ಗೇರುಕಟ್ಟೆ : ಕಳಿಯ ಗ್ರಾಮ ವ್ಯಾಪ್ತಿಯ ಗೇರುಕಟ್ಟೆ ಪದಗೋಳಿ ರಸ್ತೆಯು ತೀರ ಹದಗೆಟ್ಟಿದ್ದು, ನೂರಾರು ಶಾಲಾ ಮಕ್ಕಳು, ಸಾರ್ವಜನಿಕರು ನೂರಾರು ವಾಹನಗಳು ಕೂಡು ರಸ್ತೆಯ ಮೂಲಕ ಪರಪ್ಪು-ಕೊಯ್ಯೂರು ಮುಖ್ಯ ರಸ್ತೆಗೆ ಹಾದು ಹೋಗಲು ಕೇವಲ ಮೂಕ್ಕಾಲು ಕಿ.ಮೀ ದೂರದ ಸಂಪರ್ಕ ಹೊಂದಿದೆ.ಇದಕ್ಕೆ ಕಾಂಕ್ರೀಟ್ ರಸ್ತೆಯ ಅಗತ್ಯವಿದೆ.
ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು, ವಾಹನ ಸವಾರರು ಓಡಾಟ ಮಾಡುವಾಗ ಕೆಸರು ಗದ್ದೆಯಲ್ಲಿ ಓಡಾಟ ಮಾಡಿದ ಅನುಭವವನ್ನು ಅಗುತ್ತದೆ.ರಸ್ತೆಯಲ್ಲಿ ಹಲವಾರು ಗುಂಡಿಗಳನ್ನು ಹೊಂದಿದೆ. ಶಾಲಾ ಮಕ್ಕಳ ಸಮವಸ್ತ್ರದಲ್ಲಿ ಕೆಸರು ನೀರಿನ ಚಿಂಚನವಾಗದೇ ಸಾಗುವುದಕ್ಕೆ ಸಾಧ್ಯವಿಲ್ಲ.ಹಲವು ಭಾರಿ ಹೈನುಗಾರರು ಸಂಘಕ್ಕೆ ಹಾಲು ಪೂರೈಸಲು ಹೋಗುವಾಗ ಆಯಾ ತಪ್ಪಿ ಬಿದ್ದು ಹಾಲು ರಸ್ತೆಯಲ್ಲಿ ಚೆಲ್ಲಿದ ಘಟನೆಗಳು ನಡೆದಿದೆ. ಕಳೆದ ಹತ್ತಾರು ವರ್ಷಗಳಿಂದ ಮಳೆ ಬೀಳುವ ಸಮಯದಲ್ಲಿ ಕೆಸರು ಗದ್ದೆಯಂತೆ ಹಾಗೂ ಬೇಸಿಗೆಕಾಲದಲ್ಲಿ ವಿಪರೀತ ಧೂಳಿನ ಸಮಸ್ಯೆಯನ್ನು ನಿರಂತರವಾಗಿ ಅನುಭವಿಸಿದವರಿಗೆ ಮಾತ್ರ ಗೊತಾಗುತ್ತದೆ..
ಹತ್ತಾರು ವರ್ಷಗಳಿಂದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಮನವಿ ಮಾಡಿಕೊಂಡು ಒತ್ತಾಯಿಸಿದರೂ ಕಿಂಚಿತ್ತೂ ಪ್ರಯೋಜನ ಆಗಲಿಲ್ಲ. ರಸ್ತೆಯು ಎಷ್ಟರಮಟ್ಟಿಗೆ ಹದಗೆಟ್ಟಿತು ಎನ್ನುವುದಕ್ಕೆ ಸೆ.19 ರಂದು ಸಂಜೆ ರಸ್ತೆಯಲ್ಲಿ ಚೆಲ್ಲಿರುವ ಅನ್ನ ಭಾಗ್ಯದ ಅಕ್ಕಿ ಮಣ್ಣಿನ ರಸ್ತೆ ಪಾಲಾಗಿರುವುದೇ ಸಾಕ್ಷಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನಾದರೂ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸಂಬಂಧಿಸಿದ ಇಲಾಖೆ ಹಾಗೂ ಜನ ಪ್ರತಿನಿಧಿ ಎಚ್ಚರ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.











