30.5 C
ಪುತ್ತೂರು, ಬೆಳ್ತಂಗಡಿ
October 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಟ್ರಮೆ- ಮಣಿಯೇರು ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ: ಚುನಾವಣೆ ಬಹಿಷ್ಕಾರ ಬ್ಯಾನರ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ ನಾಗರೀಕರು

ಬೆಳ್ತಂಗಡಿ: ಪಟ್ರಮೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಟ್ರಮೆ- ಮಣಿಯೇರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಊರಿನ ರಸ್ತೆ ಅಭಿವೃದ್ಧಿಯ ಬೇಡಿಕೆ ೩೫ ವರ್ಷದಿಂದ ಈಡೇರಿಲ್ಲ ಎಂಬ ಕೂಗು ಅಲ್ಲಿನವರದ್ದು. ಹಿಂದೆಲ್ಲ ಪ್ರಧಾನಿಗೆ ಪತ್ರ ಬರೆದು ಪ್ರತಿಕ್ರಿಯೆ ಬಂದರೆ ಅದರ ಮುಂದಿನ ಕೆಲಸಗಳು ಆಗುತ್ತಿತ್ತು. ಆದರೆ ಪಟ್ರಮೆ ಗ್ರಾ.ಪಂ. ವ್ಯಾಪ್ತಿಯ ಮಂದಿ ಪಟ್ರಮೆ-ಮಣಿಯೇರುವಿಗೆ ಸುಸಜ್ಜಿತ ರಸ್ತೆ ಒದಗಿಸಿ ಎಂದು ಮೂರು ಬಾರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಅಲ್ಲಿಂದ ಪ್ರತಿಕ್ರಿಯೆಯೂ ಬಂದಿದೆ. ಆದರೆ ರಸ್ತೆಗೆ ಮಾತ್ರ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಕಳೆದ ವರ್ಷ ಈ ಗ್ರಾಮಸ್ಥರ ಅಳಲಾಗಿತ್ತು ಆದರೆ ಇದೀಗ ಈ ಭಾಗದ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಬ್ಯಾನರ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲೂಕು ಕೇಂದ್ರದಿAದ ಸುಮಾರು 35 ಕಿ.ಮೀ. ದೂರದ ಪಟ್ರಮೆ ಗ್ರಾಮದ ಪಟ್ರಮೆ-ಮಣಿಯೇರು ಜನರಿಗೆ ಇದು ಬಹುಬೇಡಿಕೆಯ ರಸ್ತೆಯಾಗಿದೆ. ೧೯೯೫ ರಲ್ಲಿ ಸುಮಾರು ೩ ಕಿ.ಮೀ. ರಸ್ತೆ ಗ್ರಾ.ಪಂ. ರಸ್ತೆಯಾಗಿ ಬದಲಾಯಿತು. ಆರಂಭದಲ್ಲಿ ೩೦ ಮೀಟರ್ ಕಾಂಕ್ರೀಟ್ ರಸ್ತೆ ಬಿಟ್ಟರೆ ಅದು ಮುಂದೆ ಹೋಗಿಲ್ಲ. ಎರಡೂವರೆ ಕಿ.ಮೀ. ಕಾಂಕ್ರೀಟ್ ರಸ್ತೆಗಾಗಿ ಕಳೆದ ೩೬ ವರ್ಷ ದಿಂದ ಶಾಸಕರು, ಗ್ರಾ.ಪಂ., ಸಮಾಜ ಕಲ್ಯಾಣ ಇಲಾಖೆ ಮೂಲಕ ಸರಕಾರಕ್ಕೆ ಬೇಡಿಕೆಯಿಡುತ್ತಾ ಬಂದಿದ್ದಾರೆ. ಇದರಿಂದ ಬೇಸತ್ತ ಗ್ರಾಮಸ್ಥರು ಈ ಬಾರಿ ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಸೆ.27 ರಂದು ಸಂಜೆ 6 ಗಂಟೆಗೆ ಅಳವಡಿಸಿ ನಾಲ್ಕು ದಿನಕಳೆದರೂ ಯಾವೊಬ್ಬ ಅಧಿಕಾರಿಗಳು ಇತ್ತ ಸುಳಿಯದಿರುವುದು ವಿಪರ್ಯಾಸವೇ ಸರಿ.

