28 C
ಪುತ್ತೂರು, ಬೆಳ್ತಂಗಡಿ
September 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರ್ ವತಿಯಿಂದ ಕಕ್ಕಿಂಜೆ ಸ.ಹಿ.ಪ್ರಾ. ಶಾಲೆಗೆ ಕಂಪ್ಯೂಟರ್ ಪ್ರಿಂಟರ್ ಕೊಡುಗೆ

ಕಕ್ಕಿಂಜೆ : ಮಂಜುಶ್ರೀ ಸೀನಿಯರ್ ಛೇಂಬರ್ ವತಿಯಿಂದ ಕಕ್ಕಿಂಜೆ ಅಣಿಯೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಪ್ರಿಂಟರ್ ಹಸ್ತಾಂತರ ಕಾರ್ಯಕ್ರಮ ಸೆ. 29ರಂದು ಶಾಲೆಯಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸೀನಿಯರ್ ಛೇಂಬರ್ ಅಧ್ಯಕ್ಷ ಜಾನ್ ಅರ್ವಿನ್ ಡಿಸೋಜ ವಹಿಸಿದ್ದರು.ಶಾಲಾ ಮುಖ್ಯ ಶಿಕ್ಷಕಿ ಉಷಾ ಸಿ. ಜೆ., ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಹಕೀಮ್ ಪ್ರಿಂಟರ್ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

ಮಂಜುಶ್ರೀ ಸೀನಿಯರ್ ಛೇಂಬರ್ ನಿಕಟ ಪೂರ್ವ ಅಧ್ಯಕ್ಷ ಮಂಜುನಾಥ ರೈ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಕಾರ್ಯದರ್ಶಿ ಶರತ್ ಕುಮಾರ್ ಕೆ., ಸದಸ್ಯರಾದ ಎಂ. ಆರ್. ಪ್ರಸನ್ನ, ಜಾರಪ್ಪ ಪೂಜಾರಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಮಾಲಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಚಿತ್ರಾ ವಂದಿಸಿದರು, ಶಿಕ್ಷಕ ವೃಂದ, ಶಾಲಾ ಮಕ್ಕಳು ಹಾಜರಿದ್ದರು.

Related posts

ಗಂಡಿಬಾಗಿಲಿನ ಸೈಂಟ್ ತೋಮಸ್ ಚರ್ಚಿನಲ್ಲಿ ಗುಡ್ ಫ್ರೈಡೆ ಪ್ರಯುಕ್ತ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸುವರ್ಣ ರಂಗ ಸಮ್ಮಾನ್ , ಸಾಧನಾ ಭೂಷಣ – 2024

Suddi Udaya

ದೇಶಭಕ್ತಿ ಗುಂಪು ಗಾಯನ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ

Suddi Udaya

ಮುಂಡಾಜೆ ಸೀಟು ಬಳಿ ರಸ್ತೆಗೆ ಬಿದ್ದ ಮರ : ವಾಹನ ಸವಾರರ ಪರದಾಟ

Suddi Udaya

ಎಕ್ಸಲೆಂಟ್ ವಾಣಿಜ್ಯ ವಿಭಾಗ – ಮರು ಮೌಲ್ಯಮಾಪನದಲ್ಲಿ 2 ರ‍್ಯಾಂಕ್ ಸೇರ್ಪಡೆ

Suddi Udaya

ಮಡಂತ್ಯಾರು ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮೋತ್ಸವ

Suddi Udaya
error: Content is protected !!