29.4 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹತ್ಯಡ್ಕ ಮುದ್ದಿಗೆಯಲ್ಲಿ 11 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪವರ್‌ಮ್ಯಾನ್ ಉಮೇಶ್‌ ರವರಿಗೆ ಬೀಳ್ಕೊಡುಗೆ

ಹತ್ಯಡ್ಕ: ಹತ್ಯಡ್ಕ ಮುದ್ದಿಗೆ ಭಾಗದಲ್ಲಿ ಕಳೆದ 11 ವರ್ಷಗಳಿಂದ ಪವರ್‌ಮಾನ್ (ಲೈನ್‌ಮ್ಯಾನ್) ಆಗಿ ಸೇವೆ ಸಲ್ಲಿಸಿ, ಇದೀಗ ತಮ್ಮ ಹುಟ್ಟೂರಾದ ಬಿಜಾಪುರಕ್ಕೆ ವರ್ಗಾವಣೆಗೊಂಡಿರುವ ಉಮೇಶ್ ಅವರನ್ನು ಮುದ್ದಿಗೆ ಗ್ರಾಮಸ್ಥರ ಪರವಾಗಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಉಮೇಶ್ ಅವರನ್ನು ಸನ್ಮಾನಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರತ್ನಾ ಕೆ., “ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ, ವೃತ್ತಿಯನ್ನು ಕೇವಲ ವೃತ್ತಿಯಾಗಿ ನೋಡದೆ ಪ್ರವೃತ್ತಿ ಮನೋಭಾವನೆಯಿಂದ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದೀರಿ. ಮುಂದಿನ ನಿಮ್ಮ ಸೇವಾ ಜೀವನ ಯಾವುದೇ ನೋವುಗಳಿಲ್ಲದೆ ಸುಖಮಯವಾಗಿರಲಿ” ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ರಹೀಮ್ ಎಂ.ಆರ್., ಮಹೇಶ್ ಶೆಟ್ಟಿ, ಕರುಣಾಕರ ಗೌಡ, ಸುಂದರ ಎಚ್., ಕೇಶವ ಗೌಡ, ಕುಮರೇಶ್, ಸುಂದರ ಗೌಡ, ನೇತ್ರಾವತಿ, ಪ್ರತಿಮಾ ಗೌಡ, ರಾಜೇಶ್ ಬೊಳ್ಳೋಡಿ, ಗಣೇಶ ರಾಣೆಯರ್, ಕೃಷ್ಣ ಶೆಟ್ಟಿಗಾರ್, ಕಮಲ ಕೊಪ್ಪ, ರಿತ್ವಿಕ್ ರಾಣೆಯರ್, ಪ್ರೇಮಚಂದ್ರ ಕೆ. ಹಾಗೂ ಇತರರು ಉಪಸ್ಥಿತರಿದ್ದರು.

Related posts

ಪುಂಜಾಲಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

Suddi Udaya

ಅಧಿಕಾರಿಗಳಿಂದ ನಮಗೆ ಮಾನಸಿಕ ಹಿಂಸೆ : ಗಿರಿಯಪ್ಪ ಗೌಡ ನಾಗನಡ್ಕ ಆರೋಪ

Suddi Udaya

ಬಳಂಜ ಸರಕಾರಿ ಪ್ರೌಢ ಶಾಲೆಗೆ ಶೇ.92.5 ಫಲಿತಾಂಶ

Suddi Udaya

ಮೂರು ವರ್ಷಗಳ ಹಿಂದೆ ಶಿಬಾಜೆಯಲ್ಲಿ ನಡೆದ ಶ್ರೀಧರ ಕೊಲೆ ಪ್ರಕರಣ: ಮರು ತನಿಖೆಗೆ ಎಸ್.ಐ.ಟಿ ರಚಿಸಿ ರಾಜ್ಯ ಸರಕಾರ ಆದೇಶ

Suddi Udaya

ಮತದಾರರ ಜಾಗೃತಿ ಆಂದೋಲನ: ಕಾಲ್ನಡಿಗೆ ಜಾಥಾ ಚುನಾವಣೆ – ನಮ್ಮ ಹೊಣೆ ಬೀದಿ ನಾಟಕ ಪ್ರದರ್ಶನ

Suddi Udaya

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಮೋದಿಜೀ ರವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

Suddi Udaya
error: Content is protected !!