ಮಂಗಳೂರು, : ಎಮ್ ಆರ್ ಪಿ ಎಲ್ ನ CHT ಘಟಕದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಅವರು ಮೃತಪಟ್ಟಿದ್ದು, ಹಲವು ಕಾರ್ಮಿಕರು ಗಾಯಗೊಂಡ ಹಿನ್ನೆಲೆಯಲ್ಲಿ ಇಂದು ಎಮ್ ಆರ್ ಪಿ ಎಲ್ ಗೇಟ್ ಬಳಿ ಕಾರ್ಮಿಕರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಬಿ ಎಮ್ ಎಸ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು ಅವರು ಭಾಗವಹಿಸಿ, ದುರ್ಘಟನೆಯ ಕುರಿತು ಪ್ರಸ್ತಾಪಿಸಿ, ಮೃತ ಕಾರ್ಮಿಕರ ಕುಟುಂಬಕ್ಕೆ ನ್ಯಾಯ, ಗಾಯಗೊಂಡ ಕಾರ್ಮಿಕರಿಗೆ ಸಂಪೂರ್ಣ ಚಿಕಿತ್ಸೆ ಹಾಗೂ ಎಮ್ ಆರ್ ಪಿ ಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಖಚಿತಪಡಿಸುವಂತೆ ಸಂಸ್ಥೆಯ ಮುಂದೆ ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು.
ಬಿ ಎಮ್ ಎಸ್ ನ ಪ್ರಮುಖ ಬೇಡಿಕೆಗಳು
ಮೃತ ಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಬೇಕು, ಮೃತ ಕುಟುಂಬಕ್ಕೆ ನ್ಯಾಯಯುತ ಪರಿಹಾರ ಹಾಗೂ ಎಲ್ಲಾ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸಬೇಕು. ದುರ್ಘಟನೆಯಲ್ಲಿ ಗಾಯಗೊಂಡಿರುವ ಕಾರ್ಮಿಕರ ಸಂಪೂರ್ಣ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಸಂಸ್ಥೆಯೇ ಭರಿಸಬೇಕು ಹಾಗೂ ಮುಂದಿನ ಚಿಕಿತ್ಸೆಯ ಜವಾಬ್ದಾರಿಯನ್ನೂ ವಹಿಸಬೇಕು ಎಂದು ಒತ್ತಾಯಿಸಲಾಯಿತು.
ಇದರ ಜೊತೆಗೆ Contract ಹಾಗೂ Secondary Workforceಗೆ ಉದ್ಯೋಗ ಭದ್ರತೆ, ಆರೋಗ್ಯ ಭದ್ರತೆ ಮತ್ತು ಸಾಮಾಜಿಕ ಭದ್ರತೆ ಖಚಿತಪಡಿಸಬೇಕು. ಎಲ್ಲಾ Secondary Workforceಗೆ ಸಮಗ್ರ ಆರೋಗ್ಯ ವಿಮೆ (Mediclaim) ಜಾರಿಗೆ ತರಬೇಕು. ಕಾರ್ಮಿಕರ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, Safety Training, PPE, Work Permit, SOP ಹಾಗೂ Emergency Response ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಘಟನೆಯ ಕುರಿತು ಸಮಗ್ರ ಮತ್ತು ಪಾರದರ್ಶಕ ತನಿಖೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು BMS ಆಗ್ರಹಿಸಿತು.
ಬೇಡಿಕೆಗಳಿಗೆ MRPL ಆಡಳಿತ ಮಂಡಳಿಯ ಸ್ಪಂದನೆ
BMS ವತಿಯಿಂದ ಬೇಡಿಕೆಗಳನ್ನು ಮಂಡಿಸಿದ ಹಿನ್ನೆಲೆಯಲ್ಲಿ MRPLನ ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ BMS ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.
ಚರ್ಚೆಯ ಬಳಿಕ ಮೃತ ಕಾರ್ಮಿಕ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಒಟ್ಟು ₹1.20 ಕೋಟಿ ಪರಿಹಾರ ನೀಡುವುದಾಗಿ MRPL Management ಲಿಖಿತವಾಗಿ ತಿಳಿಸಿದೆ. MRPL Managing Director ಶ್ಯಾಮಪ್ರಸಾದ್ ಕಾಮತ್ ಅವರ ಸಹಿಯಿರುವ 01-10-2026ರ ಪತ್ರದಲ್ಲಿ ಪರಿಹಾರದ ವಿವರಗಳನ್ನು ನೀಡಲಾಗಿದೆ.
