27.6 C
ಪುತ್ತೂರು, ಬೆಳ್ತಂಗಡಿ
September 24, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವೇಣೂರು ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಉದ್ಯಮಿ ಅಶ್ವಥ್ ಹೆಗ್ಡೆ ವಿರುದ್ದ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆ ಬಳಂಜ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್.ಐ.ಆರ್. ಸಂಖ್ಯೆ: 23/2020) ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಥ್ ಹೆಗ್ಡೆ ಅವರು ಹೈಕೋರ್ಟ್‌ನಲ್ಲಿ ಹೂಡಿದ್ದ ಕ್ರಿಮಿನಲ್ ಅರ್ಜಿ ಸಂಖ್ಯೆ: CRL.P 3684/2020 ಅನ್ನು ಮಾನ್ಯ ನ್ಯಾಯಾಲಯವು ವಿಚಾರಣೆ ನಡೆಸಿ ಸಂಪೂರ್ಣವಾಗಿ ಪುರಸ್ಕರಿಸಿದೆ.

ವೇಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಐ.ಪಿ.ಸಿ. ಸೆಕ್ಷನ್ 504 ಮತ್ತು 506 ರ ಅಡಿಯಲ್ಲಿ ದಾಖಲಿಸಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರ್ಜಿದಾರರ ಪರ ಪ್ರಖ್ಯಾತ ಹಿರಿಯ ವಕೀಲರಾದ ಪಿ ಪಿ ಹೆಗ್ಡೆಯವರು ಮಂಡಿಸಿದ ವಾದವನ್ನು ಪರಿಗಣಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.

ನ್ಯಾಯಾಲಯದ ಈ ತೀರ್ಪಿನೊಂದಿಗೆ ಅರ್ಜಿದಾರರ ಮೇಲಿದ್ದ ಕಾನೂನು ಹೋರಾಟ ಹಾಗೂ ಸಂಬಂಧಿತ ಪ್ರಕ್ರಿಯೆಗಳು ಅಧಿಕೃತವಾಗಿ ಮುಕ್ತಾಯಗೊಂಡಿವೆ.

Related posts

ಜೂ.21: ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ವಾಣಿಜ್ಯ ಕಟ್ಟಡ ‘ಉನ್ನತಿ’ ಉದ್ಘಾಟನೆ

Suddi Udaya

ಮುಂಡಾಜೆ ದೇವಾಂಗ ಸಮಾಜ ಘಟಕದ ತ್ರೈಮಾಸಿಕ ಸಭೆ

Suddi Udaya

ಸೌತಡ್ಕ ಸ.ಕಿ. ಪ್ರಾ. ಶಾಲೆಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಮತ್ತು ಸೌತಡ್ಕ ಸೇವಾ ಸಮಿತಿಯ ವತಿಯಿಂದ ಪುಸ್ತಕ ವಿತರಣೆ

Suddi Udaya

ಮೊಗ್ರು: ಸರಕಾರಿ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಆ.15: ತೆಂಕಕಾರಂದೂರು- ಕಾಪಿನಡ್ಕ ಗೆಳೆಯರ ಬಳಗ ಮತ್ತು ಶ್ರೀ ಹರಿ ಭಜನಾ ಮಂಡಳಿಯಿಂದ ಮೊಸರು ಕುಡಿಕೆ ಉತ್ಸವ

Suddi Udaya

ಡಾ. ಟಿ. ವಿ. ಜೋಸೆಫ್ ರಸ್ತೆ” ನಾಮಫಲಕ ಅನಾವರಣ – ಕಾರುಣ್ಯ ಸ್ಪರ್ಶಂ ಯೋಜನೆಯಡಿ ಚಿಕಿತ್ಸಾ ಸಹಾಯಧನ

Suddi Udaya
error: Content is protected !!