29.4 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ ಈಜುಕೊಳ : ಎನ್.ಡಿ.ಆರ್. ಎಫ್ ವತಿಯಿಂದ ವಿಶೇಷ ವಿಪತ್ತು ನಿರ್ವಹಣಾ ತರಬೇತಿ

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಈಜುಕೊಳ ಕೇಂದ್ರದ ಸಹಯೋಗದಲ್ಲಿ ಎರಡು ದಿನಗಳ ವಿಶೇಷ ವಿಪತ್ತು ನಿರ್ವಹಣಾ ತರಬೇತಿ ಶಿಬಿರವು ಎಸ್‌ಡಿಎಂ ಈಜುಕೊಳದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ತರಬೇತಿ ಶಿಬಿರದಲ್ಲಿ ಶೌರ್ಯ ತಂಡದ 50 ಮಂದಿ ಸದಸ್ಯರು ಭಾಗವಹಿಸಿ ವಿವಿಧ ವಿಪತ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಾಚರಣೆಗಳ ಕುರಿತು ಪ್ರಾಯೋಗಿಕ ತರಬೇತಿಯನ್ನು ಪಡೆದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯ ಆರು ಮಂದಿ ಪರಿಣಿತ ಯೋಧರು ತರಬೇತಿಗಾಗಿ ಆಗಮಿಸಿ ವಿಪತ್ತು ನಿರ್ವಹಣೆಯ ವಿವಿಧ ಆಯಾಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ತರಬೇತಿಯ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುವವರನ್ನು ಸುರಕ್ಷಿತವಾಗಿ ರಕ್ಷಿಸುವ ವಿಧಾನಗಳು, ಪ್ರವಾಹ ಸಂದರ್ಭಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕ್ರಮಗಳು, ಹಗ್ಗಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸುವ ತಂತ್ರಗಳು, ತುರ್ತು ಪರಿಸ್ಥಿತಿಯಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಕ ಕ್ರಮವಾದ ಸಿಪಿಆರ್ (CPR) ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಲಾಯಿತು.

ಶಿಬಿರದ ಅವಧಿಯಲ್ಲಿ ಎಸ್‌ಡಿಎಂ ಈಜುಕೊಳ ಕೇಂದ್ರದ ಸಂಯೋಜಕರಾದ ಚರಣ್ ಅವರು ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿ ತರಬೇತಿಯ ಯಶಸ್ವಿ ನಿರ್ವಹಣೆಗೆ ಸಹಕರಿಸಿದರು. ಇದೇ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಅಗತ್ಯ ಮಾರ್ಗದರ್ಶನ ನೀಡಿದರು.

NDRF ಯೋಧರು ನೈಜ ವಿಪತ್ತು ಸಂದರ್ಭಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಮತ್ತು ತುರ್ತು ಸ್ಪಂದನೆಯ ಮಹತ್ವವನ್ನು ವಿವರಿಸಿದರು. ಭಾಗವಹಿಸಿದ ಶೌರ್ಯ ತಂಡದ ಸದಸ್ಯರು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಕ್ಷಣಾ ತಂತ್ರಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರು.

ಸಮಾಜದಲ್ಲಿ ವಿಪತ್ತು ನಿರ್ವಹಣೆಯ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ತುರ್ತು ಸಂದರ್ಭಗಳಲ್ಲಿ ಸಮರ್ಥವಾಗಿ ಸ್ಪಂದಿಸುವ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಎರಡು ದಿನಗಳ ತರಬೇತಿ ಶಿಬಿರವು ಅತ್ಯಂತ ಉಪಯುಕ್ತ ಹಾಗೂ ಪರಿಣಾಮಕಾರಿಯಾಗಿ ನೆರವೇರಿತು.

Related posts

ಅಯೋಧ್ಯೆ ನಗರದ ಶ್ರೀ ರಾಮ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಜ.22ರಂದು ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ”ಶ್ರೀ ರಾಮನಾಮ ತಾರಕ ಮಂತ್ರ ಹೋಮ”

Suddi Udaya

ದ.ಕ. ಜಿಲ್ಲಾ ಪಶುವೈದ್ಯಕೀಯ ಪರೀಕ್ಷಕರ ಸಂಘದಿಂದ ನಿವೃತ್ತಿಗೊಂಡ ಡಾ ಕೆ. ಜಯಕೀರ್ತಿ ಜೈನ್ ರಿಗೆ ಸನ್ಮಾನ

Suddi Udaya

ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ ಪ್ರಾರಂಭೋತ್ಸವ

Suddi Udaya

ಬಂಗಾಡಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ತ್ರಿಶಲ ಜೈನ್ ಅವರಿಗೆ ಭಾರತ್ ಸ್ಕೌಟ್ ಗೈಡ್ ಎ.ಎಲ್.ಟಿ ಅರ್ಹತೆ

Suddi Udaya

ಉಜಿರೆ: ಎಂ.ಜಿ.ಐ.ಆರ್.ಐ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಅಭಿವೃದ್ಧಿಯ ಸಾಧ್ಯತೆಗಳು ಕುರಿತು ರಾಷ್ಟ್ರೀಯ ಮಟ್ಟದ ಜಾಗೃತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪನಾ ದಿನಾಚರಣೆ ಮತ್ತು ಧ್ವಜ ಚೀಟಿ ಬಿಡುಗಡೆ

Suddi Udaya
error: Content is protected !!