31 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳದಲ್ಲಿ ಯೋಗ ತರಬೇತಿ ಶಿಬಿರದ ಪೂರ್ವಭಾವಿ ಸಭೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳದಲ್ಲಿ ಯೋಗ ತರಬೇತಿ ಶಿಬಿರದ ಪೂರ್ವಭಾವಿ ಸಭೆಯು ಸೆರ.25ರಂದು ನಡೆಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ (ಟ್ರಸ್ಟ್), ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕಾರ್ಕಳ ತಾಲೂಕಿನಾದ್ಯಂತ ನಗರ ಮತ್ತು ಹಳ್ಳಿಗಳಲ್ಲಿ ಏಕಕಾಲದಲ್ಲಿ 50 ಕೇಂದ್ರದಲ್ಲಿ ಅ.11 ರಿಂದ ಅ.17 ರವರೆಗೆ 46ನೇ ಬೃಹತ್ ಉಚಿತ ದಸರಾ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರ ಹಾಗೂ ವಿದ್ಯಾರ್ಥಿಗಳಿಗಾಗಿ ಪಂಚಮುಖೀ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಲಿದೆ. ಶಿಬಿರದಲ್ಲಿ 3000 ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ನಿರ್ದೇಶಕ ಶಶಿಕಾಂತ್ ಜೈನ್ ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಯೋಜನಾಧಿಕಾರಿ ಬಾಲಕೃಷ್ಣ , ರಾಜ್ಯ ಯೋಗ ಸಂಘಟಕ ಶೇಖರ್ ಕಡ್ತಿಲ, ಸ್ಥಳೀಯ ಮುಖಂಡರು ಭಾಗವಹಿಸಿದರು .

Related posts

ಸ್ವಾವಲಂಬಿ ಸಾರಥಿ ಯೋಜನೆಯ ಫಲಾನುಭವಿಯಾಗಿ ಆಯ್ಕೆಯಾದ ವಿಜಯ ಕುಮಾರ್ ರವರಿಗೆ ಶಾಸಕ ಹರೀಶ್ ಪೂಂಜರಿಂದ ವಾಹನ ಹಸ್ತಾಂತರ

Suddi Udaya

ಮೈರೋಳ್ತಡ್ಕ -ಬಂದಾರು 31 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ಬೈಂದೂರಿನಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 18ನೇ ವರ್ಧಂತಿ

Suddi Udaya

ನಿಡಿಗಲ್ ನಲ್ಲಿ ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ: ಮಹಿಳೆ ಜಾರಿ ಬಿದ್ದಾಗ ತಲೆ ಭಾಗ ಸೀಳಿ ಹಾಕಿ ,ಕೈಗೆ ಗಂಭೀರ ಗಾಯಗೊಳಿಸಿದ ನಾಯಿ

Suddi Udaya

ಮದ್ದಡ್ಕ: ಬೈಕ್ ಮತ್ತು ಸ್ಕೂಟಿ ಅಪಘಾತ

Suddi Udaya

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಶನಿವಾರ ಪೂರ್ಣ ತರಗತಿ

Suddi Udaya
error: Content is protected !!