31.7 C
ಪುತ್ತೂರು, ಬೆಳ್ತಂಗಡಿ
October 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧೀಜಿ–ಶಾಸ್ತ್ರಿ ಜಯಂತಿ ಆಚರಣೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶ್ರೀ ಮಂಜುನಾಥ ದಳದ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ, ಶಾಂತಿ ನಡಿಗೆ ಹಾಗೂ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜೊತೆಗೆ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಬುಲ್ ಬುಲ್ ಸ್ಕೌಟ್ ಗೈಡ್ ಹಾಗೂ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೇಮಲತಾ ಎಂ. ಆರ್. ಅವರ ಮಾರ್ಗದರ್ಶನದಲ್ಲಿ ಹಾಗೂ ಸ್ಕೌಟ್–ಗೈಡ್ ಸಂಯೋಜಕ ಶಿಕ್ಷಕಿ ಪ್ರಮೀಳಾ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು, ಸ್ಕೌಟ್–ಗೈಡ್ ಶಿಕ್ಷಕರು ಹಾಗೂ ಶಾಲೆಯ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಪೂರ್ಣ ಸಹಕಾರ ನೀಡಿದರು.

Related posts

ಮರೋಡಿಯಲ್ಲಿ ಶ್ರೀಗುರುಪೂಜೆ ಸಂಭ್ರಮ, ಸಾಧಕರಿಗೆ ಸನ್ಮಾನ

Suddi Udaya

ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಜೊಜಿಲಾ ದಿನಾಚರಣೆ : ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗಿ

Suddi Udaya

ಜಾನಪದ ಸ್ಫರ್ಧಾಕೂಟ: ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ಬಂದಾರು ಕುರಾಯ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಪುರುಷೋತ್ತಮ ನೇಮಕ

Suddi Udaya

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ: ಮುಂಡೂರು ಶಾಲೆಯ ಮುಖ್ಯ ಶಿಕ್ಷಕ ಕಲ್ಲೇಶಪ್ಪ ಕೆ.ಬಿ. ಆಯ್ಕೆ

Suddi Udaya

ಕೆಎಸ್‌ಎಮ್‌ಸಿಎ ಸಂಘಟನೆಗೆ ನೂತನ ನಿರ್ದೇಶಕರಾಗಿ ರೆ.ಫಾ. ಆದರ್ಶ್ ಜೋಸೆಫ್ ಪುದಿಯೆಡತ್ ನೇಮಕ

Suddi Udaya
error: Content is protected !!