September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಕೀಲರ ಸಂಘ ಹಾಗೂ ಯುವ ವಕೀಲರ ವೇದಿಕೆ ಜಂಟಿ ಆಶ್ರಯದಲ್ಲಿ ಕಾನೂನು ಉಪನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ : ವಕೀಲರ ಸಂಘ ಬೆಳ್ತಂಗಡಿ ಹಾಗೂ ಯುವ ವಕೀಲರ ವೇದಿಕೆ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ವಕೀಲ ಭವನದಲ್ಲಿ “ವಕೀಲರ ವೃತ್ತಿ ನಡತೆ” ವಿಷಯದಲ್ಲಿ ಹಿರಿಯ ನ್ಯಾಯವಾದಿ ಕೆ.ಆರ್ ಆಚಾರ್ಯ ಪುತ್ತೂರು ಇವರಿಂದ ಕಾನೂನು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಅವರು ಮಾತನಾಡುತ್ತ ವೃತ್ತಿ ನಿಯಮ ಪಾಲಿಸದ ವಕೀಲರು ಕಾನೂನು ಸೇವೆ ಮಾಡಲು ಅರ್ಹರಲ್ಲ ಕಾಕ್ಷಿದಾರರ ಹಿತದೊಂದಿಗೆ ಸಮಾಜ ಪ್ರತಿಯೊಬ್ಬರೊಂದಿಗೆ ಪ್ರಾಮಾಣಿಕವಾಗಿರುವ ಮೂಲಕ ವಕೀಲ ವೃತ್ತಿಯ ಘನತೆಯನ್ನು ಕಾಪಾಡಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೊ, ಕಾರ್ಯದರ್ಶಿ ಪ್ರಶಾಂತ್ ಎಮ್, ಹಿರಿಯ ಶ್ರೇಣಿ ನ್ಯಾಯಾದೀಶ ಮನು ಬಿ ಕೆ, ಪ್ರಧಾನ ಸಿವಿಲ್ ನ್ಯಾಯಾದೀಶ ರಾಮಲಿಂಗಯ್ಯ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾದೀಶ ಶಶಾಂಕ್ ನಾಗೇಂದ್ರ ಭಟ್, ಯುವ ವಕೀಲರ ವೇದಿಕೆ ಅಧ್ಯಕ್ಷರಾದ ಉದಯ ಬಿಕೆ,ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಶಿವಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದಯ ಬಿಕೆ ಸ್ವಾಗತಿಸಿ, ಪ್ರಶಾಂತ್ ಎಮ್ ಧನ್ಯವಾದವಿತ್ತರು. ವಕೀಲರ ಸಂಘದ ಮಾಜಿ ಅಧ್ಯಕ್ಷ ವಸಂತ ಮರಕಡ ಕಾರ್ಯಕ್ರಮ ನಿರೂಪಣೆ ಮಾಡಿದರು.

Related posts

ಮೊಗ್ರು: ಮುಗೇರಡ್ಕ ವ್ಯಾಪ್ತಿಯಲ್ಲಿ ಅಡಿಕೆ ತೋಟಗಳು ಜಲಾವೃತ

Suddi Udaya

ಉಜಿರೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್‌ ಆಚರಣೆ

Suddi Udaya

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತ್ರ್

Suddi Udaya

ಗೋಸಾಗಾಟ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ : ಭಾಜಪಾ. ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಸ್ಪಷ್ಟನೆ

Suddi Udaya

ಸುಳ್ಳು ಸುದ್ದಿ ಪ್ರಸಾರ ಹಾಗೂ ಅವ್ಯಾಚ್ಯ ನಿಂದನೆ ದೂರು : ಸುವರ್ಣ ನ್ಯೂಸ್ ಆ್ಯಂಕರ್ ಹಾಗೂ ವರದಿಗಾರ, ಕ್ಯಾಮೆರಾಮ್ಯಾನ್ ವಿರುದ್ಧ ಪ್ರಕರಣ ದಾಖಲು

Suddi Udaya

ತಾಲ್ಲೂಕು ಮಟ್ಟದ ಕರಾಟೆ ಸ್ಪರ್ಧೆ: ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿಗಳು

Suddi Udaya
error: Content is protected !!