28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಪ್ಪಿನಂಗಡಿಯಲ್ಲಿ ಕಾರ್ಮಿಕ ಕೊಲೆ ಪ್ರಕರಣ : ಆರೋಪಿ ಕಲ್ಮಂಜ ನಿವಾಸಿ ಬಾಬು ಬಂಧನ

ಬೆಳ್ತಂಗಡಿ: ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯ ಗ್ರಾ.ಪಂ. ಸ್ವಾಮ್ಯದ ನಿರ್ಮಾಣ ಹಂತದಲ್ಲಿರುವ ಗ್ರಂಥಾಲಯ ಕಟ್ಟಡದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ದೀಪಕ್ ಬೆಂಗರ (34) ಅವರನ್ನು ಕೊಲೆಗೈದ ಪ್ರಕರಣದ ಆರೋಪಿ ಕಲ್ಮಂಜ ನಿವಾಸಿ ಬಾಬು ಯಾನೆ ರುದ್ರ (68) ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ: ಮಂಗಳವಾರ ರಾತ್ರಿ ಬಸ್ ನಿಲ್ದಾಣ ಪರಿಸರದಲ್ಲಿ ಅಲೆಯುತ್ತಿದ್ದ ಆರೋಪಿ, ಕಳ್ಳತನ ಪ್ರಕರಣದಲ್ಲಿ ಪೊಲೀಸ್ ಇಲಾಖೆಗೆ ಬೇಕಾಗಿದ್ದ ಈತ ರಾತ್ರಿ ಗಸ್ತು ನಿರತ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಬಸ್ ನಿಲ್ದಾಣ ಪರಿಸರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಪ್ರವೇಶಿಸಿ ಅಲ್ಲಿ ಮಲಗಲು ಮುಂದಾಗಿದ್ದ ಸ್ವಲ್ಪ ಹೊತ್ತಿನ ಬಳಿಕ ಆ ವೇಳೆಗಾಗಲೇ ಅಲ್ಲಿ ಮಲಗಿದ್ದ ದೀಪಕ್ ಬೆಂಗರ ಎಚ್ಚರಗೊಂಡು ಅಲ್ಲಿ ಮಲಗದಂತೆ ದೀಪಕ್ ಗದರಿಸಿದ್ದ ಈತ ಇಲ್ಲಿಯ ಕಾವಲುಗಾರನಿರಬಹುದೆಂದು ಅಂದಾಜಿಸಿ ಅಲ್ಲಿಂದ ಮತ್ತೆ ಬಸ್ ನಿಲ್ದಾಣಕ್ಕೆ ಬಂದಿದ್ದ ಹಂತಕ, – ತನ್ನ ಪ್ಯಾಂಟಿನ ಜೇಬಿನಲ್ಲಿದ್ದ ಹಣ ಮತ್ತು ಮೊಬೈಲ್ ಕಣ್ಮರೆಯಾಗಿರುವುದನ್ನು ಕಂಡು ಅಲ್ಲಿ ಮಲಗಿರುವ ದೀಪಕ್ ಬೆಂಗರನೇ ಅದೆಲ್ಲವನ್ನೂ ಕದ್ದಿರಬೇಕೆಂದು ವಾಪಸು ಬಂದು ಆತನೊಂದಿಗೆ ವಾಗ್ವಾದಕ್ಕೆ ಇಳಿದಿದ್ದ. ಬಳಿಕ ಬೇರೆಡೆಗೆ ತೆರಳಿದ ಆರೋಪಿ ಬಾಬು ಬಳಿಕ ಸಮೀಪದ ಹೊಟೇಲೊಂದರ ಬಳಿಯಿಂದ ದೊಣ್ಣೆಯನ್ನು ತಂದು ಮಲಗಿದ್ದ ದೀಪಕ್ ಬೆಂಗರನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದನು.

ದೀಪಕ್ ರವರು ಕೆಲವು ಸಮಯ ಹಿಂದೆ ಸ್ಥಳೀಯ ಬಾರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದ. ಅಸ್ಸಾಂನ ತಿಮ್ಮತಿ ಬೆಂಗರ ಅವರ ಮಗ ದೀಪಕ್ ಬೆಂಗರ ಕೊಲೆಗೀಡಾದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದರು.