ಅದರಂತೆ:
₹90 ಲಕ್ಷ – MRPL ವತಿಯಿಂದ
₹10 ಲಕ್ಷ – GTLI
₹20 ಲಕ್ಷ – WCP
ಒಟ್ಟು ₹1.20 ಕೋಟಿ ಪರಿಹಾರ ನೀಡುವುದಾಗಿ ಸಂಸ್ಥೆ ತಿಳಿಸಿದೆ.
ಅದೇ ರೀತಿ, BMSನ ಪ್ರಮುಖ ಬೇಡಿಕೆಯಾದ ಮೃತ ಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವ ಕುರಿತು ಸಂಸ್ಥೆಯ ವತಿಯಿಂದ ಭರವಸೆ ನೀಡಲಾಗಿದೆ.
ದುರ್ಘಟನೆಯಲ್ಲಿ ಗಾಯಗೊಂಡಿರುವ ಕಾರ್ಮಿಕರಿಗೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದು ಹಾಗೂ ಅಗತ್ಯವಿರುವ ಮುಂದಿನ ಚಿಕಿತ್ಸೆಗೆ ಸಹಕಾರ ನೀಡುವ ಕುರಿತು ಸಂಸ್ಥೆಯ ವತಿಯಿಂದ ಭರವಸೆ ನೀಡಲಾಗಿದೆ.
Secondary Workforceಗೆ Mediclaim
Secondary Workforceಗೆ Mediclaim Insurance ಜಾರಿಗೆ ತರಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು MRPL Management ಲಿಖಿತವಾಗಿ ತಿಳಿಸಿದೆ. ಈ ಕುರಿತು ದಕ್ಷಿಣ ಕನ್ನಡ ಸಂಸದರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಸುಮಾರು ನಾಲ್ಕು ವಾರಗಳ ಅವಧಿಯಲ್ಲಿ ಅಂತಿಮಗೊಳಿಸುವುದಾಗಿ ಸಂಸ್ಥೆ ತಿಳಿಸಿದೆ.
BMS ವತಿಯಿಂದ ಮುಂದಿಟ್ಟ ಬೇಡಿಕೆಗಳಿಗೆ ಸಂಸ್ಥೆ ಸ್ಪಂದಿಸಿ ನೀಡಿರುವ ಲಿಖಿತ ಹಾಗೂ ಚರ್ಚೆಯಲ್ಲಿನ ಭರವಸೆಗಳು ನಿಗದಿತ ಅವಧಿಯಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು BMS ಒತ್ತಾಯಿಸಿದೆ.
“ಕಾರ್ಮಿಕನಿಗೆ ಉದ್ಯೋಗ ಮಾತ್ರವಲ್ಲ; ಉದ್ಯೋಗ ಭದ್ರತೆ, ಆರೋಗ್ಯ ಭದ್ರತೆ ಮತ್ತು ಸಾಮಾಜಿಕ ಭದ್ರತೆಯೂ ಅಗತ್ಯ. ಕಾರ್ಮಿಕರ ಜೀವ ಮತ್ತು ಸುರಕ್ಷತೆಯಲ್ಲಿ ಯಾವುದೇ ರಾಜಿ ಇರಬಾರದು. ಸಂಸ್ಥೆ ನೀಡಿರುವ ಭರವಸೆಗಳು ಸಂಪೂರ್ಣವಾಗಿ ಜಾರಿಯಾಗುವವರೆಗೆ ಕಾರ್ಮಿಕರ ಹಿತಾಸಕ್ತಿಗಾಗಿ BMS ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲಿದೆ” ಎಂದು BMS ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು ತಿಳಿಸಿದ್ದಾರೆ.
ಪ್ರತಿಭಟನೆಯ ನೇತೃತ್ವ
ಪ್ರತಿಭಟನೆಯಲ್ಲಿ BMS ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಅವರೊಂದಿಗೆ MRPL ಮಜ್ದೂರ್ ಸಂಘದ ಪ್ರಮುಖರಾದ ರೂಪೇಶ್ ರೈ, ಬಾಳಪ್ಪ, ದಯಾನಂದ, ದುರ್ಗಾಪ್ರಸಾದ್, ಜಯಕುಮಾರ್ ಶೆಟ್ಟಿ ಹಾಗೂ ಮಂಜುನಾಥ್ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನೆಯಲ್ಲಿ ಸ್ಥಳೀಯ ಕಾರ್ಮಿಕ ಮುಖಂಡರಾದ ಪ್ರಶಾಂತ್ ಮುಡೈಕೋಡಿ, ಸತ್ಯಜಿತ್, ವರುಣ್ ಚೌಟ, ಭರತ್ ರಾಜ್, ಸರಿತಾ ಶೆಟ್ಟಿ, ಲೋಕೇಶ್ ಬೊಲ್ಲಜ್ಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.













