November 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು ಜನಸೇವಾ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ: ರೂ.11 ಕೋಟಿ ವಹಿವಾಟು, 4 ಲಕ್ಷ ರೂ. ಲಾಭ

ವೇಣೂರು: ಜನಸೇವಾ ಸೌಹಾರ್ದ ಸಹಕಾರಿ ನಿ. ಇದರ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 19 ರಂದು ಸಂಘದ ಅಧ್ಯಕ್ಷರಾದ ನಾಗೇಶ್ ಡಿ. ಅವರ ಅಧ್ಯಕ್ಷತೆಯಲ್ಲಿ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.


ಶ್ರೀ ಗುರುದೇವ ಸಹಕಾರಿ ಸಂಘದ ಮೆನೇಜರ್ ಉಮೇಶ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀಮತಿ ರೂಪಿಕಾ, ಕು. ಸುರಕ್ಷಾ ಮತ್ತು ಶ್ರೀಮತಿ ಪ್ರತಿಭಾ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಶಶಿಧರ ಶೆಟ್ಟಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರಶ್ಮಿ ವಾರ್ಷಿಕ ವರದಿ ಹಾಗೂ ಲೆಕ್ಕಿಪತ್ರಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.

ಸಂಘವು ಈಗಾಗಲೇ 10 ವರ್ಷಗಳನ್ನು ಪೂರೈಸಿ 11ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದೆ. ಹೊಸ್ಮಾರಿನಲ್ಲಿ ನಮ್ಮ ಸಂಘವು ಶಾಖೆಯನ್ನು ಹೊಂದಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕಾರ್ಯವ್ಯಾಪ್ತಿ ಒಳಪಡುವಲ್ಲಿ ಶಾಖೆಗಳನ್ನು ತೆರೆಯಲು ಚಿಂತನೆ ನಡೆಸಿದ್ದೇವೆ.

ವರದಿ ಸಾಲಿನಲ್ಲಿ ಸಂಘವು 11,03,21.442.47 ರೂ. ವಹಿವಾಟು ನಡೆಸಿದ್ದು, 1,80,70,761 ರೂ. ಠೇವಣಿ ಸಂಗ್ರಹಿರುತ್ತದೆ. ರೂ. 1,50,16,004 ಮೊತ್ತ ಸದಸ್ಯರಿಗೆ ಸಾಲ ನೀಡಿದ್ದು, ಪ್ರಸ್ತುತ ಸಾಲಿನಲ್ಲಿ ರೂ. 4,09,465.10 ಲಾಭ ಗಳಿಸಿರುತ್ತದೆ ಎಂದರು.
ಸಭೆಯಲ್ಲಿ ನಿರ್ದೇಶಕರಾದ ಶೇಖರ ಶೆಟ್ಟಿ, ಸದಾನಂದ ಶೆಟ್ಟಿ, ಸುಂದರ ಬಿ. ಹೆಗ್ಡೆ, ಶೇಖರ, ಸುನಂದ, ವಾಣಿ ಕೆ. ಹಾಗೂ ಸಂಘದ ಸಿಬ್ಬಂದಿ ಹಾಗೂ ಪಿಗ್ಮಿ ಸಂಗ್ರಹಕರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರು ಸ್ವಾಗತಿಸಿ, ನಿರ್ದೇಶಕರಾದ ಸದಾನಂದ ಶೆಟ್ಟಿ ವಂದಿಸಿದರು.

Related posts

ಮಾ.3: ಬೆಳ್ತಂಗಡಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

Suddi Udaya

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೃತ್ಯ ಸ್ಪರ್ಧೆ: ಉಜಿರೆಯ ಎಸ್.ಡಿ.ಎಂ. ಪ.ಪೂ. ಕಾಲೇಜಿನ ಉಪನ್ಯಾಸಕರ ತಂಡವು ಪ್ರಥಮ ಸ್ಥಾನ

Suddi Udaya

ಸುಲ್ಕೇರಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಸ.ಹಿ.ಪ್ರಾ.ಶಾಲೆ ಕುಂಟಾಲಪಲ್ಕೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ದ.ಕ‌ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಗೌರವಾನ್ವಿತ ರಾಜ್ಯಪಾಲರ ಭೇಟಿ: ಕು.ಸೌಜನ್ಯಳ ಹತ್ಯೆ ಪ್ರಕರಣದ ಮರುತನಿಖೆಗೆ ಮನವಿ ಸಲ್ಲಿಕೆ

Suddi Udaya

ಅಂಡಿಂಜೆ: ವಿಶ್ವನಾಥ ಪೂಜಾರಿ ನಿಧನ

Suddi Udaya
error: Content is protected !!