ಎಸಿಎಸ್ಟಿ ಕಾಲನಿ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಂದಿಗೆ ಆಶ್ವಾಸನೆಗಳು ಬಿಟ್ಟರೆ ಸ್ವಾತಂತ್ರ‍್ಯ ಬಳಿಕವೂ ಸವಲತ್ತುಗಳು ಅವರಿಗೆ ತಲುಪದೆ ಕಷ್ಟ ಅನುಭವಿಸುತ್ತಿದ್ದಾರೆ. ಪಟ್ರಮೆ ಪೇಟೆಯ ಮುಖ್ಯ ರಸ್ತೆಯಿಂದ ಮಣಿಯೇರು ಸಂಪರ್ಕಿಸುವ ರಸ್ತೆ ಬದಿಯಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್‌ನ್ನು ಸೆ.೨೯ ಸಂಜೆ ೬ ಗಂಟೆಗೆ ರಂದು ಅಳವಡಿಸಲಾಗಿದೆ ಆದರೆ ಸೆ.೩೦ ಇಲ್ಲಿಯವರೆಗೂ ಸ್ಥಳೀಯ ಆಡಳಿತದಿಂದ ತಾಲೂಕು ಆಡಳಿತ ಅಧಿಕಾರಿಗಳು ಇದುವರತೆಗೂ ಭೇಟಿ ನೀಡಿಲ್ಲ. ಬೀಟ್ ಪೊಲೀಸರು ಇಲ್ಲಿಗೆ ಭೇಟಿ ನೀಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮಕ್ಕೆ ತರುವುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ. ಮಣಿಯೇರಿನಲ್ಲಿ ೬೫ ಕುಟುಂಬಗಳಲ್ಲಿ ಸುಮಾರು ೨೦ ಕುಟುಂಬಗಳು ಪರಿಶಿಷ್ಟರದ್ದೆ ೨೦೨೨ರಲ್ಲಿ ಕೂಟೇಲಿಂದ ೩೦ ಮೀಟರ್ ಕಾಂಕ್ರೀಟ್ ರಸ್ತೆ ಆಗಿದೆ. ಬಳಿಕ ಮಣ್ಣಿನ ರಸ್ತೆ, ಮುಚ್ಚಿರುವ ಬದಿಪಳಿಕೆ ಸ.ಕಿ.ಪ್ರಾ.ಶಾಲೆ ವರೆಗೆ ವಾಹನ ಬಹಳ ತ್ರಾಸದಾಯಕವಾಗಿ ತಲುಪುತ್ತದೆ. ಮಳೆಗಾಲದಲ್ಲಿ ವಾಹನ ಅಲ್ಲಿ ಇರಿಸಿ ೧ ಕಿ.ಮೀ. ನಡೆದೇ ಸಾಗಬೇಕು. ಸುಮಾರು ೧೦-೧೨ ಮಕ್ಕಳು ಅಂಗನವಾಡಿ, ಶಾಲೆಗೆ ತೆರಳುತ್ತಾರೆ. ಆರೋಗ್ಯ ಸಮಸ್ಯೆಯಾದಲ್ಲಿ ಹೊತ್ತೇ ಸಾಗಬೇಕಾದ ಸ್ಥಿತಿ ಈ ಊರಿನದ್ದಾಗಿದೆ. ನದಿ ಬದಿಯಲ್ಲಿ ರಸ್ತೆ ಸಾಗಿದ್ದು, ಆಟೋ ರಿಕ್ಷಾ, ವಾಹನಗಳು ನಮ್ಮಕಡೆಗೆ ಬರುವುದೇ ದೊಡ್ಡ ಸವಾಲು. ಆನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಕಷ್ಟಕರ ಸಂಗತಿ ಆಗಿದೆ.

ಪ್ರಧಾನಿಗೂ ಪತ್ರ ಬರೆಯಲಾಗಿತ್ತು:
ತಮ್ಮ ಗ್ರಾಮದ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥ ಗಿರೀಶ್ ಎಂ. ಮಣಿಯೇರು ಪ್ರಧಾನಿ ನರೇಂದ್ರ ಮೋದಿಗೆ ೨೬-೦೮-೨೦೨೪ ರಂದು ತಮ್ಮ ಸಂಕಷ್ಟದ ಬಗ್ಗೆ ಪತ್ರ ಬರೆದಿದ್ದರು. ಪ್ರಧಾನಿ ಕಚೇರಿಯಿಂದ ಕರೆ ಬಂದಿತ್ತು. ಜಿ.ಪಂ.ಗೆ ಪ್ರಕರಣವರ್ಗಾಯಿಸಿದ್ದರು ಆದರೆ ಅಧಿಕಾರಿಗಳು ಮೌನರಾದರು. ಮತ್ತೆ ೧೩-೦೧-೨೦೨೫ಕ್ಕೆ ಎರಡನೇ ಪತ್ರ ಬರೆದರು. ಅದೂ ಕೂಡ ಪತ್ರವ್ಯವಹಾ ರಕ್ಕಷ್ಟೆ ಸೀಮಿತವಾಯಿತು. ೧೪-೦೪-೨೦೨೫ ರಂದು ೩ನೇ ಬಾರಿಗೆ ರಸ್ತೆ ಚಿತ್ರಣ ಸಹಿತ ಪ್ರಧಾನಿಗೆ ಪತ್ರ ಬರೆದರೂ ಅಲ್ಲಿಂದ ಕರೆ ಸ್ಪಂದನೆ ಹೊರತುಪಡಿಸಿ ಯಾವುದೇ ಸುಧಾರಣೆ ಕಂಡಿಲ್ಲ. ಈ ಹಿಂದೆಮ್ಮೊ ಸಮಾಜ ಕಲ್ಯಾಣ ಇಲಾಖೆಯಿಂದ ಸವೇ ನಡೆಸಿ ೩ ಕೋಟಿ.ರೂ.ವೆಚ್ಚದ ಪ್ರಸ್ತವಾನೆ ಕಳುಹಿಸಲಾಗಿತ್ತು ಆದರೆ ಇಂದಿಗೂ ಅನುಷ್ಠಾನಕ್ಕೆ ಬಂದಿಲ್ಲ.

ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದೇವು:
ನಾವು ೩೫ ವರ್ಷಗಳಿಂದ ಕೇವಲ ಆಶ್ವಾಸನೆಗಳಲ್ಲೇ ದಿನ ಕಳೆದಿದ್ದೇವೆ. ಈಗ ನಮ್ಮ ಸಹನೆಯ ಕಟ್ಟೆ ಒಡೆದಿದೆ.
ಕಳೆದ ಬಾರಿ ಮತದಾನ ಬಹಿಷ್ಕರಿಸಲು ಮುಂದಾದಾಗ ರಾಜಕೀಯ ಪಕ್ಷದವರು ನಮ್ಮ ಮನವೊಲಿಸಿದ್ದರು. ಆದರೆ ಇದುವರಗೂ ರಸ್ತೆ ಅಭಿವೃದ್ಧಿ ಮಾಡಿಲ್ಲ. ನಮಗೆ ಇನ್ನೂ ಆಶ್ವಾಸನೆ/ಭರವಸೆ ಬೇಡ, ನಮ್ಮ ಬಹುಕಾಲದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವರೆಗೂ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥ ಗಿರೀಶ್ ಎಂ. ಮಣಿಯೇರು ಹೇಳಿದ್ದಾರೆ.

ಚುನಾವಣೆ ಬಹಿಷ್ಕಾರ
ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಪಟ್ರಮೆ-ಸಂಕೇಶ-ಮಣಿಯೇರು ಎಸ್ಸಿ/ಎಸ್ಟಿ ಕಾಲೋನಿ ರಸ್ತೆ ೨.೫ ಕಿಮೀ ಹಾಗೂ ಪಟ್ರಮೆ-ಬರ್ಕಳ-ಶೀಮುಳ್ಳು ೩ಕಿಮೀ ಉದ್ದದ ಆಸ್ತೆಯ ಕಾ೦ಕ್ರೀಟೀಕರಣಕ್ಕೆ ಕಳೆದ 10 ವರ್ಷಗಳಿಂದ ಬೇಡಿಕೆ ಇಡುತ್ತಿದ್ದೇವೆ.
ಬೇಡಿಕೆಯನ್ನು ಈಡೇರಿಸದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವರ್ತನೆಯನ್ನು ಖಂಡಿ, ಈ ಬೇಡಿಕೆ ಈಡೇರುವವರೆಗೆ
ಮುಂಬರುವ ಎಲ್ಲಾ ಚುನಾವಣೆಯನ್ನು ಈ ಭಾಗದ ಎಲ್ಲಾ ಗ್ರಾಮಸ್ಥರು ಬಹಿಷ್ಕಾರಿಸ ವಾಗಿ ಒಕ್ಕೊರಲಾಗಿ ತೀರ್ಮಾನಿಸಲಾಗಿದೆ ಎಂದು ಬ್ಯಾನರ್‌ನಲ್ಲಿ ಉಲ್ಲೇಖಿಸಲಾಗಿದೆ.

Related posts

ಕೊಕ್ಕಡ ಶ್ರೀ ಕ್ಷೇತ್ರ ‌ಸೌತಡ್ಕ ಮಹಾಗಣಪತಿ ‌ದೇವಾಲಯದ‌ ಮುಂಭಾಗದಲ್ಲಿ ನೂತನ ಹರಕೆಯ ಘಂಟೆಯ ‌ಅಂಗಡಿ ಶುಭಾರಂಭ

Suddi Udaya

ಶಿಶಿಲ ಆರೋಗ್ಯ ಉಪಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ಶೀಘ್ರವಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯ

Suddi Udaya

ವಿಟಿಯುಗೆ 9ನೇ ರ್‍ಯಾಂಕ್ ಗಳಿಸಿದ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಹಳೇ ವಿದ್ಯಾರ್ಥಿನಿಗೆ ಸನ್ಮಾನ

Suddi Udaya

ಬೆಳ್ತಂಗಡಿ :ಸ್ಕ್ರೀನ್ ಪ್ರಿಂಟ್ ಮಾಲಕ ಬಿ.ಕೆ. ಹರಿಪ್ರಸಾದ್ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya

ಶಿಶಿಲ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!