September 24, 2026
ಪ್ರಮುಖ ಸುದ್ದಿಬೆಳ್ತಂಗಡಿವರದಿ

ಗುಂಡೂರಿ ಕಾರ್ಯಕ್ಷೇತ್ರ; ಕಾನೂನು ಅರಿವು ಕಾರ್ಯಕ್ರಮ

ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ, ವೇಣೂರು ವಲಯದ ಗುಂಡೂರಿ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಸಾಮಾನ್ಯ ಕಾನೂನು ಅರಿವು ಕಾರ್ಯಕ್ರಮವು ಇಲ್ಲಿಯ ಶ್ರೀ ಸತ್ಯನಾರಾಯಣ ಭಜನ ಮಂದಿರದ ಸಭಾಂಗಣದಲ್ಲಿ ನಡೆಯಿತು.

ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಕೇಶವತಿ ಅವರು ನಿತ್ಯ ಜೀವನದಲ್ಲಿನ ಸಾಮಾನ್ಯ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಕಾನೂನಿನಲ್ಲಿ ಮಹಿಳೆಯರಿಗೆ ರಕ್ಷಣೆ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಗುಲಾಬಿ ವಹಿಸಿದ್ದರು. ಗುರುವಾಯನಕೆರೆ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ರವಿಕಲಾ, ಸೇವಾಪ್ರತಿನಿಧಿ ಹರೀಶ್ ಪೂಜಾರಿ ಬಾಡಾರು, ಕುಶಾಲಾಕ್ಷಿ ಸೇರಿದಂತೆ ಕೇಂದ್ರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Related posts

ಕೊಕ್ಕಡ ಸ. ಪ್ರೌಢಶಾಲೆಯಲ್ಲಿ ಅ.3 ರಿಂದ ಅ.9 ರವರೆಗೆ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ

Suddi Udaya

ದೇಶಭಕ್ತಿ ಗುಂಪು ಗಾಯನ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ

Suddi Udaya

ಉಜಿರೆ ಪ್ರಾ.ಕೃ.ಪ. ಸಹಕಾರಿ ಸೇವಾ ಸಂಘದ ನೂತನ ಕಟ್ಟಡ ‘ಉತ್ಥಾನ’ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪ್ಲೈವುಡ್ ಉತ್ಪನ್ನಗಳ ಪ್ರಖ್ಯಾತ ಮಳಿಗೆ “ಆನ್‌ಪ್ಲೈ” ಲಾಯಿಲದಲ್ಲಿ ಶುಭಾರಂಭ

Suddi Udaya

ಕು. ಸೌಜನ್ಯಳ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ಪುದುವೆಟ್ಟು ವಿ. ಹಿಂ. ಪ. ಭಜರಂಗದಳ ವತಿಯಿಂದ ಶ್ರೀ ವನದುರ್ಗ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

Suddi Udaya

ಕಲ್ಮಂಜ: ಗರ್ಭಿಣಿ ಮಹಿಳೆ ಹೃದಯಾಘಾತದಿಂದ ನಿಧನ

Suddi Udaya
error: Content is protected !!