ಬೆಳ್ತಂಗಡಿಯ ಅಕ್ಷಯ ಇಂಪ್ರೆಶನ್ಸ್ ಇದರ ಮಾಲಕ ರಶ್ಮಿ ಮತ್ತು ಯಶವಂತ ಪಟವರ್ಧನ್ ಇವರ ಪುತ್ರಿ ಮುಕ್ತಾ ಅವರ ವಿವಾಹವು ಉಜಿರೆಯ ಅನಸೂಯ ಮತ್ತು ವಿಲಾಸ್ ದೇವಸ್ಥಳಿ ಇವರ ಪುತ್ರ ಸರ್ವೇಶ್ ಜತೆ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಬುಧವಾರ ಜರಗಿತು.
ಈ ಸಂದರ್ಭ ಕನ್ಯಾಡಿ ಸೇವಾ ಭಾರತಿ ಸಂಸ್ಥೆಯ ಸೇವಾ ಕಾರ್ಯಗಳಿಗೆ ಯಶವಂತ ಪಟವರ್ಧನ್ ದಂಪತಿ ರೂ.25000 ದೇಣಿಗೆಯನ್ನು ಸೇವಾ ಭಾರತಿ ಸಂಸ್ಥೆಯ ಸಂಸ್ಥಾಪಕ ವಿನಾಯಕ ರಾವ್ ಅವರಿಗೆ ಹಸ್ತಾಂತರಿಸಿದರು.











