September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಬೆಳ್ತಂಗಡಿ ಘಟಕ ತೃತೀಯ ಸ್ಥಾನ

ಬೆಳ್ತಂಗಡಿ: ಯುವ ವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಪುತ್ತೂರು ಘಟಕದ ಆತಿಥ್ಯದಲ್ಲಿ ಪುತ್ತೂರಿನಲ್ಲಿ ನಡೆದ ಡೆನ್ನಾನ ಡೆನ್ನಾನ 2025 ಅಂತರ ಘಟಕ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ತಂಗಡಿ ಘಟಕ ಭಾಗವಹಿಸಿದ್ದು ಅತ್ಯುತ್ತಮ ಪ್ರದರ್ಶನದೊಂದಿಗೆ ನೋಡುಗರ ಹಾಗೂ ತೀರ್ಪುಗಾರರ ಮನ ಗೆದ್ದು ತೃತೀಯ ಸ್ಥಾನವನ್ನು ಪಡೆದಿರುತ್ತದೆ ಹಾಗೂ ಅತ್ಯುತ್ತಮ ಸಂದೇಶವನ್ನು ಸಾರುವ ಕಥೆ ಈ ಪ್ರಶಸ್ತಿಯನ್ನು ಕೂಡ ಬೆಳ್ತಂಗಡಿ ಘಟಕ ಪಡೆದಿರುತ್ತದೆ.


ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ನೇತೃತ್ವದಲ್ಲಿ ಭಾಗವಹಿಸಿದ ಈ ತಂಡವು ನಿರ್ದೇಶಕರಾದ ಸ್ಮಿತೇಶ್ ಎಸ್ ಬಾರ್ಯ ಹಾಗೂ ಅನೀಶ್ ಅಮೀನ್ ವೇಣೂರು ಇವರ ಅತ್ಯುತ್ತಮ ಕಥೆ ಹಾಗೂ ನಿರ್ದೇಶನದೊಂದಿಗೆ ಪ್ರಸ್ತುತಿಗೊಂಡಿತು. ತಂಡದಲ್ಲಿ ಒಟ್ಟು 40 ಜನ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

ಘಟಕದ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಮಚ್ಚಿನ, ರಾಕೇಶ್ ಮೂಡಿಕೋಡಿ, ಎಂ ಕೆ ಪ್ರಸಾದ್, ಅಶ್ವತ್ ಕುಮಾರ್, ಸದಾಶಿವ ಪೂಜಾರಿ ಊರ ಹಾಗೂ ಗೌರವ ಸಲಹೆಗಾರರಾದ ರಮಾನಂದ ಸಾಲಿಯಾನ್ ಮುಂಡೂರು, ಕಾರ್ಯದರ್ಶಿ ಮಧುರ ರಾಘವ, ಕೋಶಾಧಿಕಾರಿ ನಾಗೇಶ್ ಆದೇಲು, ಮಹಿಳಾ ಸಂಚಾಲನ ಸಮಿತಿ ಸಂಚಾಲಕರಾದ ಲೀಲಾವತಿ ಪಣಕಜೆ ಹಾಗು ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts

ಕನ್ಯಾಡಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

Suddi Udaya

ರಾಜ್ಯಮಟ್ಟದ ವಿಜ್ಞಾನ ಸಮಾವೇಶ: ಉಜಿರೆ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿಗಳ ಎರಡು ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಶಿಶಿಲ ಗಿರಿಜನ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ನಂದಿನಿ ಹಾಗೂ ನಿರ್ಮಲ ಸ್ತ್ರೀ ಶಕ್ತಿ ಸದಸ್ಯರಿಂದ ಶ್ರಮದಾನ ಹಾಗೂ ಪೌಷ್ಟಿಕ ಕೈತೋಟ ನಿರ್ಮಾಣ

Suddi Udaya

ಸುಲ್ಕೇರಿಯಲ್ಲಿ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Suddi Udaya

ಅಳದಂಗಡಿ: ಜನಮಂಗಳ ಕಾರ್ಯಕ್ರದಡಿ ‘ವೀಲ್ ಚೇರ್’ ವಿತರಣೆ

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ವತಿಯಿಂದ ಗ್ರಾ.ಪಂ. ಉಪಚುನಾವಣೆ ಪೂರ್ವತಯಾರಿ ಸಭೆ

Suddi Udaya
error: Content is protected !!