶ್ ಗೌಡ ಕೆದ್ಲ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.

Related posts

ಕರಾಯ: ನೀರು ಕುಡಿಯುವ ನೆಪದಲ್ಲಿ ಮನೆಯೊಳಗೆ ಬಂದು ಮಹಿಳೆಯ ಚಿನ್ನಾಭರಣ ದೋಚಿ ಪರಾರಿ

Suddi Udaya

ಮುಂಡಾಜೆ ಕಾಲೇಜು ಎನ್‌ಎಸ್‌ಎಸ್ ಶಿಬಿರ ಉದ್ಘಾಟನೆ

Suddi Udaya

ಎ.30: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 15ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ:

Suddi Udaya

ಎಸ್ ಡಿ ಎಮ್ ಕಾಲೇಜಿನ ವಾರ್ಷಿಕೋತ್ಸವ : ಪ್ರಶಸ್ತಿ ಪ್ರದಾನ ಸಮಾರಂಭ

Suddi Udaya

ರೆಖ್ಯ : ಶೌರ್ಯ ವಿಪತ್ತು ಸ್ವಯಂ ಸೇವಕ ತಂಡದಿಂದ ನೆಲ್ಯಡ್ಕ ಶಾಲೆಯಲ್ಲಿ ಕೈತೋಟ ನಿರ್ಮಾಣ

Suddi Udaya

ಭಾರಿ ಬಿರುಗಾಳಿ ಮಳೆ: ನಾರ್ಯ ಅರಿಕೋಡಿ ವಿಮಲಾಕ್ಷ ಗೌಡರ ಮನೆಯ ಮೇಲ್ಛಾವಣಿ ಶೀಟ್ ಗಾಳಿಗೆ ಹಾರಿ ರೂ. 1 ಲಕ್ಷ ನಷ್ಟ

Suddi Udaya
error: Content is protected !!