28 C
ಪುತ್ತೂರು, ಬೆಳ್ತಂಗಡಿ
September 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ: ಎರುಕಡಪ್ಪು ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ

ಗೇರುಕಟ್ಟೆ : ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿಯಲ್ಲಿ ಪೋಷನ್ ಮಾಸಾಚರಣೆ ಅಂಗವಾಗಿ ಸೆ.29 ರಂದು ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಯಿತು.

ಉತ್ತಮ ಆರೋಗ್ಯ ನಾವು ಸೇವಿಸುವ ಗುಣಮಟ್ಟದ ಆಹಾರ ಸೇವಿಸುವುದರಿಂದ ಶಾರೀರಿಕವಾಗಿ, ದೈಹಿಕ ಸಾಮರ್ಥ್ಯ ಹೊಂದಲು ಸಾಧ್ಯ, ಅಲ್ಲದೆ ಅಪೌಷ್ಟಿಕತೆಯಿಂದ ಮುಕ್ತಿ ಪಡೆಯಲು ಪೌಷ್ಠಿಕ ಆಹಾರಗಳ ಸೇವನೆಯಲ್ಲಿ ಮಕ್ಕಳ ಮನವೊಲಿಸುವಲ್ಲಿ ಪೋಷಕರ ಕೆಲಸವಾಗಬೇಕು ಎಂದು ಹೇಳಿದರು.ಸೊಪ್ಪು, ತರಕಾರಿಗಳನ್ನು ಸೇವಿಸುವ ಮೂಲಕ ಆರೋಗ್ಯದ ಜೀವನ ನಡೆಸಲು ಸಾಧ್ಯ.ಮಾತ್ರವಲ್ಲದೇ ಮಾರುಕಟ್ಟೆಯಲ್ಲಿ ಸಿಗುವ ಪಾಸ್ಟ್ ಪುಡ್, ತಿಂಡಿ, ತಿನಿಸುಗಳನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಆರೋಗ್ಯ ಮತ್ತು ಭವಿಷ್ಯದಲ್ಲಿ ತೊಂದರೆಗಳು ಉಂಟಾಗುತ್ತದೆ. ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ಸಿಗುವ ಆಹಾರ, ಪದಾರ್ಥ ಮತ್ತು ಸಲಹೆಗಳಿಂದ ನಮ್ಮ ಜೀವನದಲ್ಲಿ ಉತ್ತಮ ಆರೋಗ್ಯ ಸಿಗುತ್ತದೆ ಎಂದು ಗೇರುಕಟ್ಟೆ ಸರಕಾರಿ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಬೇಶ್ ಕುಮಾರಿ ಮಾಹಿತಿ ನೀಡಿದರು.

ಪಂಚಾಯತ್ ಮಾಜಿ ಸದಸ್ಯೆ ಶ್ವೇತಾ ಶ್ರೀನಿವಾಸ್, ಆಶಾ ಕಾರ್ಯಕರ್ತೆ ಸುಭಾಷಿಣಿ ಕೆ., ಉಪಸ್ಥಿತರಿದ್ದರು.
ಬಾಲ ವಿಕಾಸ ಸಮಿತಿ ಅಧ್ಯಕ್ಷೆ ನೀತಾ ಸತೀಶ್ ಸಭೆಯ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಅನ್ನ ಪ್ರಾಶನ್ನ ಜರಗಿತು.

ಅಂಗನವಾಡಿ ಮಕ್ಕಳ ಪೋಷಕರು ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಖಾದ್ಯ, ಸಿಹಿ,ತಿಂಡಿಗಳನ್ನು ಅಂಗನವಾಡಿಯಲ್ಲಿ ಸಹ ಭೋಜನ ನಡೆಯಿತು. ಬಾಲ ವಿಕಾಸ ಸಮಿತಿ ಸದಸ್ಯರು, ಪೋಷಕರು ಭಾಗವಹಿಸಿದರು. ಸಹಾಯಕಿ ಗೀತಾ ಸಹಕರಿಸಿದರು.
ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್.ಸ್ವಾಗತಿಸಿ, ವಂದಿಸಿದರು.

Related posts

ಧರ್ಮಸ್ಥಳ ಅಜೆಕುರಿ ಅಕ್ರಮ ಮರಳು ಅಡ್ಡೆಗೆ ಗಣಿ ಇಲಾಖೆ ದಾಳಿ: ಸ್ಥಳದಲ್ಲಿದ್ದ ನಾಲ್ಕು ಬೋಟ್ ಮತ್ತು ಮರಳು ವಶಕ್ಕೆ

Suddi Udaya

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ವಾತ್ಸಲ್ಯ ನಿಧಿ ವಿತರಣೆ

Suddi Udaya

ಎಸ್ಸೆಸ್ಸೆಲ್ಸಿ ಫಲಿತಾಂಶ: ಮಚ್ಚಿನ ಸರಕಾರಿ ಪ್ರೌಢಶಾಲೆಗೆ ಶೇ 98.87 ಫಲಿತಾಂಶ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ತ್ರೋಬಾಲ್ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘದ 25ನೇ ಕ್ಷೇಮ ನಿಧಿ ಯೋಜನೆಯ ಸಹಾಯಧನ ಹಸ್ತಾಂತರ

Suddi Udaya

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯ ಶಿಕ್ಷಕ ಯುವರಾಜ್ ರವರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!