29.7 C
ಪುತ್ತೂರು, ಬೆಳ್ತಂಗಡಿ
September 27, 2026
Uncategorized

ಮಂಗಳೂರು ಮೂಲತ್ವ ಫೌಂಡೇಶನ್ ಟ್ರಸ್ಟ್ ವತಿಯಿಂದ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ರವರಿಗೆ ಮೂಲತ್ವ ವಿಶ್ವ ಪ್ರಶಸ್ತಿ 2026”

ಮಂಗಳೂರು: ಮೂಲತ್ವಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನೀಡಲಾಗುವ 12ನೇ ‘ಮೂಲತ್ವ ವಿಶ್ವ ಪ್ರಶಸ್ತಿ 2026”ಪ್ರಶಸ್ತಿಯನ್ನು ‘ಸ್ಥಾಲರ್‌ಶಿಪ್ ಮಾಸ್ಟ‌ರ್’ ಎಂದೇ ಖ್ಯಾತರಾದ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ಅವರಿಗೆ ಶನಿವಾರ ಮಂಗಳೂರಿನ ಬಲ್ಮಠ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಪ್ರಶಸ್ತಿ ಪ್ರದಾನಗೈದು ಮಾತನಾಡಿ,84 ರ ಇಳಿಯ ವಯಸಿನಲ್ಲಿಯೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸುಮಾರು 100 ಕೋಟಿಯಷ್ಟು ವಿದ್ಯಾರ್ಥಿ ವೇತನ ಸೇರಿದಂತೆ ಇನ್ನಿತರ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಾರಾಯಣ ನಾಯಕ್ ಸೇವೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.ಸಾವಿರಾರು ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ರಾಷ್ಟ್ರೀಯ ಮಟ್ಟದ “ಪದ್ಮಶ್ರೀ” ಪ್ರಶಸ್ತಿ ಅತೀ ಶೀಘ್ರವೇ ಸಿಗುವಂತಾಗಲಿ ಎಂದು ಹಾರೈಸಿದರು.ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನಿಸ್ವಾರ್ಥ ಸೇವೆಯನ್ನು ಮಾಡಿ ಸಮಾಜದ ನೋವಿನೊಂದಿಗೆ ಸ್ಪಂದಿಸುವ ಸಾಧಕರನ್ನು ಗುರುತಿಸಿ ‘ಮೂಲತ್ವ ವಿಶ್ವ ಪ್ರಶಸ್ತಿ’ ನೀಡುವ ಕಾರ್ಯ ಅಭಿನಂದನೀಯವಾಗಿದೆ ಎಂದರು.

