ಧರ್ಮಸ್ಥಳ: ಕನ್ಯಾಡಿ ಶ್ರೀನಿವಾಸ ಕೃಪಾ ದಿ| ಶ್ರೀನಿವಾಸ ರಾವ್ ದೇಲಂಪಾಡಿತ್ತಾಯರ ರವರ ಪತ್ನಿ ಶ್ರೀಮತಿ ರುಕ್ಮಿಣಿ ( 89 ವರ್ಷ ) ರವರು ಸೆ. 26ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ದಿಶಾ ಗ್ರೂಪ್ಸ್ ನ ದಿವಾಕರ ರಾವ್, ಅರುಣ್ ಕುಮಾರ್, ದಿನೇಶ್ ಕುಮಾರ್ ಮತ್ತು ಶ್ರೀಮತಿ ಸಂಧ್ಯಾ ಶ್ರೀಧರ್ ರಾವ್ ರವರನ್ನು, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.