ದೀಪಕ್ ನಿರ್ಗತಿಕನಂತೆ ಬೀದಿ ಬದಿ, ಜನವಸತಿ ಇಲ್ಲದ ಕಟ್ಟಡದಲ್ಲಿ ಮಲಗುತ್ತಿದ್ದರಿಂದ ಆತನ ಒಡನಾಡಿಗಳ ಬಗ್ಗೆ ತಿಳಿಯದೆ ಹಂತಕನನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೆ ಕಗ್ಗಂಟಾಗಿತ್ತು. ಪೊಲೀಸರು బಸ್ ನಿಲ್ದಾಣ ಪರಿಸರದಲ್ಲಿನ ಸಿಸಿ ಕೆಮರಾಗಳ ದೃಶ್ಯಾವಳಿಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಶಂಕಿತ ಆರೋಪಿಯ ಚಲನವಲನಗಳು ಪತ್ತೆಯಾಗಿದ್ದವು.

ಈ ಕಾರಣದಿಂದ ಕಲ್ಮಂಜ ಗ್ರಾಮದ ಕುಂಬ್ರಂಗೆ ಮನೆ ನಿವಾಸಿ ಬಾಬು ಯಾನೆ ರುದ್ರನನ್ನು ಉಳ್ಳಾಲ ತಾಲೂಕಿನ ದೇರಳಕಟ್ಟೆಯಲ್ಲಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್., ಎಸ್‌ಐ ಅವಿನಾಶ್ ಎಚ್., ಸಿಬಂದಿಗಳಾದ ಶಿವರಾಮ್, ಹಿತೋಷ್, ಗಿರೀಶ್, ರಾಮಣ್ಣ ಗೌಡ, ಹೇಮರಾಜ್, ಮಹದೇವ, ನಾಗರಾಜ್, ಪ್ರವೀಣ್ ರೈ, ಹರೀ ಶ್ಚಂದ್ರ, ತಾಂತ್ರಿಕ ವಿಭಾಗದ ದಿವಾಕರ್ ಅವರನ್ನು ಒಳಗೊಂಡ ತಂಡ ಕಾರಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Related posts

ಕೊಯ್ಯುರು : ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಆಡಳಿತ ಮಂಡಳಿ ರಚನೆ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ ಯುವಸಿರಿ- ರೈತ ಭಾರತದ ಐಸಿರಿ ವಿಶಿಷ್ಟ ಕಾರ್ಯಕ್ರಮ ಸುಮಾರು 500ಕ್ಕೂ ಮಿಕ್ಕಿ ಕಾಲೇಜು ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಗದ್ದೆಯಲ್ಲಿ ನೇಜಿನಾಟಿ

Suddi Udaya

ರಾಜ-ಮಹಾರಾಜ ಜೋಡುಕರೆ ಕಂಬಳ: ಮುಳಿಯ ಜ್ಯುವೆಲ್ಸ್ ನಿಂದ ಆಭರಣಗಳ ಪ್ರದರ್ಶನ: ಮುಳಿಯ ಪ್ರಾಪರ್ಟೀಸ್‌ ಬಗ್ಗೆ ಮಾಹಿತಿ ಕೇಂದ್ರ

Suddi Udaya

ಮೊಗ್ರು: ಮುಗೇರಡ್ಕ ದೈವಸ್ಥಾನದ ವತಿಯಿಂದ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಶಿಶುಮಂದಿರಕ್ಕೆ ಸ್ಮಾರ್ಟ್ ಎಲ್.ಇ.ಡಿ ಟಿವಿ ಕೊಡುಗೆ

Suddi Udaya

ಸ್ಪಂದನಾ ಸೇವಾ ಸಂಘದ ಯೋಜನೆಯಿಂದ ಚಿಕಿತ್ಸಾ ನೆರವು

Suddi Udaya
error: Content is protected !!