ಎರಡು ಕಾಲೇಜಿಗೆ ದೇಣಿಗೆ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾರಾಯಣ ನಾಯಕ್ ಅವರು ಪ್ರಶಸ್ತಿಯಲ್ಲಿ ನಗದಿನ ರೂಪದಲ್ಲಿ ದೊರೆತ ಒಂದು‌ ಲಕ್ಷ ರೂ.ವಿಗೆ ತನ್ನ ವೈಯಕ್ತಿಕ ನೆಲೆಯಲ್ಲಿ ಒಂದು‌ ಲಕ್ಷ ರೂ.ವನ್ನು ಸೇರಿಸಿ ಎರಡುಲಕ್ಷ ರೂ.ವನ್ನು ಮಂಗಳೂರಿನ ಬಲ್ಮಠ ಮತ್ತು‌ ಕಾರ್ ಸ್ಟ್ರೀಟ್ ಪ್ರಥಮ ದರ್ಜೆ ಕಾಲೇಜಿಗೆ ದೇಣಿಗೆಯ ರೂಪದಲ್ಲಿ ನೀಡುವುದಾಗಿ ಪ್ರಕಟಿಸಿದರು. ವಿದ್ಯಾರ್ಥಿಗಳೇ ನಿಜವಾದ ಶಿಕ್ಷಕನಿಗೆ ಸಂಪತ್ತಾಗಿದ್ದು, ಸಂಪತ್ತು, ವಿದ್ಯಾರ್ಥಿಗಳು ನೀಡುವ ಗೌರವವೇ ಶಿಕ್ಷಕರಿಗೆ ಅಸ್ತಿ ಯಾಗಿದೆ ಎಂದ ನಾರಾಯಣ ನಾಯಕ್ ಅವರು ಸಮಾಜದಿಂದ ಸಿಗುವುದನ್ನು ಸಮಾಜಕ್ಕೆ ಅರ್ಪಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕುಶಿಷ್ಯಂದರ ಏಳಿಗೆಯಲ್ಲಿ ಮೊದಲಾಗಿ ಸಂತೋಷ ಪಡುವವರು ಶಿಕ್ಷಕರಾಗಿದ್ದಾರೆ ಎಂದರು.ಎಂಆರ್‌ಪಿಎಲ್ ಮಾನವ ಸಂಪನ್ಮೂಲ ಮುಖ್ಯ ಪ್ರಧಾನ ವ್ಯವಸ್ಥಾಪಕ ಮನೋಜ್ ಕುಮಾರ್ ಎ., ಬಲ್ಮಠ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗೋಪಾಲಕೃಷ್ಣ ಕೆ., ರಥಬೀದಿ ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ., ಬಿಎಎಸ್‌ಎಫ್ ಕೆಮಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕಿ, ಏಷ್ಯಾ-ಫೆಸಿಫಿಕ್ ಮುಖ್ಯಸ್ಥೆ ಆಶಿಮಾ ಸುಶೀಲ್‌ಚಂದ್ರ, ನಿರ್ದೇಶಕ, ನಟ ಜೆ.ಪಿ. ತೂಮಿನಾಡು, ಅಂಕುರಮ್ ಸಮೂಹ ಸಂಸ್ಥೆ ಅಧ್ಯಕ್ಷ ಅಕ್ಷಯ್ ಕೆ. ಪಣಿಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಇದೇ ವೇಳೆ ಮಾದಕ ದ್ರವ್ಯ ವ್ಯಸನಕ್ಕೆ ಸಂಬಂಧಿಸಿದಂತೆ “ಅ್ಯಂಟಿ ಅಡಿಷನ್ ಡ್ರೈವ್” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ, ಲಕ್ಷ್ಮೀಶ್ ಪಿ.ಕೋಟ್ಯಾನ್,ಅಕ್ಷತಾ ಹಾಗೂ ಆಯ್ಕೆ ಸಮಿತಿ ಸದಸ್ಯರಾದ ಡಾ.ಜಗದೀಶ್ ಬಾಳ,ಪ್ರೊ.ರಾಜ್‌ಮೋಹನ್,ಆರ್ .ಜೆ.ನಯನ ಶೆಟ್ಟಿ,ಡಾ.ಶೇಸಪ್ಪ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಪ್ರಕಾಶ್ ಅವರು ಪ್ರಸ್ತಾವಿಸಿ,ಸ್ವಾಗತಿಸಿದರು.ಗುಣಾವತಿ ವಂದಿಸಿದರು.ಡಾ.ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಸಿದರು.ವಿವಿಧ ಕಾಲೇಜಿನ ಸಾವಿರಕ್ಕು ಅಧಿಕ ಂಮದಿ ವಿದ್ಯಾರ್ಥಿಗಳು ಕಾರ್ಯಕ್ತಮದಲ್ಲಿ ಭಾಗವಹಿಸಿದ್ದರು.ಬಳಿಕ ಸಾಂಸ್ಕೃತಿಕ ಕಾರ್ಯಕ್ತಮವು ನಡೆಯಿತು.

Related posts

ಎಸ್.ಎಸ್.ಎಲ್.ಸಿ ಫಲಿತಾಂಶ: ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್.ಇ ಶಾಲೆಗೆ ಶೇ.100 ಫಲಿತಾಂಶ

Suddi Udaya

ಆ.30: ಅಜಿಲ ಸೀಮೆಯ ಸಾಂಪ್ರದಾಯದಂತೆ‌ಶ್ರೀ ಸೋಮೇಶ್ವರೀ ದೇವರ ಗೆದ್ದಯಲ್ಲಿ ನಾಲ್ಕೇತ್ತು ಕಂಬಳ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ನ .29: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ವಾಹನಗಳ ಹರಾಜು

Suddi Udaya

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಹರ್ಷಿತ ಆಯ್ಕೆ

Suddi Udaya

ಕೆಪಿಸಿಸಿ ಇಂಟಕ್ ನ ರಾಜ್ಯಾಧ್ಯಕ್ಷ ಲಕ್ಷ್ಮಿವೆಂಕಟೇಶ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya
error: Content is protected !!