ಬೆಳ್ತಂಗಡಿ: ಶಿಶಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶಿಶಿಲ-ಬೈರಾಪುರ ರಸ್ತೆ ಹೋರಾಟ ಸಮಿತಿಯ ಸಭೆ ನಡೆಯಿತು. ಬಹು ದಿನಗಳ ಬೇಡಿಕೆಯಾಗಿರುವ ಶಿಶಿಲ-ಬೈರಾಪುರ ರಸ್ತೆ ನಿರ್ಮಾಣಕ್ಕಾಗಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಯಿತು.
ಮುಂದಿನ ಹಂತದ ಹೋರಾಟವನ್ನು ಬಲಪಡಿಸಲು ಅ. 4ರಂದು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರನ್ನು ಒಗ್ಗೂಡಿಸಿ ಮುಂದಿನ ಸಭೆ ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಹೋರಾಟ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.











